ಮಡಿಕೇರಿ, ಮಾ. ೨: ಉಕ್ರೇನಿನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳಿಂದ ಸೂಕ್ತ ಸ್ಪಂದನ ಸಿಗದೆ ಇದ್ದ ಕಾರಣ ಉಕ್ರೇನಿನ ಪೂರ್ವ ಭಾಗದಲ್ಲಿ ವಿವಿಧೆಡೆ ವ್ಯಾಸಂಗ ಮಾಡುತ್ತಿದ್ದ ಕೊಡಗಿನವರೂ ಸೇರಿದಂತೆ ಸುಮಾರು ೧೬ ಭಾರತೀಯರು ತಾವೇ ಸ್ವತಃ ಖಾರ್ಕಿವ್ನಿಂದ ರೈಲಿನ ಮೂಲಕ ಉಕ್ರೇನಿನ ಪಶ್ಚಿಮ ಗಡಿ ಲೆವಿವ್ ತಲುಪಿದ್ದು ಶೀಘ್ರದಲ್ಲಿ ಪೋಲ್ಯಾಂಡ್ ರಾಷ್ಟç ತಲುಪಲಿದ್ದಾರೆ. ಈ ಮೂಲಕ ಅಲ್ಲಿಂದ ವಿಮಾನದಲ್ಲಿ ಭಾರತ ತಲುಪಲಿದ್ದಾರೆ ಎಂದು ತಿಳಿದುಬಂದಿದೆ.ಉಕ್ರೇನಿನ ಪಶ್ಚಿಮ ಭಾಗದಲ್ಲಿದ್ದ ಭಾರತೀಯ ವಿದ್ಯಾರ್ಥಿಗಳು ಸುಲಭವಾಗಿ ಪಶ್ಚಿಮ ಗಡಿಯಲ್ಲಿನ ನೆರೆಯ ರಾಷ್ಟçಗಳಾದ ಹಂಗಾರಿ, ಪೋಲ್ಯಾಂಡ್ ತಲುಪಿ ವಿಮಾನಗಳ ಮೂಲಕ ಸ್ವದೇಶಕ್ಕೆ ತೆರಳುತ್ತಿದ್ದಾರೆ. ಆದರೆ ಪೂರ್ವ ದಿಕ್ಕಿನಲ್ಲಿ ಉದ್ವಿಗ್ನ ಪರಿಸ್ಥಿತಿ ಎದುರಾಗಿದ್ದು, ವಿದ್ಯಾರ್ಥಿಗಳಿದ್ದ ಬಂಕರ್ ಹೊರಗಡೆಯೇ ಬಾಂಬ್ ಸ್ಫ್ಪೋಟದ ಶಬ್ದಗಳು ಕೇಳುತ್ತಿದ್ದುದಾಗಿ ಕೊಡಗಿನವರಾದ ಶೀತಲ್ ಸಂಪತ್ ಅವರು ಇತ್ತೀಚೆಗೆ ತಮ್ಮ ಅನುಭವ ಹಂಚಿಕೊAಡಿದ್ದರು. ಈ ಮಧ್ಯೆ ರಷ್ಯಾ ಸೈನಿಕರ ಸ್ಫೋಟಕ ಹಾಗೂ ಗುಂಡಿನ ದಾಳಿಗೆ ತಾ.೧ ರಂದು ಬಲಿಯಾದ ಭಾರತೀಯ ವಿದ್ಯಾರ್ಥಿಯೂ ಖಾರ್ಕಿವ್ನಲ್ಲೇ ವ್ಯಾಸಂಗ ಮಾಡುತ್ತಿದ್ದು, ಬಂಕರ್ನಿAದ ಹೊರಹೋಗಿ ಆಹಾರ ಖರೀದಿಸುವ ಸಂದರ್ಭ ಮೃತಪಟ್ಟಿದ್ದರು. ಇವೆಲ್ಲವನ್ನು ಗಮನಿಸಿದ ಖಾರ್ಕಿವ್ನಲ್ಲಿದ್ದ ಭಾರತೀಯರು ಉಕ್ರೇನಿನ ಭಾರತೀಯ ರಾಯಭಾರ ಕಚೇರಿ ಸಂಪರ್ಕಿಸಲು ಪ್ರಯತ್ನಿಸುತ್ತಿದ್ದುದಾಗಿ, ಕೊಡಗಿನ ವಿದ್ಯಾರ್ಥಿಗಳ ಕೆಲ ಪೋಷಕರು ‘ಶಕ್ತಿ’ಯೊಂದಿಗೆ ತಮ್ಮ ಅನುಭವ ಹಂಚಿಕೊAಡಿದ್ದು, ಸೂಕ್ತ ಸ್ಪಂದನ ದೊರಕದಿರುವ ಬಗ್ಗೆ ವಿದ್ಯಾರ್ಥಿಗಳು ಅಸಮಾಧಾನಗೊಂಡಿರುವುದಾಗಿ ಹೇಳಿದರು. ರಾಯಭಾರ ಕಚೇರಿ ಅಧಿಕಾರಿಗಳು ಕರೆ ಸರಿಯಾಗಿ ಸ್ವೀಕರಿಸುತ್ತಿರಲಿಲ್ಲ ಎಂಬುದಾಗಿಯೂ ಹಲವರು ದೂರಿದ್ದಾರೆ.
