ಭಾಗಮAಡಲ, ಫೆ. ೨೭: ಅದೊಂದು ಸರಳ ಸುಂದರ ಸಮಾರಂಭ. ಆಟೋ ಚಾಲಕರ ಸಂಘದ ಸದಸ್ಯರು ಒಗ್ಗೂಡಿ ಸಂಭ್ರಮಿಸಿದ ಕ್ಷಣ. ಪ್ರತಿದಿನ ನಿತ್ಯ ಕಾಯಕದಲ್ಲಿ ತೊಡಗಿಸಿಕೊಂಡಿದ್ದವರು ಆ ದಿನ ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾಕೂಟಗಳಲ್ಲಿ ದಿನವಿಡಿ ಸಂಭ್ರಮಿಸಿದರು.
ಇವು ಭಾಗಮಂಡಲದ ಶ್ರೀ ಕಾವೇರಿ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಸದಸ್ಯರು ಹಮ್ಮಿಕೊಂಡಿದ್ದ ಅಧಿಕಾರ ಹಸ್ತಾಂತರ ಹಾಗೂ ಸಮ್ಮಿಲನ ಕಾರ್ಯಕ್ರಮದ ಕ್ಷಣಗಳು. ಭಾಗಮಂಡಲ ಕ್ಷೇತ್ರದಲ್ಲಿ ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಜಿಲ್ಲೆಯಲ್ಲಿ ಹೆಸರು ಮಾಡಿದ ಆಟೋ ಚಾಲಕರ ಸಂಘದ ಕಾರ್ಯಕ್ರಮವಿದು. ಕಳೆದ ೨೦ ವರ್ಷಗಳಿಂದ ಭಾಗಮಂಡಲ ಕ್ಷೇತ್ರದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಿಕೊಂಡು ಬಂದ ಮೆಚ್ಚುಗೆ ಗಳಿಸಿದ ಭಾಗಮಂಡಲದಲ್ಲಿ ಕಾವೇರಿ ಆಟೋ ಚಾಲಕರ ಸಂಘದ ಕಾರ್ಯಕ್ರಮ ಭಾಗಮಂಡಲದಲ್ಲಿ ನೆರವೇರಿತು. ಭಾಗಮಂಡಲ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪಾಣತ್ತಲೆ ಬಾಲಕೃಷ್ಣ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸತೀಶ್ ಕುಮಾರ್ ಮಾತನಾಡಿ ಸಂಘ-ಸAಸ್ಥೆಗಳು ಈ ರೀತಿಯ ಚಟುವಟಿಕೆ ಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಭಾಗಮಂಡಲದಲ್ಲಿ ಆಟೋ ನಿಲ್ದಾಣಕ್ಕೆ ಮೂಲಭೂತ ಸೌಲಭ್ಯಗಳಿಗಾಗಿ ಪಂಚಾಯಿತಿ ವತಿಯಿಂದ ಹಾಗೂ ಮೇಲ್ಮಟ್ಟದಿಂದ ಆರ್ಥಿಕ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಇದೇ ಸಂದರ್ಭ ಸಭೆಯಲ್ಲಿ ಮುಂದಿನ ಸಾಲಿನ ಸಂಘದ ಅಧ್ಯಕ್ಷರಾಗಿ ನಿಡುಂಬೆ ವೆಂಕಟರಮಣ, ಕಾರ್ಯದರ್ಶಿಯಾಗಿ ಕುದುಪಜೆ ರಂಜು, ಖಜಾಂಚಿಯಾಗಿ ಸಂಪತ್ ದೇವಂಗೊಡಿ, ಕಾರ್ಯದರ್ಶಿಯಾಗಿ ಮಲ್ಲೇಶ್, ಸಾಮಾಜಿಕ ಜಾಲತಾಣದ ಮಂಜು ಇವರನ್ನು ಆಯ್ಕೆ ಮಾಡಿ ಅಧಿಕಾರ ಹಸ್ತಾಂತರಿಸಲಾಯಿತು. ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ನಾಗೇಶ್ ಕಾಳನ ರವಿ, ಪ್ರಮುಖರಾದ ಪಿ.ಎಂ. ರಾಜೀವ್, ಪಟ್ಟಮಾಡ ಸುಧೀರ್, ನಿಡ್ಯಮಲೆ ಚಲಾನ್, ಪತ್ರಕರ್ತ ಕುಯ್ಯಮುಡಿ ಸುನಿಲ್, ಸಂಘದ ಕಾರ್ಯದರ್ಶಿ ಶ್ರೀನಾಥ್ ಹಾಗೂ ಅಜಿತ್ ಮತ್ತರಿ, ಭಾನು ಬಾರಿಕೆ, ವಿಜಯ್ ಪೂಜಾರಿ, ಪ್ರದಿಶ, ಸಂಘದ ಪದಾಧಿಕಾರಿಗಳು ಇದ್ದರು. ಕಾರ್ಯಕ್ರಮದಲ್ಲಿ ಶಿರಕಜೆ ಭನನ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು
ಅಧಿಕಾರ ಹಸ್ತಾಂತರ ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ರೀಡಾ ಕಾರ್ಯಕ್ರಮಗಳು ಜರುಗಿದವು ಆಟೋ ಚಾಲಕರ ಸಂಘದ ಸದಸ್ಯರು ಹಗ್ಗಜಗ್ಗಾಟ ಕಬಡ್ಡಿ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
- ಸುನಿಲ್