ಪ್ರತಿ ವರ್ಷ ಫೆಬ್ರವರಿ ೨೮ನೇ ದಿನಾಂಕವನ್ನು ರಾಷ್ಟಿçÃಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ. ವಿಜ್ಞಾನ ಹಾಗೂ ನಮ್ಮ ಜೀವನದಲ್ಲಿ ಅದರ ಮಹತ್ವದ ಬಗ್ಗೆ ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರಲ್ಲಿ ವಿಜ್ಞಾನದ ಅರಿವು ಮೂಡಿಸುವುದು ರಾಷ್ಟಿçÃಯ ವಿಜ್ಞಾನ ದಿನ ಆಚರಣೆಯ ಉದ್ದೇಶವಾಗಿದೆ. ಆದರೆ, ಫೆ. ೨೮ ರಂದೇ ರಾಷ್ಟಿçÃಯ ವಿಜ್ಞಾನ ದಿನವನ್ನು ಏಕೆ ಆಚರಿಸಲಾಗುತ್ತದೆ ಎಂಬುದೇ ಇಲ್ಲಿ ಬಹಳ ಮಹತ್ವ ಪಡೆದುಕೊಂಡಿದೆ.

ರಾಮನ್ ಎಫೆಕ್ಟ್

೧೯೨೮ ರ ಫೆ.೨೮ ರಂದು ಡಾ. ಸಿ.ವಿ. ರಾಮನ್ ಅವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಸಭಾಂಗಣದಲ್ಲಿ ಭಾಷಣ ಮಾಡುತ್ತಾ ತಮ್ಮ ಸಂಶೋಧನೆಯಿAದ ಬೆಳಕಿನ ಚದುರುವಿಕೆಯ ಪರಿಣಾಮಗಳ ಸಿದ್ಧಾಂತ ವಿವರಿಸಿದರು. ಇದನ್ನು ೨೦ನೇ ಶತಮಾನದ ಅತ್ಯಂತ ಪ್ರಮುಖ ವೈಜ್ಞಾನಿಕ ಸಂಶೋಧನೆ ಎಂದು ಅವರು ಘೋಷಣೆ ಮಾಡಿದ್ದರು.

ಮುಂದೆ ಆ ಸಂಶೋಧನೆಯು ರಾಮನ್ ಪರಿಣಾಮ (ರಾಮನ್ ಎಫೆಕ್ಟ್) ಎಂದು ಜಗತ್ಪçಸಿದ್ಧವಾಯಿತು. ಈ ಸಂಶೋಧನೆಗಾಗಿಯೇ ಸರ್ ಸಿ.ವಿ. ರಾಮನ್ ಅವರಿಗೆ ೧೯೩೦ ರಲ್ಲಿ ನೋಬೆಲ್ ಪಾರಿತೋಷಕ ಲಭಿಸಿತು. ವಿಜ್ಞಾನ ವಿಭಾಗದಿಂದ ನೋಬೆಲ್ ಪಡೆದ ಏಷ್ಯಾದ ಮೊಟ್ಟ ಮೊದಲ ವಿಜ್ಞಾನಿ ಎಂಬ ಖ್ಯಾತಿ ರಾಮನ್ ಅವರಿಗೆ ದೊರಕಿತು.

೧೯೮೭ ರಿಂದ ದೇಶಾದ್ಯಂತ ಶಾಲಾ-ಕಾಲೇಜುಗಳು, ವಿಶ್ವ ವಿದ್ಯಾನಿಲಯಗಳು, ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ರಾಷ್ಟಿçÃಯ ವಿಜ್ಞಾನ ದಿನ ಆಚರಿಸಿಕೊಂಡು ಬರಲಾಗುತ್ತಿದೆ.

ಜಗತ್ತಿಗೆ ರಾಮನ್ ಎಫೆಕ್ಟ್ ಸಿದ್ಧಾಂತ ನೀಡಿದ ಮಹತ್ವದ ದಿನ

ವಿಶ್ವಕ್ಕೆ ರಾಮನ್ ಪರಿಣಾಮವು ವಿಜ್ಞಾನ ಕ್ಷೇತ್ರದಲ್ಲಿ ಹಲವು ಆವಿಷ್ಕಾರಗಳಿಗೆ ಎಡೆಮಾಡಿಕೊಟ್ಟಿತು. ಹಲವು ವರ್ಷಗಳ ಸತತ ಅಧ್ಯಯನ ಮತ್ತು ಪ್ರಯೋಗಗಳ ನಂತರ ರಾಮನ್ ಪರಿಣಾಮ ಫಲ ನೀಡಿತು.

