ಪೊನ್ನಂಪೇಟೆ, ಫೆ.೨೬: ಬಿರುನಾಣಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿರುವ ಬಿಲವೊಂದರಲ್ಲಿ ವಾಸವಾಗಿದ್ದ ಹಾವೊಂದು ಅಲ್ಲಿಯೇ ಮೊಟ್ಟೆ ಹಾಕಿತ್ತು. ಹಾವು ಕೆಲವು ದಿನಗಳಿಂದ ಶಾಲಾ ಆವರಣದಲ್ಲಿಯೇ ಸಂಚರಿಸುತ್ತಿದ್ದರಿAದ ಅಲ್ಲಿನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಆತಂಕಕ್ಕೊಳಗಾಗಿದ್ದರು. ವಿಷಯ ತಿಳಿದ ವೆಸ್ಟ್ ನೆಮ್ಮಲೆ ಗ್ರಾಮದ ಉರಗ ಪ್ರೇಮಿ ಚೆಟ್ಟಂಗಡ ಸೋಮಣ್ಣ ಹಾಗೂ ಮಾಣಿರ ಮಂಜು ಸೋಮಯ್ಯ ಸ್ಥಳಕ್ಕಾಗಮಿಸಿ ಪರಿಶೀಲಿಸಿ, ಬಿಲದೊಳಗಿದ್ದ ೧೭ ಹಾವಿನ ಮೊಟ್ಟೆಗಳನ್ನು ರಕ್ಷಿಸಿ ಸುರಕ್ಷಿತ ಸ್ಥಳದಲ್ಲಿ ಇರಿಸಿದ್ದಾರೆ.