ಮಡಿಕೇರಿ, ಫೆ. ೨೬: ಹಾಕತ್ತೂರು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ಸಂಘದ ಸದಸ್ಯರು ಪ್ರಕರಣಕ್ಕೆ ಸಂಬAಧಿಸಿದAತೆ ಸೂಕ್ತ ತನಿಖೆಗೆ ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಸಂಘದ ಸದಸ್ಯ ಎ.ಕೆ. ಚಿಣ್ಣಪ್ಪ ಮಾತನಾಡಿ, ಸಂಘದ ಬೈಲಾದ ಪ್ರಕಾರ ಮುಂಗಡ ಬಜೆಟ್ ಅನುಮತಿಯಿಲ್ಲದೆ ಹಣ ವೆಚ್ಚ ಮಾಡಲು ಅವಕಾಶವಿಲ್ಲ. ಆದರೆ, ಸನ್ಮಾನ ಸೇರಿದಂತೆ ಇತರೆ ಕಾರ್ಯಕ್ರಮ ಮಾಡುವ ಮೂಲಕ ದುಂದು ವೆಚ್ಚ ಮಾಡಿದ್ದಾರೆ ಎಂದು ಆರೋಪಿಸಿದರು.
ಸಂಘದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಆಡಳಿತ ಮಂಡಳಿಯ ಸಲಹೆಗಳನ್ನು ಗಾಳಿಗೆ ತೂರಿ ಆಡಳಿತ ನಡೆಸುತ್ತಿದ್ದು, ಈ ಬಗ್ಗೆ ಜಂಟಿ ನಿರ್ದೇಶಕರಿಗೆ ದೂರು ನೀಡಿದರೂ ಯಾವುದೇ ಪ್ರಯೋಜವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಸಂಬAಧಪಟ್ಟ ಅಧಿಕಾರಿಗಳು ಕೂಡಲೇ ಆಡಳಿತ ಮಂಡಳಿಯನ್ನು ಉಚ್ಛಾಟಿಸಿ, ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು. ಇಲ್ಲದಿದ್ದರೇ ಸಂಘದ ಮುಂಭಾಗ ಹೋರಾಟ ನಡೆಸುವುದಾಗಿ ಅವರು ಹೇಳಿದರು.
ಇತ್ತೀಚೆಗೆ ನಿವೃತ್ತಿ ಹೊಂದಿದ ಮಹಿಳಾ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯೊಬ್ಬರು ಹಾಜರಾತಿ ಪುಸ್ತಕದಲ್ಲಿ ರಜೆಯ ಲೆಕ್ಕದ ಮೇಲೆ ಬಿಳಿಶಾಹಿ ಹಾಕಿ ದೊಡ್ಡ ಮೊತ್ತದ ಅವ್ಯವಹಾರ ಮಾಡಿದ್ದರು. ನಂತರ ತನಿಖೆ ನಡೆಸಿದ ಸಂದರ್ಭ ಘಟನೆ ಬೆಳಕಿಗೆ ಬಂದಿದ್ದು, ಅಧಿಕಾರಿಯಿಂದ ೧೨೨ ದಿನದ ೨,೭೬,೦೦೦ ಹಣವನ್ನು ವಸೂಲಿ ಮಾಡಲಾಗಿದೆ. ಇದು ಕ್ರಿಮಿನಲ್ ಅಪರಾಧವಾದರೂ ತಪ್ಪಿತಸ್ತರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಬದಲು ಎರಡು ತಿಂಗಳವರೆಗೆ ಹೆಚ್ಚುವರಿಯಾಗಿ ಮುಂದುವರಿಸಿಕೊAಡು ಭಾರೀ ಮೊತ್ತದ ಉಡುಗೊರೆಯನ್ನು ನೀಡಿ ಸನ್ಮಾನಿಸಿ ಕಳುಹಿಸಲಾಗಿದೆ ಎಂಬ ಆರೋಪವಿರುವದಾಗಿ ದೂರಿದರು.
ಸಂಘದ ಅನುಭವಿ ಸದಸ್ಯರನ್ನು ಲೆಕ್ಕ ಪರಿಶೋಧಕರನ್ನಾಗಿ ನೇಮಿಸಿಕೊಳ್ಳಬೇಕಿತ್ತು. ಆದರೆ, ಸದಸ್ಯರನ್ನು ನೇಮಿಸದೆ ಗೊಬ್ಬರ ವಹಿವಾಟಿನಲ್ಲಿ ಲಕ್ಷಾಂತರ ಹಣ ತೋರಿಸಿ ಅವ್ಯವಹಾರ ನಡೆದಿದೆ. ನಂತರ ಹಣ ಹೊಂದಾಣಿಕೆ ಮಾಡಿ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ಮಾಡಲಾಗಿದೆ ಎಂದು ಆರೋಪಿಸಿದ ಅವರು, ಸಂಘದಲ್ಲಿ ಸದಸ್ಯರು ಕೋಟ್ಯಂತರ ರೂಪಾಯಿ ಠೇವಣಿ ಇರಿಸಿದ್ದು, ಬ್ಯಾಂಕಿನ ಅಭದ್ರತೆ ದೃಷ್ಠಿಯಿಂದ ಠೇವಣಿದಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಸದಸ್ಯರಾದ ಎ.ಸಿ. ಸೋಮಣ್ಣ, ಮಂದ್ರೀರ ವಿಜಯ್, ಎ.ಎಂ. ದೇವಯ್ಯ ಹಾಜರಿದ್ದರು.