ಮಡಿಕೇರಿ, ಫೆ. ೨೬: ಪೋಕ್ಸೋ ಕಾಯ್ದೆ ೨೦೧೨ ನಿಯಮ ೩ ರಡಿ ಸಂತ್ರಸ್ತ ಮಕ್ಕಳ ಸಹಾಯಕ್ಕಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಅರ್ಹರನ್ನು ನೇಮಕ ಮಾಡಿಕೊಳ್ಳಬೇಕಿದ್ದು, ಇದರಲ್ಲಿ ಸಂಜ್ಞಾ ತಜ್ಞರು (ಇಂಟರ್ ಪ್ರಿಟರ್), ಅನುವಾದಕರು, ಭಾಷಾಂತರಕಾರರು (ಟ್ರಾನ್ಸ್ಲೇಟರ್) ಹಾಗೂ ನಿಯಮ (೩) ಮತ್ತು ೨ (ಡಿ) ಅಡಿಯಲ್ಲಿ ವಿಶೇಷ ಶಿಕ್ಷಕರ ಅವಶ್ಯಕತೆ ಇರುತ್ತದೆ.
ಸಂಜ್ಞಾ ತಜ್ಞರು ವಾಕ್ ಮತ್ತು ಶ್ರವಣ ವಿಷಯದಲ್ಲಿ ಸಂಕೇತ ಭಾಷೆ ಯಲ್ಲಿ ತರಬೇತಿ, ತಜ್ಞರಾಗಿರಬೇಕು. ವಾಕ್ ಮತ್ತು ಶ್ರವಣ ದೋಷ ಹೊಂದಿ ರುವ ಮಕ್ಕಳೊಂದಿಗೆ ಸಂಭಾಷಣೆ ನಡೆಸಲು ಪರಿಣತಿ ಹೊಂದಿರಬೇಕು.
ಅನುವಾದಕರು/ ಭಾಷಾಂತ ರಕಾರರು ಅಸ್ಸಾಂ, ಬಂಗಾಳಿ, ಹಿಂದಿ, ಇಂಗ್ಲೀಷ್, ತಮಿಳು, ಮಲೆಯಾಳಂ ಭಾಷೆಯ ಮಕ್ಕಳೊಂದಿಗೆ ಸಂವಹಿಸಿ ಅವರ ಮಾತುಗಳನ್ನು ಕನ್ನಡ ಭಾಷೆ ಅನುವಾದ ಮಾಡಬಲ್ಲವರಾಗಿರಬೇಕು.
ವಿಶೇಷ ಶಿಕ್ಷಕರು ವಿಶೇಷ ಅಗತ್ಯ ವಿರುವ ಮಕ್ಕಳೊಂದಿಗೆ ಸಂವಹನದಲ್ಲಿ ತರಬೇತಿಯನ್ನು ಹೊಂದಿರಬೇಕು (ಕಲಿಕಾದೋಷ ಮತ್ತು ಭಾವನಾತ್ಮಕ ದೈಹಿಕ, ಬೆಳವಣಿಗೆ ಹೊಂದಿರುವ ಮಕ್ಕಳೊಂದಿಗೆ ಸಂವಹಿಸ ಬಲ್ಲವರಾಗಿರಬೇಕು. ಆಯ್ಕೆಯಾದ ಈ ಬೆಂಬಲಿಗರಿಗೆ ಪ್ರತೀ ಪ್ರತೀ ಪ್ರಕರಣಕ್ಕೆ ರೂ. ಒಂದು ಸಾವಿರ ಗೌರವಧನ ನೀಡಲಾಗುವುದು. ಸೂಕ್ತ ವಿದ್ಯಾರ್ಹತೆ ಹಾಗೂ ಅನುಭವ ಹೊಂದಿರುವವರು ಅರ್ಜಿ ಸಲ್ಲಿಬಹುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ತಿಳಿಸಿದ್ದಾರೆ.