ನಾಪೋಕ್ಲು, ಫೆ. ೨೮: ಭಾರತ ಜಾತ್ಯತೀತ ದೇಶ; ಇಲ್ಲಿ ಪ್ರತಿಯೊಬ್ಬರಿಗೂ ತನ್ನದೆ ಆದ ಸಂಸ್ಕೃತಿಯನ್ನು ಆಚರಿಸಿಕೊಂಡು ಬರಲು ಸಂವಿಧಾನದಲ್ಲಿ ಅವಕಾಶವನ್ನು ಕಲ್ಪಿಸಿದೆ. ಆದರೆ ಇಲ್ಲಿ ಹಿಜಾಬ್ ವಿಷಯದಲ್ಲಿ ಅನವಶ್ಯಕ ಗೊಂದಲ ಸೃಷ್ಟಿಯಾಗಿದೆ. ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕರವಸ್ತç ಧರಿಸಿಲ್ಲವೇ, ಜಾನ್ಸಿರಾಣಿ ಲಕ್ಷಿö್ಮಭಾಯಿ, ಕಿತ್ತೂರು ಚೆನ್ನಮ್ಮ ಇವರುಗಳು ತಲೆ ವಸ್ರö್ತ ಧರಿಸಿಲ್ಲವೇ ಎಂದ ಅವರು; ಇದರಿಂದ ವಿದ್ಯಾರ್ಥಿಗಳ ಭವಿಷ್ಯ ಏನಾಗಬಹುದು. ಈ ವಿಷಯ ನ್ಯಾಯಾಲಯದಲ್ಲಿದ್ದು, ನಾವುಗಳು ನ್ಯಾಯಾಲಯದ ತೀರ್ಪಿಗೆ ತಲೆಬಾಗುತ್ತೇವೆಂದು ಕೇಂದ್ರ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಹೇಳಿದರು.

ಅವರು ನಾಪೋಕ್ಲು ಸಮೀಪದ ಎಮ್ಮೆಮಾಡು ದರ್ಗಾ ಶರೀಫ್ ವಾರ್ಷಿಕ ಉರೂಸ್ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ತೀರ್ಪು ಯಾರ

(ಮೊದಲ ಪುಟದಿಂದ) ಪರವೇ ಇರಲಿ ಅದನ್ನು ಕೇಳಲು ನಾವುಗಳು ಇದ್ದೇವೆ. ನಮ್ಮನ್ನು ಬೆಂಬಲಿಸಿ; ಬದಲಾಗಿ ಯಾರೂ ಆವೇಶಕ್ಕೆ ಒಳಗಾಗದೆ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು ಎಂದರು. ನಿನ್ನ ಧರ್ಮವನ್ನು ನೀನು ಆಚರಿಸು ನನ್ನ ದರ್ಮವನ್ನು ನಾನು ಅಚರಿಸುತ್ತೇನೆ ನಾವೆಲ್ಲರೂ ಭಾರತೀಯರು; ಇಲ್ಲಿ ಒಗ್ಗಟ್ಟು ಮುಖ್ಯ; ಯಾರೂ ಕೂಡ ಸಂಸ್ಕೃತಿಗೆ ಧಕ್ಕೆ ತರಬೇಡಿ ಎಂದರು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಕರ್ನಾಟಕ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನಾ ಶಾಫಿ ಸಅದಿ ಮಾತನಾಡಿ; ಕೋಮು ಭಾವನೆಯನ್ನುಂಟು ಮಾಡುವವನು ಮುಸಲ್‌ಮಾನನೆ ಅಲ್ಲ ಎಂದರು. ನಾವೆಲ್ಲರೂ ಒಂದೇ ನಮ್ಮ ದೇಶದ ಸಂವಿಧಾನ ನಮಗೆ ಬದುಕುವ ಅವಕಾಶವನ್ನು ಕಲ್ಪಿಸಿದೆ. ಅವರವರ ಧರ್ಮವನ್ನು ಅವರವರು ಪಾಲಿಸಿಕೊಂಡು ಬರುವಾಗ ಏಕೆ ಈ ಕೋಮು ಭಾವನೆ? ಯಾವುದೇ ಧರ್ಮ ಅಹಿಂಸೆಯನ್ನು ಬೋಧಿಸಿಲ್ಲ. ಪ್ರಚೋದÀನೆಗೆ ಅವಕಾಶ ನೀಡಿಲ್ಲ. ಇದನ್ನು ಅನುಸರಿಸದವನು ಮೃಗೀಯ ಸ್ವಭಾವದ ಜಾತಿಯವನಾಗುತ್ತಾನೆ ಎಂದರು.

