ಸಿದ್ದಾಪುರ, ಫೆ ೨೫: ರಾಷ್ಟಿçÃಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ವತಿಯಿಂದ ಓ.ಡಿ.ಪಿ ಸ್ವ-ಸಹಾಯ ಸಂಘದ ನಾಯಕರುಗಳಿಗೆ ತರಬೇತಿ ಕಾರ್ಯಕ್ರಮವು ನೆಲ್ಯಹುದಿಕೇರಿ ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಜಿಲ್ಲಾ ನಬಾರ್ಡ್ ಬ್ಯಾಂಕ್ನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ರಮೇಶ್ ಬಾಬು ಉದ್ಘಾಟಿಸಿದರು.
ಸ್ವ-ಸಹಾಯ ಸಂಘದ ನಾಯಕರಿಗೆ ಶಿಕ್ಷಣದ ಬಗ್ಗೆ ಹಾಗೂ ಮಕ್ಕಳ ಉನ್ನತ ಶಿಕ್ಷಣದ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸುವಂತೆ ಅವರು ಮಾಹಿತಿ ನೀಡಿದರು. ಮಹಿಳೆಯರು ಸ್ವಾವಲಂಬಿ ಬದುಕನ್ನು ಕಂಡುಕೊAಡು ಸಮಾಜದ ಮುಖ್ಯವಾಹಿನಿಗೆ ಬರುವಂತೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಓ.ಡಿ.ಪಿ ಸಂಸ್ಥೆಯ ಸಂಯೋಜಕಿ ಜಾಯ್ಸ್ ಮಿನೇಜಸ್ ಮಾತನಾಡಿದರು. ಕಾರ್ಯಕ್ರಮದಲ್ಲಿ ನೆಲ್ಯಹುದಿಕೇರಿ ಗ್ರಾ.ಪಂ ಪಿ.ಡಿ.ಓ ಅನಿಲ್ ಕುಮಾರ್ ಗ್ರಾ.ಪಂ ಉಪಾಧ್ಯಕ್ಷೆ ದಮಯಂತಿ, ಸದಸ್ಯರುಗಳಾದ ಸೆಫಿಯಾ, ಪ್ರಮೀಳಾ, ಎಂ.ಆರ್ ಪೂವಮ್ಮ ಹಾಗೂ ಓ.ಡಿ.ಪಿ ಸಂಸ್ಥೆಯ ಪದಾಧಿಕಾರಿಗಳಾದ ವಿಮಲ, ವಿಜಯ ನಾರಾಯಣ ಇನ್ನಿತರರು ಹಾಜರಿದ್ದರು.