ಮಡಿಕೇರಿ, ಮಾ.೨: ಮಹಾಶಿವರಾತ್ರಿ ಉತ್ಸವ ಜಿಲ್ಲೆಯ ವಿವಿಧೆಡೆ ಪೂಜೆ ಪುನಸ್ಕಾರ, ಧಾರ್ಮಿಕ ಕಾರ್ಯಕ್ರಮ, ಅನ್ನಸಂತರ್ಪಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶ್ರದ್ಧಾಭಕ್ತಿಯಿಂದ ನಡೆಯಿತು. ಪ್ರಮುಖವಾಗಿ ಈಶ್ವರ ದೇವಾಲಯಗಳಲ್ಲಿ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಮಾತ್ರವಲ್ಲದೇ, ವಿವಿಧ ಸಂಸ್ಥೆಗಳಿAದ ಹಾಗೂ ಮನೆ ಮನೆಗಳಲ್ಲಿ ಶಿವನಸ್ತುತಿ ಕಂಡು ಬಂತು.
ಮಡಿಕೇರಿಯ ಓಂಕಾರೇಶ್ವರ ದೇವಾಲಯ, ಮೇಕೇರಿಯ ಗೌರಿಶಂಕರ ದೇಗುಲ, ಶನಿವಾರಸಂತೆಯ ಮಳೆಮಲ್ಲೇಶ್ವರ, ಪೇರ್ಮಾಡು ಈಶ್ವರ ಸನ್ನಿಧಿ, ಇರ್ಪು ರಾಮೇಶ್ವರ ಸೇರಿದಂತೆ ಹಲವು ದೇವಾಲಯಗಳಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಗಳು ನೆರವೇರಿದವು. ಓಂಕಾರೇಶ್ವರ ಸನ್ನಿಧಿ, ರಾಜೇಶ್ವರಿ ದೇವಾಲಯ, ವೀರಭದ್ರ ಮುನೀಶ್ವರ ದೇವಸ್ಥಾನ, ಬಸವೇಶ್ವರ ಸನ್ನಿಧಿ, ವೈದಿಕ ಭಕ್ತ ವಲಯದಿಂದ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಶತಮಾನೋತ್ಸವ ಭವನ, ಕನ್ನಿಕಾ ಪರಮೇಶ್ವರಿ ಸನ್ನಿಧಿಯಲ್ಲಿ ಶಿವರಾತ್ರಿ ಅಂಗವಾಗಿ ಪೂಜೆ, ಅಭಿಷೇಕಗಳು, ರುದ್ರಪಠಣ ನೆರವೇರಿತು. ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದಲ್ಲಿಯೂ ಶಿವರಾತ್ರಿ ಆಚರಣೆ ನಡೆಯಿತು. ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಭಕ್ತಾದಿಗಳು ಶಿವನ ದರ್ಶನದೊಂದಿಗೆ ಪ್ರಸಾದ ಸ್ವೀಕರಿಸಿ ಪುನೀತರಾದರು.
ಮುಳ್ಳೂರು: ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಸೋಮವಾರಪೇಟೆ ತಾಲೂಕಿನ ಆಲೂರುಸಿದ್ದಾಪುರ ಗ್ರಾ.ಪಂ.ವ್ಯಾಪ್ತಿಯ ಮಾಲಂಬಿ ಗ್ರಾಮದಲ್ಲಿರುವ ಪುರಾಣ ಪ್ರಸಿದ್ಧ ಮಾಲಂಬಿ ಮಳೆ ಮಲ್ಲೇಶ್ವರ ಬೆಟ್ಟದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಬೆಟ್ಟದ ಮೇಲಿರುವ ಶ್ರೀ ಮಳೆ ಮಲ್ಲೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ ೭ ಗಂಟೆಯಿAದ ಮಧ್ಯಾಹ್ನ ೨.೩೦ ಗಂಟೆವರೆಗೆ ಶ್ರೀ ಮಲ್ಲೇಶ್ವರ ದೇವರು, ಶ್ರೀ ಗಣಪತಿ ಮತ್ತು ಶ್ರೀ ಬಸವಣ್ಣ ದೇವರುಗಳಿಗೆ ವಿಶೇಷ ಪೂಜಾ ವಿಧಿ ವಿಧಾನ ನೆರವೇರಿಸಲಾಯಿತು. ಬೆಳಗ್ಗೆ ೭ ಗಂಟೆಯಿAದ ಮಧ್ಯಾಹ್ನ ೩ ಗಂಟೆಯವರೆಗೂ ವಿವಿಧ ಕಡೆಗಳಿಂದ ಬಂದ ಭಕ್ತರು ಬೆಟ್ಟವನ್ನೇರಿದರು. ಶಿವರಾತ್ರಿ ಹಬ್ಬದ ಪ್ರಯುಕ್ತ ಭಕ್ತರಿಗೆ (ಮೊದಲ ಪುಟದಿಂದ) ಅನ್ನಸಂತರ್ಪಣೆ ನಡೆಯಿತು, ಬೆಟ್ಟವನ್ನೇರುವ ಸಂದರ್ಭ ಭಕ್ತರಿಗೆ ಬೆಟ್ಟಕ್ಕೆ ಹೋಗುವ ದಾರಿಯಲ್ಲಿ ಮಜ್ಜಿಗೆ, ಕುಡಿಯುವ ನೀರನ್ನು ವಿತರಿಸಲಾಯಿತು.