ರಾಮನ್ ಅವರ ಜೀವನದ ಪರಿಚಯ

ಸಿ.ವಿ. ರಾಮನ್ ಅವರ ಪೂರ್ಣ ಹೆಸರು ಚಂದ್ರಶೇಖರ ವೆಂಕಟರಾಮನ್. ಅವರು ತಮಿಳುನಾಡಿನ ಕಾವೇರಿ ತೀರದ ತಿರುಚನಾಪಳ್ಳಿಯಲ್ಲಿ ೧೯೮೮ ರ ನವೆಂಬರ್ ೭ ರಂದು ಜನಿಸಿದರು. ಅವರ ತಂದೆ ಚಂದ್ರಶೇಖರ್ ಅಯ್ಯರ್, ಅವರು ಗಣಿತ ಹಾಗೂ ಭೌತವಿಜ್ಞಾನದ ಶಿಕ್ಷಕರಾಗಿದ್ದರು. ಅಂದಿನ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ತಮ್ಮ ಶಿಕ್ಷಣ ಮುಗಿಸಿದ ರಾಮನ್, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉನ್ನತ ಸ್ಥಾನಗಳಿಸುವ ಮೂಲಕ ಕಲ್ಕತ್ತದಲ್ಲಿ ಅಸಿಸ್ಟೆಂಟ್ ಅಕೌಂಟೆAಟ್ ಜನರಲ್ ಆಗಿ ನೇಮಕಗೊಂಡರು. ಸರ್ಕಾರದಲ್ಲಿ ಅವರು ಉನ್ನತ ಹುದ್ದೆ ಅಲಂಕರಿಸಿದ್ದರೂ ಅವರ ವಿಜ್ಞಾನದ ಕಡೆಗಿನ ತುಡಿತ ಹಾಗೆಯೇ ಉಳಿದಿತ್ತು. ಅದರ ಪರಿಣಾಮವಾಗಿ ಆ ಹುದ್ದೆಯನ್ನು ತ್ಯಜಿಸಿ ಅವರು ಕಲ್ಕತ್ತ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದರು. ಮುಂದೆ ಅವರು ಬೆಂಗಳೂರಿನ ಇಂಡಿಯನ್ ಇನ್ಸಿ÷್ಟಟ್ಯೂಟ್ ಆಫ್ ಸೈನ್ಸ್ ನಿರ್ದೇಶಕರಾಗಿ ಕಾರ್ಯನಿರ್ವಹಿಸುವ ಮೂಲಕ ತಮ್ಮ ಕೊನೆಯ ಉಸಿರಿನ ತನಕ ವಿವಿಧ ಸಂಶೋಧನೆಗಳಲ್ಲಿ ಮಗ್ನರಾಗಿದ್ದರು.

ಭಾರತಕ್ಕೆ ಎರಡನೇ ನೋಬೆಲ್ ಪಾರಿತೋಷಕ ತಂದುಕೊಟ್ಟ ರಾಮನ್ ಅವರು ಅಭಿಜಾತ ವಿಜ್ಞಾನಿ. ತಮ್ಮ ಸುತ್ತಲಿನ ನಿಸರ್ಗವನ್ನು ತೆರೆದ ಕಣ್ಣುಗಳಿಂದ, ವಿಶ್ಲೇಷಣಾತ್ಮಕ ಬುದ್ಧಿಯಿಂದ ಪ್ರಕೃತಿಯ ರಹಸ್ಯಗಳನ್ನು ವೈಜ್ಞಾನಿಕವಾಗಿ ಬಯಲುಗೊಳಿಸಿದರು. ಬೆಂಗಳೂರಿನ ಟಾಟಾ ವೈಜ್ಞಾನಿಕ ಸಂಸ್ಥೆಯಿAದ ನಿವೃತ್ತಿ ಹೊಂದಿ, ಪೂರ್ವ ನಿಯೋಜಿತ ಯೋಜನೆಯಂತೆ ಬೆಂಗಳೂರಿನಲ್ಲಿ ತಮ್ಮದೇ ಆದ ‘ರಾಮನ್ ಸಂಶೋಧನಾ ಸಂಸ್ಥೆ’ ಆರಂಭಿಸಿ ಸಂಶೋಧನೆ ಮುಂದುವರಿಸಿದರು.

