ಚೆಟ್ಟಳ್ಳಿ, ಫೆ. ೨೭: ಮಾಹಾಶಿವರಾತ್ರಿಯ ಅಂಗವಾಗಿ ಮಾರ್ಚ್ ೧ ರಂದು ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ೨ನೇ ವರ್ಷದ ಶಿವರಾತ್ರಿಯ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ತಿಳಿಸಿದರು. ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಜನಪರ ಹೋರಾಟ ಸಮಿತಿ, ವೀರಾಂಜನೇಯ ಯುವಕ ಸಂಘ ಹಾಗೂ ಕೂಡ್ಲೂರು ಚೆಟ್ಟಳ್ಳಿಯ ಶ್ರೀ ವಿನಾಯಕ ದೇವಾಲಯ ಸಮಿತಿಯ ವತಿಯಿಂದ ನಡೆಯುವ ಕಾರ್ಯಕ್ರಮದಲ್ಲಿ ಮಾರ್ಚ್ ೧ರ ಮಂಗಳವಾರ ಸಂಜೆ ೫.೩೦ಕ್ಕೆ ಸಹಕಾರ ಸಂಘದ ಮುಂಭಾಗದಲ್ಲಿ ಪ್ರತಿಷ್ಠಾಪಿಸಿರುವ ಪಶುಪತಿನಾಥ, ವಿನಾಯಕ, ಕಾವೇರಿ ಮಾತೆ, ಶ್ರೀ ಕೃಷ್ಣ, ಗೋಮಾತೆ, ನರೇಂದ್ರ ಮೋದಿ ಭವನದಲ್ಲಿರುವ ಶ್ರೀ ಆಂಜನೇಯ, ಶ್ರೀ ಮಹಾವಿಷ್ಣುವಿನ ಮೂರ್ತಿಗೆ ಎಂಎಲ್‌ಸಿ ಮಂಡೇಪAಡ ಸುಜಾ ಕುಶಾಲಪ್ಪನವರು ಹಾಗೂ ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷ, ವಕೀಲರಾದ ಕೃಷ್ಣಮೂರ್ತಿ ಅವರು ದೀಪ ಬೆಳಗುವುದರ ಮೂಲಕ ಅರ್ಚಕರಿಂದ ವಿಶೇಷ ಅಲಂಕಾರದೊAದಿಗೆ ಮಂಗಳಾರತಿ ನಡೆಯಲಿದೆ. ಸಂಜೆ ೭ ಗಂಟೆಯಿAದ ಗೋಣಿಕೊಪ್ಪಲಿನ ಯುವ ಗಾಯಕ ಅನ್ವಿನ್ ಕುಮಾರ್ ಸಿ.ವಿ. ಅವರಿಂದ ಭಜನಾ ಕಾರ್ಯಕ್ರಮ, ರಾತ್ರಿ ೮.೩೦ಕ್ಕೆ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನೆರವೇರಲಿದೆ ಎಂದು ಬಲ್ಲಾರಂಡ ಮಣಿ ಉತ್ತಪ್ಪ ತಿಳಿಸಿದ್ದಾರೆ. ಪತ್ರಿಕಾಗೊಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಕಣಜಾಲು ಪೂವಯ್ಯ, ನಿರ್ದೇಶಕರಾದ ಪುತ್ತರಿರ ಸೀತಮ್ಮ, ಮರದಾಳು ಉಲ್ಲಾಸ, ಬಟ್ಟೀರ ಅಪ್ಪಣ್ಣ, ಪೇರಿಯನ ಪೂಣಚ್ಚ, ಪುತ್ತರಿರ ಶಿವುನಂಜಪ್ಪ, ಧನಂಜಯ ಟಿ.ಎಸ್, ನೂಜಿಬೈಲು ನಾಣಯ್ಯ, ಬಿ.ಎಂ. ಕಾಶಿ ಹಾಗೂ ಅಡಿಕೇರ ಮುತ್ತಪ್ಪ ಹಾಜರಿದ್ದರು.