ಅರ್ಚಕರಾದ ಭಾರತೀಶ್, ಲಿಂಗರಾಜ್, ಸುರೇಶ್, ಸುಬ್ಬಣ್ಣ ಪೂಜಾ ವಿಧಿ ವಿಧಾನ ನೆರವೇರಿಸಿದರು. ಕಾರ್ಯಕ್ರಮದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಡಿ.ಬಿ.ಧರ್ಮಪ್ಪ, ಪ್ರಮುಖರಾದ ಎಚ್.ವಿ.ದಿವಾಕರ್, ಎಚ್.ವಿ.ಸುರೇಶ್, ಎಂ.ಇ.ವೆAಕಟೇಶ್, ಹೆಚ್.ಕೆ.ಸದಾಶಿವ, ಎಚ್.ಕೆ.ಹಾಲಪ್ಪ, ಹೂವಯ್ಯ, ಎಚ್.ಎಸ್.ವಸಂತ್, ಯಶ್ವಂತ್, ಮಹಂತೇಶ್, ಶಂಕರಪ್ಪ, ಸ್ವಾಗತ್, ದೀಪಕ್, ಜಿತು ಮುಂತಾದವರು ಹಾಜರಿದ್ದರು. ಶನಿವಾರಸಂತೆ: ಸಮೀಪದ ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಗಳಿ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ಗವಿಸಿದ್ಧೇಶ್ವರ ಸ್ವಾಮಿ ೩೪ನೇ ಜಾತ್ರಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.
ಬೃಹತ್ ಗಾತ್ರದ ಏಕಶಿಲೆಯ ಕೆಳಭಾಗದ ಗವಿಯೊಳಗಿನ ಗವಿಸಿದ್ಧೇಶ್ವರ ಸ್ವಾಮಿಗೆ, ಉದ್ಭವ ಲಿಂಗಕ್ಕೆ ಅರ್ಚಕ ಲಿಂಗರಾಜ್ ಅವರು ಅಭಿಷೇಕ, ಷೋಡಶೋಪಚಾರ, ಹಣ್ಣುಕಾಯಿ ನೈವೇದ್ಯ ಅರ್ಪಿಸಿ ಮಹಾಮಂಗಳಾರತಿ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ಜಿಲ್ಲೆ, ನೆರೆ ಜಿಲ್ಲೆಯ ವಿವಿಧೆಡೆಯಿಂದ ಬಂದ ಭಕ್ತರು ಪೂಜೆ ಹಾಗೂ ಜಾತ್ರೆಯಲ್ಲಿ ಪಾಲ್ಗೊಂಡರು. ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಮಧ್ಯಾಹ್ನದ ನಂತರ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಸರಳ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ಜಾನಪದ ಕಲಾವಿದ ಬೆಸೂರು ಶಾಂತೇಶ್ ಹಾಗೂ ಲೇಖಕಿ ಕೀರ್ತಿ ಜನಪದ ಗೀತೆಗಳನ್ನು ಹಾಡಿ ರಂಜಿಸಿದರು. ವಿದ್ಯಾರ್ಥಿಗಳು ಸ್ವರಚಿತ ಕವನ ವಾಚನ ಮಾಡಿ, ವಿಚಾರ ಮಂಥನದಲ್ಲಿ ಪಾಲ್ಗೊಂಡರು. ಹಾಸನದ ಶಾರದಾ ಕಲಾತಂಡದವರಿAದ ಭಕ್ತಿಗೀತೆ, ಭಾವಗೀತೆ ಗೋಷ್ಠಿ ನಡೆಯಿತು. ಗವಿಸಿದ್ಧೇಶ್ವರ ಸೇವಾ ಸಮಿತಿ ಅಧ್ಯಕ್ಷ ಪ್ರಸನ್ನ, ಕಾರ್ಯದರ್ಶಿ ತಿಮ್ಮಯ್ಯ, ಸದಸ್ಯರು ಹಾಗೂ ಪ್ರಮುಖರಾದ ಲಿಂಗರಾಜು, ರಾಮು, ಇತರರು ಪೂಜಾ ಕಾರ್ಯಕ್ರಮಗಳಲ್ಲಿ ಹಾಜರಿದ್ದರು.ಮಡಿಕೇರಿಯ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ವೈದಿಕ ಬಂಧು ವಲಯದಿಂದ ರುದ್ರಪಠಣ, ಅರ್ಚಕ ವೆಂಕಟರಮಣ ಭಟ್ ಅವರಿಂದ ರುದ್ರಾಭಿಷೇಕ, ದೇವಾಲಯ ಟ್ರಸ್ಟ್ ಸದಸ್ಯರಿಂದ ವಿಶೇಷ ಪ್ರಾರ್ಥನೆಯೊಂದಿಗೆ ಶಿವರಾತ್ರಿಯನ್ನು ಆಚರಿಸಲಾಯಿತು. ಸೋಮವಾರಪೇಟೆ: ಮಹಾಶಿವರಾತ್ರಿ ಹಬ್ಬದಂದು ಗ್ರಾಮೀಣ ಪ್ರದೇಶದಲ್ಲಿ ಮಕ್ಕಳು ಮನೆಮನೆಗೆ ತೆರಳಿ ಅಕ್ಕಿ, ಧವಸ, ಕಾಣಿಕೆಗಳನ್ನು ಸಂಗ್ರಹಿಸುವ ಮೂಲಕ ಸಂಭ್ರಮದಿAದ ಹಬ್ಬವನ್ನು ಆಚರಿಸಿದರು. ಸಂಜೆಯಾಗುತ್ತಲೇ ಹರಿವಾಣಗಳಲ್ಲಿ ದೇವರ ಭಾವಚಿತ್ರ, ಅಕ್ಕಿಯನ್ನಿಟ್ಟು ದೀಪಬೆಳಗಿ ಮನೆಮನೆಗೆ ತೆರಳಿ ಕಾಣಿಕೆಗಳನ್ನು ಸಂಗ್ರಹಿಸಿದರು.
