ಮಡಿಕೇರಿ, ಮಾ. ೨: ಕರ್ನಾಟಕ ಸರ್ಕಾರ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವೀರಾಜಪೇಟೆಯ ಆಂತರಿಕ ಗುಣಮಟ್ಟ ಭರವಸಾ ಕೋಶ, ಇತಿಹಾಸ ವಿಭಾಗ, ರಾಷ್ಟಿçÃಯ ಸೇವಾ ಯೋಜನೆ ಮತ್ತು ಪುರಾತತ್ವ ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆ ಮಡಿಕೇರಿ ಇವರ ಸಹಯೋಗದೊಂದಿಗೆ ತಾ. ೩ ರಂದು (ಇಂದು) ವೀರಾಜಪೇಟೆಯ ಐತಿಹಾಸಿಕ ಸ್ಥಳÀಗಳಿಗೆ ಪಾರಂಪರಿಕ ನಡಿಗೆ ಹಾಗೂ ಬಿಳುಗುಂದ ಗ್ರಾಮದ ಪನ್ನೆಮ್ಮ ದೇವಿ ಮತ್ತು ಭಗವತಿ ದೇವಸ್ಥಾನದ ಸಮೀಪದ ದೊಡ್ಡವೀರರಾಜ ಮಹಾದ್ವಾರ ಸ್ವಚ್ಛತಾ ಕಾರ್ಯ ನಡೆಯಲಿದೆ.