ಖಾರ್ಕಿವ್ನಲ್ಲೇ ಇದ್ದರೆ ಅಪಾಯ ತಪ್ಪಿದ್ದಲ್ಲ ಎಂದು ನಿಶ್ಚಯಿಸಿದ ವಿದ್ಯಾರ್ಥಿಗಳು ಸ್ವತಃ ತಾವೇ ಗುಂಪುಗಳನ್ನು ರಚಿಸಿ ರೈಲಿನ ಮೂಲಕ ಪಶ್ಚಿಮದ ಗಡಿಗೆ ಪಯಣ ಪ್ರಾರಂಭಿಸಿದ್ದು ಇದೀಗ ಸುರಕ್ಷಾ ಸ್ಥಳದಲ್ಲಿದ್ದಾರೆ. ಖಾರ್ಕಿವ್ನಲ್ಲಿದ್ದ ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳೂ ರೈಲು ಮೂಲಕ ೧೬ ಮಂದಿ ಭಾರತೀಯರ ಗುಂಪಿನೊAದಿಗೆ ತಾ.೨ ರ ಬೆಳಿಗ್ಗೆ ಪಶ್ಚಿಮ ಗಡಿಯಲ್ಲಿನ ಲೆವಿವ್ ಎಂಬ ಪ್ರದೇಶ ತಲುಪಿರುವುದಾಗಿ ತಿಳಿದುಬಂದಿದೆ. ಲೆವಿವ್ನಿಂದ ಬಸ್ ಮೂಲಕ ಪೋಲ್ಯಾಂಡ್
(ಮೊದಲ ಪುಟದಿಂದ) ರಾಷ್ಟçಕ್ಕೆ ಪಯಣ ಬಯಸಿದ್ದು, ಅತಿ ಶೀಘ್ರದಲ್ಲೇ ಪೋಲ್ಯಾಂಡ್ ತಲುಪಲಿದ್ದಾರೆ. ಇಲ್ಲಿಂದ ವಿಮಾನದ ಮೂಲಕ ಭಾರತಕ್ಕೆ ಮರಳಲಿದ್ದಾರೆ.
೧,೧೦೦ ಕಿ.ಮೀ ಉಚಿತ ರೈಲು ಪ್ರಯಾಣ
ಉಕ್ರೇನ್ ಪೂರ್ವ ದಿಕ್ಕಿನಲ್ಲಿರುವ ಖಾರ್ಕಿವ್ನಿಂದ ಪಶ್ಮಿಮ ದಿಕ್ಕಿನ ಲೆವಿವ್ ಎಂಬ
ಸುರಕ್ಷಿತ ಸ್ಥಳಕ್ಕೆ ರೈಲು ಪ್ರಯಾಣ ಬೆಳೆಸಿದ ಕೊಡಗಿನವರೂ ಸೇರಿದಂತೆ ಒಟ್ಟು ೧೬ ಭಾರತೀಯ ವಿದ್ಯಾರ್ಥಿಗಳು ೧,೧೦೦ ಕಿ.ಮೀ ಸವಾರಿ ನಡೆಸಬೇಕಾಗಿದ್ದು, ಉಕ್ರೇನ್ ರಾಜಧಾನಿ ಕ್ವಿವ್ ಮೂಲಕದ ಮಾರ್ಗದಿಂದಲೇ ಚಲಿಸಬೇಕಾಗಿತ್ತು. ಕ್ವಿವ್ನಲ್ಲಿ ೨ ದಿನಗಳಿಂದ ಯುದ್ಧದ ಬಿಸಿ ಹೆಚ್ಚಿದ್ದು, ರಾಜಧಾನಿಯನ್ನು ಸೆರೆಹಿಡಿಯಲು ರಷ್ಯಾ ಎಲ್ಲಾ ರೀತಿಯ ಕುತಂತ್ರ ನಡೆಸುತ್ತಿದೆ. ಆದರೂ ಈ ಎಲ್ಲಾ ವಿದ್ಯಾರ್ಥಿಗಳು ಯಾವುದೇ ಅಪಾಯವಿಲ್ಲದೆ ಪಶ್ಚಿಮ ಭಾಗವಾದ ಲೆವಿವ್ ತಲುಪಿದ್ದಾರೆ. ನಂತರ ಇಲ್ಲಿಂದ ಬಸ್ ಮೂಲಕ ಪೋಲ್ಯಾಂಡ್ ದೇಶ ತಲುಪಲಿದ್ದು, ವಿಮಾನದಲ್ಲಿ ಭಾರತ ತಲುಪಲಿದ್ದಾರೆ. ಭಾರತೀಯ ವಾಯಪಡೆಯ ವಿಮಾನವೂ ಭಾರತೀಯರ ಸುರಕ್ಷಾ ಸ್ಥಳಾಂತರಕ್ಕೆ ಕೈಜೋಡಿಸಿದೆ.