ಮಡಿಕೇರಿ: ಮಡಿಕೇರಿಯ ಕೊಡಗು ವೈದಿಕ ಭಕ್ತ ವಲಯದಿಂದ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಶತಮಾನ ಭವನದಲ್ಲಿ ಪ್ರಥಮ ವರ್ಷದ ಶಿವರಾತ್ರಿಯನ್ನು ಆಚರಿಸಲಾಯಿತು. ವೈಭವ ತಂಡದ ಆಶ್ರಯದಲ್ಲಿ ರಾತ್ರಿ ನಡೆದ ಕಾರ್ಯಕ್ರಮಗಳ ಪ್ರಾರಂಭದಲ್ಲಿ ವೈದಿಕ ಬಂಧು ವಲಯದಿಂದ ಶ್ರೀ ಗಣಪತಿ ಅಥರ್ವ ಶೀರ್ಷ, ಪುರುಷಸೂಕ್ತ, ದುರ್ಗಾಸೂಕ್ತ ಹಾಗೂ ನಾರಾಯಣ ಸೂಕ್ತಗಳ ಪಠಣ ಮತ್ತು ರುದ್ರಾಭಿಷೇಕ ಪೂರ್ವಕ ಶಿವಪೂಜೆ ನಡೆಯಿತು. ಶ್ರುತಿಲಯ ತಂಡದಿAದ ಭಜನಾ ಕಾರ್ಯಕ್ರಮ ನಡೆಯಿತು.
ಕುಶಾಲನಗರದ ಗಣಪತಿ ಭಟ್ ಅವರಿಂದ ಶಿವರಾತ್ರಿ ಮಹತ್ವ ಚಿಂತನೆ, ಮಡಿಕೇರಿಯ ಸಂಚಾರಿ ಪೊಲೀಸ್ ಹೆಡ್‌ಕಾನ್ಸ್ಟೇಬಲ್ ಸುಧೀರ್ ಕುಮಾರ್ ಹೊಳ್ಳ ಅವರಿಂದ ಸಾಮಾಜಿಕ ಕಳಕಳಿಯಲ್ಲಿ ಆರಕ್ಷಕ ವೃತ್ತಿ ಎಂಬ ಅನುಭವ ಉಪನ್ಯಾಸಗಳು ನಡೆದವು. ರಾಜ್ಯ ಬ್ರಾಹ್ಮಣ ಸಮಾಜಕ್ಕೆ ಆಯ್ಕೆಯಾದ ಮಡಿಕೇರಿಯ ಮೂಡಾ ಅಧ್ಯಕ್ಷ ಕೆ.ಎಸ್. ರಮೇಶ್ ಹೊಳ್ಳ, ಮಡಿಕೇರಿ ನಗರಸಭಾ ಸದಸ್ಯರಾಗಿ ನಾಮ ನಿರ್ದೇಶನಗೊಂಡ ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಕಾರ್ಯದರ್ಶಿ ಬಿ.ಕೆ. ಅರುಣ್ ಕುಮಾರ್, ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಆಯ್ಕೆಗೊಂಡ ಎಸ್.ಡಿ. ವಿಜೇತ ಇವರುಗಳಿಗೆ ಸಾಮಾಜಿಕ ಸೇವೆಗಾಗಿ ಲೋಕಶಂಕರ ಅಭಿನಂದನಾ ಸನ್ಮಾನವನ್ನು ನಡೆಸಲಾಯಿತು. ಡಾ. ರಾಜಾರಾಮ್ ಅವರಿಂದ ಸ್ವಾಗತ, ಎಂ. ಈಶ್ವರ ಭಟ್ ಅವರಿಂದ ವಂದನಾರ್ಪಣೆ ನಡೆಯಿತು.*ಗೋಣಿಕೊಪ್ಪ: ಗೋಣಿಕೊಪ್ಪ ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ಸಾಮೂಹಿಕ ಶತಾರುದ್ರಾಭಿಷೇಕ ನಡೆಯಿತು. ದೇವಸ್ಥಾನದ ವತಿಯಿಂದ ಬೆಳಿಗ್ಗೆ ೭ ಗಂಟೆಗೆ ಗಣಪತಿ ಹೋಮ ನಂತರ ದೇವಸ್ಥಾನ ಪ್ರದಾನ ಅರ್ಚಕ ಸೀತಾರಾಮ್ ನೇತೃತ್ವದಲ್ಲಿ ಸಾಮೂಹಿಕ ಶತಾರುದ್ರಾಭಿಷೇಕ, ಮಹಾ ಮಂಗಳಾರತಿ, ಬಿಲ್ವ ಪತ್ರಾರ್ಚನೆ, ಪುಷ್ಪಾರ್ಚನೆ, ಎಳನೀರಾಭಿಷೇಕ ಸೇವೆಗಳು ನಡೆದವು.
ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಮನೆಯಪಂಡ ಮೇಜರ್ ಬೋಪಣ್ಣ, ಪದಾಧಿಕಾರಿಗಳಾದ ಜಪ್ಪೆಕೊಡಿ ಉತ್ತಪ್ಪ, ವಿ.ಟಿ. ವಾಸು, ಕೊಪ್ಪಿರ ಸನ್ನಿಸೋಮಯ್ಯ, ಪೊನ್ನಿಮಾಡ ಬೋಜಪ್ಪ, ಕುಲ್ಲಚಂಡ ಗಣಪತಿ, ಪಿ.ವಿ ಶೋಬಿತ್, ಕಾಡ್ಯಮಾಡ ಚೇತನ್, ವ್ಯವಸ್ಥಾಪಕರಾದ ಮಧು ಇವರುಗಳು ಕಾರ್ಯನಿರ್ವಹಿಸಿದರು. ಭಾಗಮಂಡಲ : ಭಾಗಮಂಡಲದ ಭಗಂಡೇಶ್ವರ ಹಾಗೂ ತಲಕಾವೇರಿ ದೇವಾಲಯಗಳಲ್ಲಿ ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ಬೆಳಿಗ್ಗೆ ೭ಗಂಟೆಯಿAದ ಸಂಜೆ ೫ ಗಂಟೆಯವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ೧೨ ಗಂಟೆಗೆ ರುದ್ರ ಹೋಮದ ಪೂರ್ಣಾಹುತಿ ಜರುಗಿತು. ಮಹಾಮಂಗಳಾರತಿ ದೇವರ ಉತ್ಸವ ಬಲಿ ಹಾಗೂ ಪ್ರಸಾದ ವಿತರಣೆ ನೆರವೇರಿತು.
ಸಂಜೆ ದೇವಾಲಯದಲ್ಲಿ ತಾಯಂಬಕ ಸೇವೆ, ದೀಪಾರಾಧನೆ ,ಏಕದಶ ರುದ್ರಾಭಿಷೇಕ ಮಹಾಮಂಗಳಾರತಿ ಬಳಿಕ ದೇವರ ಉತ್ಸವ ಜರುಗಿತು. ಧಾರ್ಮಿಕ ಕಾರ್ಯಕ್ರಮಗಳ ಬಳಿಕ ಯಕ್ಷಗಾನ ಬಯಲಾಟ ನಡೆಯಿತು.
ಈ ಸಂದರ್ಭ ದೇವಾಲಯದ ದ್ವಾರಕ್ಕೆ ಮೂಲತಃ ಭಾಗಮಂಡಲದ ನಿವಾಸಿ ಮೈಸೂರಿನ ಗಂಗಾಧರ ನಾಮಫಲಕವನ್ನು ಹಾಗೂ ಅನ್ನದಾನಕ್ಕೆ ಅಗತ್ಯವಿರುವ ಪಾತ್ರೆಯನ್ನು ಕೊಡುಗೆಯಾಗಿ ನೀಡಿದರು. ದೇವಾಲಯದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ಅರ್ಚಕ ಹರೀಶ್ ಭಟ್ ನೇತೃತ್ವದಲ್ಲಿ ನಡೆಯಿತು. ದೇವಸ್ಥಾನ ಸಮಿತಿ ಮಾಜಿ ಅಧ್ಯಕ್ಷ ಮನುಮುತ್ತಪ್ಪ, ತಕ್ಕರಾದ ಬಳ್ಳಡ್ಕ ಅಪ್ಪಾಜಿ. ಕೋಡಿ ಮೋಟಯ್ಯ ಗ್ರಾ.ಪಂ. ಉಪಾಧ್ಯಕ್ಷ ಸತೀಶ್ ಕುಮಾರ್ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ ,ಪಾರುಪತ್ತೆಗಾರ ಪೊನ್ನಣ್ಣ ಹಾಜರಿದ್ದರು. ಉತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ದೀಪಾರಾಧನೆ ಕಾರ್ಯಕ್ರಮದಲ್ಲಿ ಹೆಚ್ಚಿನ ಭಕ್ತರು ಪಾಲ್ಗೊಂಡಿದ್ದರು. ಕೂಡಿಗೆ : ಹುದುಗೂರು ಗ್ರಾಮದಲ್ಲಿರುವ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ಮಹಾಶಿವರಾತ್ರಿಯ ಪೂಜಾ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು. ದೇವಾಲಯದ ಆವರಣದಲ್ಲಿ ೯ ಗಂಟೆಯಿAದ ೧ ಗಂಟೆವರೆಗೆ ಶ್ರೀ ಮಹಾಗಣಪತಿ ಹೋಮ, ಶ್ರೀ ಮಹಾ ಮೃತ್ಯುಂಜಯ ಹೋಮ, ರುದ್ರಹೋಮ, ರುದ್ರಾಭಿಷೇಕ ನೆರವೇರಿತು. ಸಂಜೆ ೫ ಗಂಟೆಗೆ ಶ್ರೀ ಉಮಾಮಹೇಶ್ವರ ಸ್ವಾಮಿಯ ವಿಗ್ರಹವನ್ನು ಅಲಂಕೃತ ಭವ್ಯ ಮಂಟಪದಲ್ಲಿ ಕುಳ್ಳಿರಿಸಿ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ದೇವಾಲಯ ಸಮಿತಿಯ ಅಧ್ಯಕ್ಷ ಟಿ.ಎಂ. ಚಾಮಿ, ಉಪಾಧ್ಯಕ್ಷ ಎನ್.ಎಸ್. ಮುತ್ತಪ್ಪ ಕಾರ್ಯದರ್ಶಿ ಬಿ.ಎಲ್. ಸುರೇಶ್ ಸದಸ್ಯರಾದ ಐ.ಜಿ. ಶಾಂತಿ, ಕೆ.ಬಿ. ಸರಸ್ವತಿ, ಹೆಚ್.ಸಿ. ಮೋಹನ್ ಕುಮಾರ್ ಎಸ್.ಸಿ. ಪ್ರಮೀಣ್, ನಾಗರಾಜ್ ನಾಣಯ್ಯ ಸುಬ್ರಮಣ್ಯ ಭಟ್ ಸೇರಿದಂತೆ ಸಮಿತಿಯ ಸದಸ್ಯರು ಹಾಜರಿದ್ದರು.