ಸಮುದ್ರ ಏಕೆ ನೀಲಿಯಾಗಿದೆ ?

ಸರ್ ಸಿ.ವಿ. ರಾಮನ್ ಅವರು ಒಮ್ಮೆ ಹಡಗಿನಲ್ಲಿ ಪ್ರಯಾಣಿಸುವಾಗ ಅವರಿಗೆ ಸಮುದ್ರ ಏಕೆ ಯಾವಾಗಲೂ ನೀಲಿಯಾಗಿಯೇ ಕಾಣುತ್ತದೆ ಎಂಬ ಪ್ರಶ್ನೆ ಎದುರಾಯಿತಂತೆ. ಅದು ಆಕಾಶದ ಬಣ್ಣದ ಪ್ರತಿಫಲನವೋ ಅಥವಾ ಈ ನೀಲಿ ಬಣ್ಣದ ಹಿಂದೆ ಬೇರೇನಾದರೂ ರಹಸ್ಯ ಅಡಗಿದೆಯೋ ಎಂದು ಪತ್ತೆ ಮಾಡಲು ಹೊರಟ ರಾಮನ್ ಸೂರ್ಯನ ಬೆಳಕು ನೀರಿನಲ್ಲಿ ಚದುರಿಹೋಗುವುದೇ ಸಮುದ್ರದ ನೀರು ನೀಲಿಯಾಗಿ ಕಾಣಲು ಕಾರಣ ಎಂಬ ವಿಷಯವನ್ನು ಕಂಡುಹಿಡಿದರು. ಇದೇ ಅಂಶ ಅವರು ತಮ್ಮ ಅಧ್ಯಯನವನ್ನು ಮುಂದುವರೆಸಲು ಪ್ರೇರಣೆಯಾಯಿತು.

ರಾಯಲ್ ಸೊಸೈಟಿಯು ಸಿ.ವಿ.ರಾಮನ್ ಅವರಿಗೆ ‘ಸರ್’ ಪದವಿ ನೀಡಿ ಪುರಷ್ಕರಿಸಿದ ನಂತರ ಸರ್ ಸಿ.ವಿ. ರಾಮನ್‌ರ ಹೆಸರು ಹೆಚ್ಚು ಪ್ರಚಲಿತವಾಗಿಬಿಟ್ಟಿತು. ರಾಮನ್‌ರು ಪ್ರಯೋಗ ಮಾಡಿದ್ದು ಕೇವಲ ರೂ. ೩೦೦ ವೆಚ್ಚದಲ್ಲಿ. ಅವರು ತಮ್ಮ ಪ್ರಯೋಗಗಳಿಗೆ ಲಕ್ಷಾಂತರ ರೂಪಾಯಿಗಳನ್ನೇನೂ ಬಳಸಿರಲಿಲ್ಲ. ಅವರು ಪ್ರಯೋಗಾಲಯದಲ್ಲಿ ಬಳಸಿದ್ದು ಕೇವಲ ಗಾಜಿನ ದುಂಡುತಳದ ಫ್ಲಾಸ್ಕ್ ಮತ್ತು ಟಾಲೀನ್ ನಂತರ ಸಾವಯವ ದ್ರಾವಕ ಮಾತ್ರ. ಆಕಾಶದ ಬಣ್ಣ ನೀಲಿ ಯಾಕೆ ? ಎಂಬುದರ ಬಗ್ಗೆ ರಾಲೆ ಎಂಬ ವಿಜ್ಞಾನಿ ಪ್ರಯೋಗ ಕೈಗೊಂಡು ಯಶಸ್ವಿಯಾಗಿದ್ದರು. ಅದರ ಮುಂದುವರಿದ ಭಾಗವಾಗಿ ರಾಮನ್‌ರು ದ್ರವಗಳಲ್ಲಿ ಬೆಳಕಿನ ಚದುರುವಿಕೆ ಬಗ್ಗೆ ಅಧ್ಯಯನ ಕೈಗೊಂಡರು. ಅವರ ಈ ಸಂಶೋಧನೆಯು ಅನೇಕ ಸಂಶೋಧನೆಗಳಿಗೆ ನಾಂದಿ ಹಾಡಿತು. ಸರ್ ಸಿ.ವಿ.ರಾಮನ್ ಅವರ ಎಲ್ಲಾ ಸಂಶೋಧನೆಗಳ ದ್ಯೋತಕವಾಗಿ ತಲೆಯೆತ್ತಿ ನಿಂತಿದೆ ನಮ್ಮ ಬೆಂಗಳೂರಿನ ‘ರಾಮನ್ ಸಂಶೋಧನಾ ಕೇಂದ್ರ’.

