ಸಿದ್ದಾಪುರ, ಫೆ. ೨೮: ಮಾಲ್ದಾರೆ ಸಮೀಪದ ಬಾಡಗ ಬಾಣಂಗಾಲ ಗ್ರಾಮದ ಮೈಲಾದ್‌ಪುರದ ಶ್ರೀ ಸಿದ್ದಪ್ಪಾಜಿ ದೇವಾಲಯದಲ್ಲಿ ತಾ. ೧ ರಂದು (ಇಂದು) ಮಹಾಶಿವರಾತ್ರಿ ಹಬ್ಬ ಆಚರಣೆ ನಡೆಯಲಿದೆ. ದೇವಾಲಯದಲ್ಲಿ ರಾತ್ರಿ ವಿವಿಧ ಪೂಜಾ ಕೈಂಕರ್ಯಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನಂತರ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಶ್ರೀ ಸಿದ್ದಪ್ಪಾಜಿ ದೇವಾಲಯದ ಪ್ರಮುಖರಾದ ಬಾಲು ಪೂಜಾರಿ, ಗಣೇಶ್ ತಿಳಿಸಿದ್ದಾರೆ.