ಚೆಟ್ಟಳ್ಳಿ: ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘ, ಜನಪರ ಹೋರಾಟ ಸಮಿತಿ ಚೆಟ್ಟಳ್ಳಿ, ವೀರಾಂಜನೇಯ ಯುವಕ ಸಂಘ ಚೆಟ್ಟಳ್ಳಿ ಹಾಗೂ ವಿನಾಯಕ ದೇವಾಲಯ ಸಮಿತಿ ಕೂಡ್ಲೂರು ಇವರ ಸಂಯುಕ್ತಾಶ್ರಯದಲ್ಲಿ ದ್ವಿತೀಯ ವರ್ಷದ ಮಹಾಶಿವರಾತ್ರಿ ಪೂಜೆ ಹಾಗೂ ಭಜನಾ ಕಾರ್ಯಕ್ರಮಗಳು ವಿಜೃಂಭಣೆಯಿAದ ನಡೆಯಿತು. ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಮಂಡೇಪAಡ ಸುಜಾಕುಶಾಲಪ್ಪ, ಎಲ್ಲರೂ ದೈವ ಭಕ್ತಿಯಲ್ಲಿ ತೊಡಗಿಸಿಕೊಳ್ಳಬೇಕೆಂದರು.
ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಹಾಗೂ ವಕೀಲ ಕೃಷ್ಣಮೂರ್ತಿ ಮಾತನಾಡಿ, ಪ್ರತಿನಿತ್ಯ ದೈವಾರಾಧನೆಯಲ್ಲಿ ತೊಡಗಿಕೊಂಡರೆ,ಎಲ್ಲಾ ಕಷ್ಟಗಳಿಗೆ ಪರಿಹಾರ ಸಿಗಲಿದೆ ಎಂದರು.
ಕಾರ್ಯಕ್ರಮವನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದ ಚೆಟ್ಟಳ್ಳಿ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ, ಎಲ್ಲಾ ದೇವರುಗಳ ಆಶೀರ್ವಾದ , ರೈತರ ಸಹಕಾರ, ಸಿಬ್ಬಂದಿ ವರ್ಗದವರ ಕಠಿಣ ಪರಿಶ್ರಮ, ಹಾಗೂ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸಹಕಾರದಿಂದ ನಷ್ಟದಲ್ಲಿ ನಡೆಯುತ್ತಿದ್ದ ಚೆಟ್ಟಳ್ಳಿ ಕೃಷಿಪತ್ತಿನ ಸಹಕಾರ ಸಂಘವು ಪ್ರಸ್ತುತ ಲಾಭದಲ್ಲಿ ನಡೆಯುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಮಂಡೇಪAಡ ಸುಜಾಕುಶಾಲಪ್ಪ, ಕೃಷ್ಣಮೂರ್ತಿ, ಯುವ ಗಾಯಕ ಅನ್ವಿತ್ ಕುಮಾರ್ ಇವರುಗಳನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಕಣಜಾಲು ಪೂವಯ್ಯ ವಹಿಸಿದ್ದರು.
