ಮಡಿಕೇರಿ, ಫೆ. ೨೭: ಸ್ವಸ್ಥ ಹಾಗೂ ‘ಸನ್‌ಶೈನ್ ಬೇಬಿ’ ಉತ್ಪನ್ನ ಸಹಯೋಗದೊಂದಿಗೆ ವಿಶೇಷ ಮಕ್ಕಳ ಜಾಗೃತಿ ಕಾರ್ಯಕ್ರಮಕ್ಕೆ ತಾ. ೨೬ ರಂದು ಸುಂಟಿಕೊಪ್ಪದ ಸ್ವಸ್ಥ ಸಂಸ್ಥೆಯಲ್ಲಿ ಚಾಲನೆ ನೀಡಲಾಯಿತು.

ವಿಶೇಷ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತಂದು ಸಮಾನತೆಯಿಂದ ಗೌರವಿಸುವುದೇ ಕಾರ್ಯಕ್ರಮದ ಉದ್ದೇಶವಾಗಿದೆ. ಸನ್‌ಶೈನ್ ಬೇಬಿ ಸಂಸ್ಥೆಯ ಗಿಫ್ಟ್ ಬಾಕ್ಸ್ಗಳನ್ನು ಸ್ವಸ್ಥ ವಿದ್ಯಾರ್ಥಿಗು ಬಣ್ಣದಿಂದ ಅಲಂಕರಿಸಿದ್ದು, ಆನ್‌ಲೈನ್ ಮೂಲಕ ಮಾರಾಟ ಮಾಡಲಾಗುವುದು.