ಹಿಜಾಬ್ ವಿಷಯ ನ್ಯಾಯಾಲಯದಲ್ಲಿರುವುದರಿಂದ ಏನೂ ಹೇಳುವುದಿಲ್ಲ; ವಸ್ತç ಸಂಹಿತೆಗೆ ಧಕ್ಕೆಯಾಗಬಾರದು. ನಾವು ರಾಜ್ಯದಲ್ಲಿ ೯೦ ಲಕ್ಷ ಮುಸ್ಲಿಮ್‌ರಿದ್ದು, ನ್ಯಾಯಾಲಯದ ತೀರ್ಪಿಗೆ ಬದ್ಧರಾಗಿದ್ದೇವೆ ಎಂದ ಅವರು; ಎಮ್ಮೆಮಾಡಿನ ಅಭಿವೃದ್ಧಿಗೆ ನೀವೆಲ್ಲರೂ ಸೇರಿ ಒಂದು ಉತ್ತಮವಾದ ಆಡಳಿತ ಮಂಡಳಿಯನ್ನು ರಚಿಸಬೇಕಿದೆ. ಸಮಿತಿ ಉತ್ತಮವಾಗಿದ್ದರೆ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ. ಪರಸ್ಪರ ಕಿತ್ತಾಟವನ್ನು ದೂರವಿಡಿ ಎಂದು ಸಲಹೆ ನೀಡಿದರು. ವಕ್ಫ್ ಬೋರ್ಡಿನಿಂದ ದರ್ಗಾದ ಅಭಿವೃದ್ಧಿಗೆ ಸಹಾಯವನ್ನು ನೀಡಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಜೆ.ಡಿ.ಎಸ್. ಅಧ್ಯಕ್ಷ ಕೆ.ಎಂ.ಬಿ. ಗಣೇಶ್ ಮಾತನಾಡಿ ನಾವೆಲ್ಲರೂ ಸಹೋದರಂತೆ ಇದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಬೇಧ ಇಲ್ಲ. ಮುಂದೆ ನಾವು ಒಂದಾಗಿ ಬದುಕು ನಡೆಸಬೇಕಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮೌಲಾನಾ ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಮಾತನಾಡಿದರು. ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಕೆ.ಎಸ್. ಅಬ್ದುಲ್ ಖಾದರ್ ಹಾಜಿ ವಹಿಸಿದ್ದರು. ವೇದಿಕೆಯಲ್ಲಿ ಸರ್ಫುದ್ದಿನ್ ತಂಙಳ್, ಗ್ರಾಮ ಪಂಚಾಯತ್ ಸದಸ್ಯ ಚಂಬಾರAಡ ಮಾಹಿನೆ, ಇಬ್ರಾಹಿಂ, ಉಸ್ಮಾನ್ ಹಾಜಿ. ಎಂ.ಎ. ಮನ್ಸೂರ್ ಆಲಿ, ಎಂ.ಜಿ. ಜಾಹಿರ್ ಖಾನ್, ಚಂಬಾರAಡ ಮೊಯಿದು, ಬಿ.ಯು. ಮುಹಮ್ಮದ್ ಅಶ್ರಫ್, ಮಹಮ್ಮದ್ ಹಾಜಿ ಕುಂಜಿಲ ಮತ್ತಿತರರು ಇದ್ದರು. - ವರದಿ: ದುಗ್ಗಳ ಸದಾನಂದ