ವೇದಿಕೆಯಲ್ಲಿ ಜನಪರ ಹೋರಾಟ ಸಮಿತಿಯ ಅಧ್ಯಕ್ಷ ನೂಜಿಬೈಲು ನಾಣಯ್ಯ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ರವಿ ಕೂಡ್ಲೂರು, ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ವ್ಯವಸ್ಥಾಪಕಿ ನಂದಿನಿ, ಎಲ್ಲಾ ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.ವೀರಾಜಪೇಟೆ: ಶಿವರಾತ್ರಿ ಪ್ರಯುಕ್ತ ಸದಾಶಿವನ ಆಲಯಗಳಲ್ಲಿ ಗಂಗಾಜಲವನ್ನು ತೀರ್ಥದ ರೂಪದಲ್ಲಿ ವಿತರಣೆ ಮಾಡುವ ನಿಟ್ಟಿನಲ್ಲಿ ವೀರಾಜಪೇಟೆ ತಾಲೂಕು ಆಡಳಿತವು ತಾಲೂಕಿನ ವಿವಿಧೆÀಡೆಗಳಲ್ಲಿರುವ ಶಿವಾಲಯಕ್ಕೆ ಗಂಗಾ ಜಲವನ್ನು ವಿತರಣೆ ಮಾಡಿತು. ಕರ್ನಾಟಕ ರಾಜ್ಯ ಧಾರ್ಮಿಕ ಧತ್ತಿ ನಿಧಿ ಇಲಾಖೆ ಬೆಂಗಳೂರು. ಆಯುಕ್ತರು ನೀಡಿರುವ ಆದೇಶದಂತೆ ವೀರಾಜಪೇಟೆ ತಾಲೂಕು ಕಚೇರಿಯ ಮೂಲಕ ನಿನ್ನೆ ಬೆಳಿಗ್ಗೆ ವೀರಾಜಪೇಟೆ ತಾಲೂಕು ಗ್ರೇಡ್ ಎರಡು ತಹಶೀಲ್ದಾರ್ ಪ್ರದೀಪ್ ಕುಮಾರ್ ಅವರು ವೀರಾಜಪೇಟೆ ನಗರದ ಮಲೆತಿರಿಕೆ ಬೆಟ್ಟದಲ್ಲಿ ಮಲೆ ಮಹದೇಶ್ವರ ದೇವಾಲಯದ ಅರ್ಚಕರಿಗೆ ಗಂಗಾ ಜಲವನ್ನು ವಿತರಣೆ ಮಾಡುವ ಮೂಲಕ ಚಾಲನೆ ನೀಡಿದರು.
ವೀರಾಜಪೇಟೆ ಹೋಬಳಿ, ಮತ್ತು ಅಮ್ಮತ್ತಿ ಹೋಬಳಿಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಿವ ಸಾನಿಧ್ಯವಿರುವ ಶಿವನ ದೇವಾಲಯಕ್ಕೆ ಪವಿತ್ರ ಗಂಗಾಜಲವನ್ನು ತಾಲೂಕು ಆಡಳಿತವು ವಿತರಣೆ ಮಾಡಿತು. ಧತ್ತಿ ನಿಧಿ ಆಯುಕ್ತರ ಆದೇಶದಂತೆ ಎಲ್ಲಾ ಶಿವನ ಆಲಯದಲ್ಲಿ ಪರಮಶಿವನಿಗೆ ಗಂಗಾಜಲದಿAದ ಅಭಿಷೇಕಗೈದು ನಂತರದಲ್ಲಿ ಆಲಯಕ್ಕೆ ಆಗಮಿಸುವ ಭಕ್ತರಿಗೆ ತೀರ್ಥ ರೂಪದಲ್ಲಿ ವಿತರಿಸಬೇಕು ಎಂದಿದೆ. ಗಂಗಾಜಲ ವಿತರಣೆಯ ಸಂದರ್ಭದಲ್ಲಿ ವೀರಾಜಪೇಟೆ ತಾಲೂಕು ಕಂದಾಯಧಿಕಾರಿಗಳಾದ ಹರೀಶ್, ಸಹಾಯಕ ಕಂದಾಯ ಅಧಿಕಾರಿ ನಿಶಾನ್ ಹಾಗೂ ಗ್ರಾಮ ಸಹಾಯಕರು ಹಾಜರಿದ್ದರು.ಸೋಮವಾರಪೇಟೆ: ಸೋಮವಾರಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಪ್ರದೇಶದಲ್ಲಿ ಶಿವರಾತ್ರಿ ಹಬ್ಬವನ್ನು ಶ್ರದ್ಧಾಭಕ್ತಿಯೊಂದಿಗೆ ಆಚರಿಸಲಾಯಿತು. ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು, ರಾತ್ರಿ ಜಾಗರಣೆ ಹಾಗೂ ಭಜನಾ ಕಾರ್ಯಕ್ರಮ ನೆರವೇರಿದವು.
ಗಂಗಾಜಲ ವಿತರಣೆ: ಧಾರ್ಮಿಕ ದತ್ತಿ ಇಲಾಖೆ ಹಾಗೂ ತಾಲೂಕು ಆಡಳಿತದ ವತಿಯಿಂದ ತಾಲೂಕಿನ ವಿವಿಧ ದೇವಾಲಯಗಳಿಗೆ ಗಂಗಾಜಲ ವಿತರಿಸಲಾಯಿತು.
