*ಸಿದ್ದಾಪುರ, ಫೆ. ೨೭: ಅಭ್ಯತ್‌ಮಂಗಲ ವ್ಯಾಪ್ತಿಯಲ್ಲಿ ಮತ್ತೆ ಕಾಡಾನೆ ಹಾವಳಿ ಮಿತಿಮೀರಿದೆ. ತೋಟ, ಗದ್ದೆಗಳಿಗೆ ನುಗ್ಗಿರುವ ಗಜಹಿಂಡು ಸಾಕಷ್ಟು ಹಾನಿ ಉಂಟುಮಾಡಿದ್ದು, ಗ್ರಾಮಸ್ಥರು ಆತಂಕದಲ್ಲಿದ್ದಾರೆ.

ಗ್ರಾಮದ ಬೆಳೆಗಾರ ಅಂಚೆಮನೆ ಸುಧಾಕರ ಅವರು ಹುಲ್ಲಿಗಾಗಿ ಬೆಳೆದ ೨ನೇ ಬೆಳೆ ಕಾಡಾನೆ ಪಾಲಾಗಿದೆ. ಸುಮಾರು ೧೦೦ಕ್ಕೂ ಅಧಿಕ ಅಡಿಕೆ ಗಿಡಗಳು ನಾಶವಾಗಿವೆ. ಅಕ್ಕಪಕ್ಕದ ತೋಟಗಳಿಗೂ ಆನೆಗಳು ಲಗ್ಗೆ ಇಟ್ಟಿವೆ. ಅರಣ್ಯಾಧಿಕಾರಿ ಕೂಡಕಂಡಿ ಸುಬ್ರಾಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬೆಳೆಹಾನಿ ಪರಿಹಾರ ನೀಡಬೇಕು ಮತ್ತು ಕಾಡಾನೆಗಳನ್ನು ಕಾಡಿಗಟ್ಟಲು ಸೂಕ್ತ ಕ್ರಮಕೈಗೊಳ್ಳಬೇಕೆಂದು ಬೆಳೆಗಾರರು ಒತ್ತಾಯಿಸಿದರು.

-ಅಂಚೆಮನೆ ಸುಧಿ