ನೋಬೆಲ್ ಪ್ರಶಸ್ತಿ ಪುರಸ್ಕೃತ ಸರ್ ಸಿ.ವಿ. ರಾಮನ್ ಅವರು ಸ್ಥಾಪಿಸಿದ ಈ ಸಂಶೋಧನಾ ಕೇಂದ್ರ ಅವರ ಕನಸಿನ ಕೂಸಾಗಿತ್ತು. ಭಾರತೀಯ ವಿಜ್ಞಾನ ಅಕಾಡೆಮಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವಾಗ ೧೯೩೪ ರಲ್ಲಿ ಅವರು ಮೈಸೂರು ಮಹಾರಾಜರನ್ನು ಸಂಪರ್ಕಿಸಿ, ತಮ್ಮ ಕನಸನ್ನು ಹೇಳಿಕೊಂಡಾಗ ಮಹಾರಾಜರು ಬೆಂಗಳೂರಿನಲ್ಲಿ ೧೦ ಎಕರೆ ಜಮೀನನ್ನು ಮಂಜೂರು ಮಾಡಿದ್ದರು. ೧೯೪೮ ರಲ್ಲಿ ರಾಮನ್‌ರು ಭಾರತೀಯ ವಿಜ್ಞಾನ ಸಂಸ್ಥೆಯ ಭೌತವಿಜ್ಞಾನದ ಮುಖ್ಯಸ್ಥರಾಗಿ ನಿವೃತ್ತರಾಗುವವರೆಗೂ ಈ ಭೂಮಿ ಬಳಕೆಯಾಗಿರಲಿಲ್ಲ. ನಂತರ ಅವರ ನಿವೃತ್ತಿಯ ನಂತರ ಇದು ಸ್ಥಾಪನೆಗೊಂಡು ಕಾರ್ಯಾರಂಭ ಮಾಡಿತು.

ಸರಳ ವ್ಯಕ್ತಿತ್ವದ ರಾಮನ್

ನೋಬೆಲ್ ಪಾರಿತೋಷಕ ಪಡೆದರೂ ರಾಮನ್‌ರಿಗೆ ಯಾವುದೇ ಗತ್ತು, ಹಮ್ಮು ಇರಲಿಲ್ಲ. ತಮ್ಮ ಮನೆಯಲ್ಲಿಯೇ ಅನೇಕ ಪ್ರಯೋಗಗಳನ್ನು ಮಾಡುತ್ತಿದ್ದರು. ಸಂಶೋಧನಾ ಕೇಂದ್ರದಲ್ಲಿ ತಮ್ಮ ಇಳಿವಯಸ್ಸಿನಲ್ಲಿಯೂ ಸಂಶೋಧನೆಗಳಲ್ಲಿ ತೊಡಗಿದ್ದರು. ವೈಜ್ಞಾನಿಕ ಸಂಶೊಧನೆಗೆ ಬೇಕಾಗಿರುವುದು ಸ್ವ ಆಲೋಚನೆ ಮತ್ತು ಪರಿಶ್ರಮವೇ ಹೊರತು ಉಪಕರಣಗಳಲ್ಲ ಎಂದು ಅವರು ಹೇಳುತ್ತಿದ್ದರು.

