ಮಡಿಕೇರಿ, ಫೆ.೨೮: ಮಂಗಳೂರು ವಿಶ್ವವಿದ್ಯಾನಿಲಯದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ರಸಾಯನಶಾಸ್ತç ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಪಿ.ಎ.ಪುಷ್ಪಾಂಜಲಿ ಇವರು ಮಂಡಿಸಿದ ಪ್ರಬಂಧ “ಆ್ಯನ್ ಎಲೆಕ್ಟೊçÃಕೆಮಿಕಲ್ ಅಪ್ರೋಚ್ ಟುವರ್ಡ್ಸ್ ದಿ ಡೆವಲಪ್ಮೆಂಟ್ ಆಫ್ ಕೆಮಿಕಲಿ ಮೋಡಿಫೈಡ್ ಎಲೆಕ್ಟೊçÃಡ್ ಫಾರ್ ದಿ ಡಿಟರ್ಮಿನೇಷನ್ ಆಫ್ ಬಯೋಆ್ಯಕ್ಟಿವ್ ಮೋಲಿಕ್ಯೂಲ್ಸ್” ಗೆ ಮಂಗಳೂರು ವಿಶ್ವವಿದ್ಯಾನಿಲಯವು ಪಿಎಚ್ಡಿ ಪದವಿ ನೀಡಿದೆ. ಇವರು ರಸಾಯನಶಾಸ್ತç ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಜೆ.ಜಿ.ಮಂಜುನಾಥ ಅವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು.