ಮಡಿಕೇರಿ, ಫೆ. ೨೫: ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧಕ ಆಸ್ಪತ್ರೆಯ ದಂತ ಚಿಕಿತ್ಸಾ ವಿಭಾಗದಲ್ಲಿ ಸುಮಾರು ರೂ. ೧೫ ಲಕ್ಷ ವೆಚ್ಚದಲ್ಲಿ ನೂತನವಾಗಿ ಅಳವಡಿಸಿ ರುವ ಉಪಕರಣ ಹಾಗೂ ನವೀಕರಣಗೊಂಡ ವಿಭಾಗವನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮತ್ತು ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಅವರು ಶುಕ್ರವಾರ ಉದ್ಘಾಟಿಸಿರು.

ಬಳಿಕ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ತಮ್ಮ ದಂತವನ್ನು ಸ್ವಚ್ಛಗೊಳಿಸಿಕೊಳ್ಳುವ ಮೂಲಕ ನವೀಕರಣಗೊಂಡ ದಂತ ಚಿಕಿತ್ಸಾ ವಿಭಾಗಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ದಂತ ಚಿಕಿತ್ಸೆಗಾಗಿ ಮೈಸೂರು ಮತ್ತು ಮಂಗಳೂರಿಗೆ ಹೋಗಬೇಕಿತ್ತು, ಸದ್ಯ ಅತ್ಯಾಧುನಿಕ ದಂತ ಉಪಕರಣಗಳನ್ನು ಒಳಗೊಂಡ ಚಿಕಿತ್ಸಾ ವಿಭಾಗವನ್ನು ಜಿಲ್ಲಾಸ್ಪತ್ರೆಯಲ್ಲಿ ಆರಂಭಿಸಲಾಗಿದೆ. ಆ ದಿಸೆಯಲ್ಲಿ ದಂತ ಚಿಕಿತ್ಸೆಗೆ ಸಂಬAಧಿಸಿ ದಂತೆ ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳ ಬಹುದಾಗಿದೆ

(ಮೊದಲ ಪುಟದಿಂದ) ಎಂದು ತಿಳಿಸಿದರು.

ದಂತ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಕೇದರನಾಥ ಅವರು ಮಾತನಾಡಿ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಯಲ್ಲಿಯೇ ಅತ್ಯಾಧುನಿಕ ಉಪಕರಣಗಳನ್ನು ಒಳಗೊಂಡಿರುವ ದಂತ ಚಿಕಿತ್ಸಾ ವಿಭಾಗದಲ್ಲಿ ದಂತಕ್ಕೆ ಸಂಬAಧಿಸಿದAತೆ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ ಎಂದರು.

ಮುಖ, ದವಡೆ, ಸೇರಿದಂತೆ ಮತ್ತಿತರ ಪ್ರಮುಖ ಶಸ್ತç ಚಿಕಿತ್ಸೆಯನ್ನು ಮಾಡಲಾಗುತ್ತದೆ. ಬಿಪಿಎಲ್ ಕುಟುಂಬಗಳಿಗೆ ಉಚಿತವಾಗಿ ಶಸ್ತç ಚಿಕಿತ್ಸೆ ಮಾಡಲಾಗುತ್ತದೆ. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ದಂತ ವಿಭಾಗದಲ್ಲಿ ಕಳೆದ ಒಂದು ವರ್ಷದಲ್ಲಿ ೪೦ಕ್ಕೂ ಹೆಚ್ಚು ಶಸ್ತç ಚಿಕಿತ್ಸೆ ಮಾಡಲಾಗಿದೆ ಎಂದು ದಂತ ವಿಭಾಗದ ಮುಖ್ಯಸ್ಥರು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ಕಾರ್ಯಪ್ಪ, ವೈದ್ಯಕೀಯ ಅಧೀಕ್ಷಕ ಡಾ. ಮಂಜುನಾಥ್, ಡಾ. ಜಯಲಕ್ಷಿö್ಮÃ ಎಂ. ಪಾಟ್ಕರ್ ಡಾ. ದೀಪ, ಡಾ. ಮನ್‌ಪ್ರೀತ್, ಡಾ. ದ್ಯಾನ್ ಕುಶಾಲಪ್ಪ, ಡಾ. ಸಾಗರ್, ಇತರರು ಇದ್ದರು.