ರಾಮನ್‌ರಿಗೆ ಸಂಗೀತದಲ್ಲೂ ತುಂಬಾ ಆಸಕ್ತಿಯಿತ್ತು. ಸಂಗೀತದಿAದ ಮನಸ್ಸನ್ನು ಕೇಂದ್ರೀಕರಿಸಬಹುದು ಎಂದು ಅವರು ನಂಬಿದ್ದರು. ಅವರು ಬಿಡುವು ಸಿಕ್ಕಾಗಲೆಲ್ಲಾ ವೀಣೆಯ ತಂತಿಗಳ ಮೇಲೆ ಕೈಯಾಡಿಸಿ ನಾದ ಹೊರಡಿಸುತ್ತಿದ್ದರು. ಅವರು ನುಡಿಸುತ್ತಿದ್ದ ವೀಣೆಯನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಕೊನೆಗಾಲದಲ್ಲಿ ರಾಮನ್‌ರ ಆರೋಗ್ಯ ಸರಿ ಇರಲಿಲ್ಲ. ಆದರೂ ಸಂಶೋಧನೆಗಳನ್ನು ಮುಂದುವರೆಸಿ ತಾವೇ ಕಟ್ಟಿ ಬೆಳೆಸಿದ ಸಂಸ್ಥೆಯಲ್ಲಿ ೧೯೭೦ ರ ನವೆಂಬರ್ ತಿಂಗಳ ೧೧ನೇ ತಾರೀಖಿನಂದು ತಮ್ಮ ೮೨ನೇ ಇಳಿವಯಸ್ಸಿನಲ್ಲಿ ನಿಧನರಾದರು. ಅಂದು ಇಡೀ ಜಗತ್ತಿನ ವೈಜ್ಞಾನಿಕ ಲೋಕವೇ ಅಂದು ಶೋಕಿಸಿತು.

ಅವರ ಪಾರ್ಥಿವ ಶರೀರವನ್ನು ಸಂಸ್ಥೆಯ ಕಟ್ಟಡದ ಬಯಲಿನಲ್ಲಿ ದಹಿಸಲಾಯಿತು. ಅಲ್ಲಿಯೇ ಅವರ ಪುತ್ರ ರಾಧಾಕೃಷ್ಣನ್ ಆಸ್ಟೆçÃಲಿಯಾದ ‘ಡೊನ್ನಿಯಲ್ ಸ್ಮಿತಿ’ ಎಂಬ ಹೂಗಿಡದ ಸಸಿಯನ್ನು ನೆಟ್ಟರು. ಆ ಗಿಡ ಈಗ ಎತ್ತರವಾಗಿ ಬೆಳೆದು ಹಳದಿ ವರ್ಣದ ಹೂಗಳನ್ನು ಬಿಡುತ್ತಿದೆ. ಅದನ್ನು ನೋಡಿ ನಾವು ಫೋಟೋ ತೆಗೆದಾಗಲೆಲ್ಲಾ ಭಾರತರತ್ನ ಸಿ.ವಿ. ರಾಮನ್ನರ ವ್ಯಕ್ತಿತ್ವ ಕಂಗಳು ನಮ್ಮ ಮುಂದೆ ನಿಲ್ಲುತ್ತದೆ.

ಸರ್ ಸಿ.ವಿ. ರಾಮನ್ ಅವರ ವೈಜ್ಞಾನಿಕ ಚಿಂತನೆ ಹಾಗೂ ಅವರ ಸಂಶೋಧನೆಗಳು ಇಂದು ನಮ್ಮ ವಿದ್ಯಾರ್ಥಿಗಳು ಹಾಗೂ ಯುವ ವಿಜ್ಞಾನಿಗಳಿಗೆ ವಿಜ್ಞಾನದ ಹೊಸ ಹೊಸ ಸಂಶೋಧನೆಗಳು ಹಾಗೂ ಮೂಲ ವಿಜ್ಞಾನ ಕಲಿಕೆಗೆ ಹೆಚ್ಚು ಪ್ರೇರಣೆ ನೀಡುತ್ತವೆ.

- ಟಿ.ಜಿ. ಪ್ರೇಮಕುಮಾರ್, ಮುಖ್ಯೋಪಾಧ್ಯಾಯರು, ಸರ್ಕಾರಿ ಪ್ರೌಢಶಾಲೆ, ಕೂಡುಮಂಗಳೂರು.