ಮಡಿಕೇರಿ, ಮಾ. ೨: ಮಾ. ೫ ರಂದು ಉಚಿತ ಕಿಡ್ನಿ ರೋಗ ತಪಾಸಣಾ ಶಿಬಿರವನ್ನು ನೆಲ್ಯಹುದಿಕೇರಿಯಲ್ಲಿ ಆಯೋಜಿಸಲಾಗಿದೆ ಎಂದು ಶಿಹಾಬ್ ತಂಙಳ್ ಸೆಂಟರ್ ಫಾರ್ ಹ್ಯೂಮಾನಿಟಿಯ ಪ್ರಮುಖರು ತಿಳಿಸಿದ್ದಾರೆ.
ಪಾಲಿಯೇಟೀವ್ ಕೇರ್ ಹಾಗೂ ರಕ್ತದಾನ ಜಾಗೃತಿಯ ಅಂಗವಾಗಿ ಶಿಹಾಬ್ ತಂಙಳ್ ಸೆಂಟರ್ ಫಾರ್ ಹ್ಯೂಮಾನಿಟಿ ಹಾಗೂ ಕೊಂಡೋಟಿ ಶಿಹಾಬ್ ತಂಙಳ್ ಚಾರಿಟೇಬಲ್ ಡಯಾಲಿಸಿಸ್ ರಿಸರ್ಚ್ ಮತ್ತು ರಿಹಾಬಿಟೇಷನ್ ಸೆಂಟರ್‌ನ ಸಹಕಾರದೊಂದಿಗೆ ನೆಲ್ಯಹುದಿಕೇರಿಯ ಶಾದಿ ಮಹಲ್‌ನಲ್ಲಿ ತಾ. ೫ ರಂದು ಬೆಳಿಗ್ಗೆ ೮:೩೦ ರಿಂದ ಮಧ್ಯಾಹ್ನ ೧೨:೩೦ ರ ವರೆಗೆ ಉಚಿತ ಕಿಡ್ನಿ ರೋಗ ತಪಾಸಣಾ ಶಿಬಿರ ನಡೆಯಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಘಟನೆಯ ಪ್ರಮುಖರಾದ ಷಂಶುದ್ದೀನ್ ತಿಳಿಸಿದ್ದಾರೆ.