ತಾಲೂಕು ಕಚೇರಿ ಆವರಣದಲ್ಲಿ ತಹಶೀಲ್ದಾರ್ ಗೋವಿಂದರಾಜು ಅವರು ವಿವಿಧ ದೇವಾಲಯಗಳ ಆಡಳಿತ ಮಂಡಳಿ ಪ್ರಮುಖರಿಗೆ ಸಾಂಕೇತಿಕವಾಗಿ ಗಂಗಾಜಲ ವಿತರಿಸಿದರು. ಇದೇ ಪ್ರಥಮ ಬಾರಿಗೆ ರಾಜ್ಯ ಸರ್ಕಾರ ಮಹಾಶಿವರಾತ್ರಿ ಅಂಗವಾಗಿ ದೇವರ ಮೂರ್ತಿಗೆ ಅಭಿಷೇಕ ಮಾಡಲು ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಕಂದಾಯ ಇಲಾಖೆ ಮೂಲಕ ರಾಜ್ಯದ ದೇವಾಲಯಗಳಿಗೆ ಗಂಗಾಜಲ ವಿತರಣೆ ಮಾಡಿದೆ. ಈ ಸಂದರ್ಭ ಕಂದಾಯ ಇಲಾಖೆಯ ಸಿಬ್ಬಂದಿಗಳಾದ ಲೋಹಿತ್‌ಕುಮಾರ್, ಪಳಂಗಪ್ಪ, ಪ್ರಹ್ಲಾದ್, ಮನುಕುಮಾರ್, ದಾಮೋಧರ್, ಸತೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಅರಸಿನಕುಪ್ಪೆ ದೇವಾಲಯದಲ್ಲಿ: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಸಿನಕುಪ್ಪೆ ಸಿದ್ಧಲಿಂಗಪುರದಲ್ಲಿರುವ ಶ್ರೀಮಂಜುನಾಥ ಸ್ವಾಮಿ ಕ್ಷೇತ್ರದಲ್ಲಿ ಶ್ರದ್ಧಾಭಕ್ತಿಯಿಂದ ಶಿವರಾತ್ರಿ ಮಹೋತ್ಸವ ನೆರವೇರಿತು. ದೇವಾಲಯದ ಪ್ರಧಾನ ಗುರುಗಳಾದ ಶ್ರೀ ರಾಜೇಶ್‌ನಾಥ್‌ಜೀ ಅವರ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರಿದವು.
ಕ್ಷೇತ್ರದ ಮಂಜುನಾಥಸ್ವಾಮಿಗೆ ಹಾಲಾಭಿಷೇಕ, ೧೧೦೮ ಎಳನೀರು ಅಭಿಷೇಕ, ಕಳಶಾಭಿಷೇಕ, ಕಬ್ಬಿನಹಾಲಿನ ಅಭಿಷೇಕ, ಪಂಚಾಮೃತ ಅಭಿಷೇಕ, ಜೇನುತುಪ್ಪದ ಅಭಿಷೇಕ, ಕಳಶಾಭಿಷೇಕ, ಭಸ್ಮಾಭಿಷೇಕ, ರುದ್ರಹೋಮ, ಗಣಪತಿ ಹೋಮಗಳು ದೇವಾಲಯದ ಪ್ರಧಾನ ಅರ್ಚಕ ಜಗದೀಶ್ ಉಡುಪ ಅವರ ಪೌರೋಹಿತ್ವದಲ್ಲಿ ನೆರವೇರಿದವು.
ದೇಶದ ವಿವಿಧ ಪುಣ್ಯ ನದಿಗಳಿಂದ ತಂದ ತೀರ್ಥವನ್ನು ದೇವರಿಗೆ ಅಭಿಷೇಕ ಮಾಡಿದ ನಂತರ ಭಕ್ತಾದಿಗಳಿಗೆ ತೀರ್ಥಸ್ನಾನ ನೆರವೇರಿಸಲಾಯಿತು. ನೂರಾರು ಭಕ್ತಾದಿಗಳು ತೀರ್ಥಸ್ನಾನದಲ್ಲಿ ಭಾಗವಹಿಸಿದ್ದರು. ಪರಿವಾರ ದೇವರುಗಳಿಗೆ ನೈವೇದ್ಯದ ನಂತರ ಪೂಜೋತ್ಸವದಲ್ಲಿ ಭಾಗಿಯಾಗಿದ್ದ ಎಲ್ಲಾ ಭಕ್ತಾದಿಗಳಿಗೆ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ನಿನ್ನೆ ರಾತ್ರಿಯಿಂದ ಇಂದು ಬೆಳಗ್ಗಿನವರೆಗೂ ದೇವಾಲಯದಲ್ಲಿ ಜಾಗರಣೆ, ಭಜನೆ ನಡೆಯಿತು.
ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾಪಂಡ ಮುತ್ತಪ್ಪ, ಗೌರವಾಧ್ಯಕ್ಷ ನಾಪಂಡ ಮುದ್ದಪ್ಪ, ಕಾರ್ಯದರ್ಶಿ ಪ್ರಕಾಶ್, ದೇವಾಲಯ ಸಮಿತಿ ಅಧ್ಯಕ್ಷ ಮೋಹನ್, ಕಾರ್ಯದರ್ಶಿ ರಮೇಶ್ ಸೇರದಂತೆ ಸಮಿತಿ ಪದಾಧಿಕಾರಿಗಳು, ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಯ ಭಕ್ತಾದಿಗಳು ಪೂಜಾಕಾರ್ಯದಲ್ಲಿ ಭಾಗಿಯಾಗಿದ್ದರು.
ಪಟ್ಟಣದ ದೇವಾಲಯಗಳಲ್ಲಿ: ಪಟ್ಟಣದ ಸೋಮೇಶ್ವರ ದೇವಾಲಯದಲ್ಲಿ ಅರ್ಚಕ ಚಿತ್ರಕುಮಾರ ಭಟ್ ಪುರೋಹಿತ್ವದಲ್ಲಿ ಏಕದಶವಾರ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಮಹಾಪೂಜೆ, ೧೨೧ ಕಳಸ ಪ್ರತಿಷ್ಠಾಪನೆ ನೆರವೇರಿತು. ದೇವಾಲಯ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಹಾಗೂ ಪದಾಧಿಕಾರಿಗಳು ಇದ್ದರು. ವೀರಶೈವ ಸಮಾಜದ ಬಸವೇಶ್ವರ ದೇವಾಲಯ, ಕುಳ್ಳಾರಿಗುಡಿ ದೇವಾಲಯದಲ್ಲಿ ಪೂಜೆ ನಡೆಯಿತು. ಈ ಸಂದರ್ಭ ಸಮಾಜದ ಮುಖಂಡ ಯಶಿವಕುಮಾರ್, ಶೆಟ್ರು ಮೃತ್ಯುಂಜಯ, ಕಾರ್ಯದರ್ಶಿ ನಾಗರಾಜ್ ಇದ್ದರು.
ಪಟ್ಟಣದ ಶ್ರೀ ವಿದ್ಯಾಗಣಪತಿ, ಶ್ರೀಮುತ್ತಪ್ಪ ಹಾಗೂ ಅಯ್ಯಪ್ಪ ದೇವಾಲಯ, ಯಡೂರಿನ ಸೋಮೇಶ್ವರ, ಬಜೆಗುಂಡಿ ಗ್ರಾಮದ ಶ್ರೀ ಶನೀಶ್ವರ ದೇವಾಲಯ, ಕಿಬ್ಬೆಟ್ಟ, ತಣ್ಣೀರುಹಳ್ಳ, ದೊಡ್ಡಮಳ್ತೆ, ದೊಡ್ಡಹಣಕೋಡು, ಗೆಜ್ಜೆಹಣಕೋಡು, ಬಸವನಕೊಪ್ಪ, ಹಿರಿಕರ, ಚನ್ನಾಪುರ, ಮಸಗೋಡು, ಸುಳಿಮಳ್ತೆ ಗ್ರಾಮಗಳ ಬಸವೇಶ್ವರ ದೇವಾಲಯ, ಗೌಡಳ್ಳಿ ಶ್ರೀ ನವದುರ್ಗಾ ಪರಿಮೇಶ್ವರಿ ದೇವಾಲಯ, ನೇಗಳ್ಳೆ ವೀರಭದ್ರೇಶ್ವರ ದೇವಾಲಯಗಳಲ್ಲಿ ಪೂಜೆ ನೆರವೇರಿತು.
(ನಾಲ್ಕನೆ ಪುಟಕ್ಕೆ)
ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ಪ್ರಜಾಪಿತ ಬ್ರಹ್ಮಾಕುಮಾರೀಸ್ ಈಶ್ವರಿಯ ವಿಶ್ವವಿದ್ಯಾಲಯ ಕುಶಾಲನಗರ ಶಾಖೆಯಲ್ಲಿ ಶಿವರಾತ್ರಿ ಹಬ್ಬದ ಅಂಗವಾಗಿ ಶಿವರಾತ್ರಿ ಆಚರಿಸಲಾಯಿತು. ಓಂ ಶಾಂತಿಧ್ವಜಾರೋಹಣ ಗುಡ್ಡೆಹೊಸೂರಿನ ಎಸ್.ಎಲ್.ಎನ್. ಸಂಸ್ಥೆಯ ಸಾತಪ್ಪನ್ ನೆರವೇರಿಸಿದರು.
ಸಾಮೂಹಿಕ ಶಿವನಾಮಸ್ಮರಣೆ ನಡೆಯಿತು. ಈ ಸಂದರ್ಭ ವೀರಾಜಪೇಟೆ ಓಂ.ಶಾAತಿ ಕೇಂದ್ರದ ಉಸ್ತುವಾರಿ ವಿ.ಕೆ.ಕೋಮಲ್ ಅವರು ಶಿವರಾತ್ರಿ ಆಚರಣೆ ಬಗ್ಗೆ ಮಾತನಾಡಿದರು. ಕುಶಾಲನಗರ ಕೇಂದ್ರದ ಬಿ.ಕೆ.ಲಲಿತಾಮಣಿ. ಸ್ಥಳೀಯರಾದ ಕುಮಾರಪ್ಪ, ಕೆಂಚಪ್ಪ ಹಾಜರಿದ್ದರು. ದೇಚಮ್ಮ ವಂದಿಸಿದರು.ಸಿದ್ದಾಪುರ: ಮಾಲ್ದಾರೆ ಸಮೀಪದ ಬಾಡಗ ಬಾಣಂಗಾಲ ಗ್ರಾಮದ ಮೈಲಾದ್‌ಪುರದ ಶ್ರೀ ಸಿದ್ಧಪ್ಪಾಜಿ ದೇವಾಲಯದಲ್ಲಿ ಮಹಾಶಿವರಾತ್ರಿ ಆಚರಿಸಲಾಯಿತು. ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಎಂ.ಪಿ ಸುಜಾ ಕುಶಾಲಪ್ಪ ಉದ್ಘಾಟಿಸಿದರು. ದೇವಾಲಯದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ರಾತ್ರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ರಾತ್ರಿ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಪ್ಪಾಜಿ ದೇವಾಲಯದ ಪ್ರಮುಖರಾದ ಬಾಲು ಪೂಜಾರಿ, ಗಣೇಶ, ಸ್ಥಳೀಯರಾದ ಅಜ್ಜನಿಕಂಡ ರಘು ಕರುಂಬಯ್ಯ, ತಿಮ್ಮ ಗ್ರಾ.ಪಂ ಅಧ್ಯಕ್ಷ ಸೆಮೀರ್ ಇನ್ನಿತರರು ಹಾಜರಿದ್ದರು.