ಯುದ್ಧದ ನಡುವೆಯೂ ಭಾರತೀಯರಿಗೆ ೧,೧೦೦ ಕಿ.ಮೀ ಪಯಣ ಉಚಿತವಾಗಿ ಕಲ್ಪಿಸಿಕೊಟ್ಟ ಉಕ್ರೇನ್ನ ಕಾರ್ಯವನ್ನು ಗೋಣಿಕೊಪ್ಪ ಮೂಲದ ಪ್ರಸ್ತುತ ಖತಾರ್ನಲ್ಲಿ ನೆಲೆಸಿರುವ ಬಲ್ಲಾಡಿಚಂಡ ಸಂಪತ್ ಅವರು ಸ್ಮರಿಸಿಕೊಂಡರು. ಇವರ ಪುತ್ರಿ ಶೀತಲ್ ಅವರು ಕೂಡ ೧೬ ಮಂದಿ ಗುಂಪಿನೊAದಿಗೆ ಸುರಕ್ಷಿತವಾಗಿ ಲೆವಿವ್ ತಲುಪಿದ್ದಾರೆ.
ಖಾರ್ಕಿವ್ನಲ್ಲಿ ವ್ಯಾಸಂಗ ಮಾಡುತ್ತಿರುವ ಮುಳ್ಳುಸೋಗೆಯ ಲಿಖಿತ್ ಕೊರಗಪ್ಪ ಅವರ ಸಹೋದರ ಕಾರ್ತಿಕ್ ಅವರು ತಮ್ಮ ಅಭಿಪ್ರಾಯ ಹಂಚಿಕೊAಡಿದ್ದು, ರಾಯಭಾರ ಕಚೇರಿಯಿಂದ ಸ್ಪಂದನ ದೊರಕದಿದ್ದ ಕಾರಣ ತನ್ನ ಸಹೋದರ ಲಿಖಿತ್ ಇತರ ೧೫ ಮಂದಿ ಭಾರತೀಯರೊಂದಿಗೆ ರೈಲಿನ ಮೂಲಕ ಲೆವಿವ್ ತಲುಪಿದ್ದು, ಅಲ್ಲಿ ಸ್ಥಳೀಯರ ಸಹಕಾರದಿಂದ ಬಸ್ ಮೂಲಕ ಪೋಲ್ಯಾಂಡ್ ತಲುಪುವುದಾಗಿ ಹೇಳಿದರು.
ಉಕ್ರೇನಿನ ನೆರೆಯ ರಾಷ್ಟçಗಳಿಗೆ ತಲುಪಿದ ಬಳಿಕವಷ್ಟೇ ಭಾರತೀಯರಿಗೆ ಕೇಂದ್ರ ಸರಕಾರದಿಂದ ಸಹಾಯ ದೊರಕುತ್ತಿದೆ. ಉಕ್ರೇನಿನ ಪೂರ್ವದಿಂದ ಪಶ್ಚಿಮಕ್ಕೆ ವಿದ್ಯಾರ್ಥಿಗಳು ತಾವೇ ವ್ಯವಸ್ಥೆ ಮಾಡಿಕೊಂಡು ತಲುಪಬೇಕಾದ ಪರಿಸ್ಥಿತಿ ಇದೆ ಎಂದು ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ಕೆ ಮಂಜುನಾಥ್ ಕುಮಾರ್ ಅವರು ತಿಳಿಸಿದ್ದಾರೆ. ಅವರ ಪುತ್ರ ಚಂದನ್ ಗೌಡ ಅವರು ಕೂಡ ಖಾರ್ಕಿವ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದು, ೧೬ ಭಾರತೀಯ ವಿದ್ಯಾರ್ಥಿಗಳ ತಂಡದಲ್ಲಿ ಒಬ್ಬರಾಗಿದ್ದಾರೆ.
ಖಾರ್ಕಿವ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಜಿಲ್ಲೆಯ ಕೂಡ್ಲೂರು ನಿವಾಸಿ ಅಕ್ಷಿತಾ ಅಕ್ಕಮ್ಮ ಅವರು ತಾ.೨ ರ ಮಧ್ಯಾಹ್ನ ಖಾರ್ಕಿವ್ನಿಂದ ರೈಲು ಮೂಲಕ ಲೆವಿವ್ಗೆ ಪಯಣ ಬಳಸಿದ್ದು, ಶೀಘ್ರದಲ್ಲೇ ಲೆವಿವ್ ತಲುಪಲಿದ್ದಾರೆ.
ಕೊಡಗಿಗೆ ತಲುಪಿದ ವಿದ್ಯಾರ್ಥಿನಿ ಮಧೀಹ
ಉಕ್ರೇನಿನ ಉಜೊರೋಡ್ ರಾಷ್ಟಿçÃಯ ವಿಶ್ವವಿದ್ಯಾಲಯದಲ್ಲಿ ಎಮ್.ಬಿ.ಬಿ.ಎಸ್ ವ್ಯಾಸಂಗ ಮಾಡುತ್ತಿದ್ದ ಗೋಣಿಕೊಪ್ಪ ನಿವಾಸಿ ಗಫೂರ್ ಅವರ ಪುತ್ರಿ ಮಧೀಹ ಎಮ್.ಜಿ ಅವರು ತಾ.೧ ರಂದು ಹಂಗಾರಿ ರಾಷ್ಟçದಲ್ಲಿ ಭಾರತ ಸರಕಾರ ವ್ಯವಸ್ಥೆ ಮಾಡಿದ್ದ ವಿಮಾನದ ಮೂಲಕ ನವದೆಹಲಿ ತಲುಪಿ ಅಲ್ಲಿಂದ ಕರ್ನಾಟಕ ಸರಕಾರದ ಸಹಾಯದಿಂದ ಬೆಂಗಳೂರಿಗೆ ವಿಮಾನದ ಮೂಲಕ ಪ್ರಯಾಣಿಸಿದ್ದು, ಅಲ್ಲಿಂದ ತಾ.೨ ರಂದು ಗೋಣಿಕೊಪ್ಪ ತಲುಪಿದ್ದಾರೆ.
ಇನ್ನುಳಿದಂತೆ ಪೊನ್ನಂಪೇಟೆಯ ನಿವಾಸಿ ಉಕ್ರೇನಿನ ಕ್ವಿವ್ನಲ್ಲಿ ಎಮ್.ಬಿ.ಬಿ.ಎಸ್ ವ್ಯಾಸಂಗ ಮಾಡುತ್ತಿದ್ದ ಸಿನಿಯಾ ವಿ.ಜೆ ಹಾಗೂ ಇವಾನೊಫ್ರಾಸಿಸ್ಕೋ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಜಿಲ್ಲೆಯ ಆಲಿಶಾ ಸಯದ್ ಆಲಿ ನವದೆಹಲಿ ತಲುಪಿದ್ದಾರೆ.
ಅಮ್ಮತ್ತಿ ಹೊಸೂರಿನ ನಿವಾಸಿ ಎಮ್.ಪಿ ನಿರ್ಮಲಾ ಅವರು ತಾ.೧ ರ ಮಧ್ಯರಾತ್ರಿ ಉಕ್ರೇನಿನ ಪಶ್ಚಿಮ ದಿಕ್ಕಿನಲ್ಲಿರುವ ಹಂಗಾರಿ ರಾಷ್ಟç ತಲುಪಿದ್ದು, ಸದ್ಯದಲ್ಲೆ ವಿಮಾನದ ಮೂಲಕ ಭಾರತಕ್ಕೆ ವಾಪಸ್ಸಾಗಲಿದ್ದಾರೆ ಎಂದು ಅವರ ತಾಯಿ ರಜನಿ ಅವರು ಮಾಹಿತಿ ನೀಡಿದ್ದಾರೆ.