ಪೊನ್ನಂಪೇಟೆ, ಫೆ.೨೭: ರಾಷ್ಟಿçÃಯ ಹಾಕಿ ಪಟು ಮತ್ತು ಪ್ರಸ್ತುತ ಐ. ಓ.ಬಿ. ಹಾಕಿ ತಂಡದ ಆಟಗಾರ ವೀರಾಜಪೇಟೆಯ ಎಸ್. ಎಂ. ರಫೀಕ್ ಭಾನುವಾರದಂದು ವೈವಾಹಿಕ ಜೀವನಕ್ಕೆ ಪ್ರವೇಶಿಸಿದರು.

ಕುಶಾಲನಗರ ಸಮೀಪದ ಬೈಲುಕುಪ್ಪೆಯ ಜಾಮಿಯಾ ಮಸೀದಿಯಲ್ಲಿ ಬೆಳಿಗ್ಗೆ ೧೧.೩೦ ಗಂಟೆಗೆ ನಡೆದ ನಿಖಾ ಕಾರ್ಯಕ್ರಮದಲ್ಲಿ ಮೊಹಮ್ಮದ್ ದಸ್ತಗೀರ್ (ಬಾಬು) ದಂಪತಿಯ ಪುತ್ರಿ ಗುಲ್ಜಾರ್ ಬಾನು ಎಂಬವರನ್ನು ತಮ್ಮ ಬಾಳಸಂಗಾತಿಯಾಗಿ ಸ್ವೀಕರಿಸುವ ಮೂಲಕ ರಫೀಕ್ ಗೃಹಸ್ಥಾಶ್ರಮಕ್ಕೆ ಪ್ರವೇಶಿಸಿದರು. ಬಳಿಕ ಬೈಲುಕುಪ್ಪೆಯ ಎಸ್. ಎಲ್. ವಿ. ಕಲ್ಯಾಣ ಮಂಟಪದಲ್ಲಿ ನಡೆದ ವಿವಾಹ ಕಾರ್ಯದಲ್ಲಿ ಕರ್ನಾಟಕದ ಹಾಕಿ ದಿಗ್ಗಜರ ದಂಡೇ ನೆರೆದಿತ್ತು.

ಭಾನುವಾರದಂದು ನಡೆದ ರಫೀಕ್ ಅವರ ವಿವಾಹ ಮಹೋತ್ಸವದಲ್ಲಿ ಒಲಂಪಿಯನ್ ವಿ.ಆರ್. ರಘುನಾಥ್, ಅಂರ‍್ರಾಷ್ಟಿçÃಯ ಹಾಕಿ ಪಟುಗಳಾದ ಕರಿನೆರವಂಡ ಸೋಮಣ್ಣ, ವಿಕ್ರಂಕಾAತ್, ನಿತಿನ್ ತಿಮ್ಮಯ್ಯ ಎಂ.ಬಿ. ಅಯ್ಯಪ್ಪ, ರಾಷ್ಟ್ರೀಯ ಹಾಕಿ ಆಟಗಾರರ ಕೆ.ಎಸ್. ಅಪ್ಪಣ್ಣ, ಚಿoಗಪ್ಪ, ಶಾನ್, ಡಿ. ಎಂ. ದರ್ಶನ್ ಮೊದಲಾದವರು ಪಾಲ್ಗೊಂಡು ವಧು-ವರರಿಗೆ ಶುಭಕೋರಿದರು.