ಶನಿವಾರಸಂತೆ, ಫೆ. ೨೫: ಸ್ಥಳೀಯ ಗ್ರಾ.ಪಂ. ಆಡಳಿತ ಮಂಡಳಿಯ ಸಾಮಾನ್ಯ ಸಭೆ ಗ್ರಾ.ಪಂ. ಅಧ್ಯಕ್ಷೆ ಸರೋಜ ಶೇಖರ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು. ಸಭೆಯಲ್ಲಿ ಪಟ್ಟಣದ ಕೆಆರ್‌ಸಿ ವೃತ್ತದಲ್ಲಿರುವ ಅಂಗಡಿ - ಮುಂಗಟ್ಟು ಕಟ್ಟಡದ ಮುಂಭಾಗದಲ್ಲಿ ಮಾಲೀಕರು ಗ್ರಾ.ಪಂ.ಯಿAದ ನೀಡಿರುವ ಪರವಾನಿಗೆ ನಿಯಮವನ್ನು ಮೀರಿ ರಸ್ತೆ ಅಂಚಿಗೆ ತಲುಪುವ ಹಾಗೆ ಹೆಚ್ಚುವರಿಯಾಗಿ ಶೀಟ್ ಅಳವಡಿಸಿರುವುದನ್ನು ತೆರವುಗೊಳಿಸುವಂತೆ ಸದಸ್ಯರಾದ ಎಸ್.ಎನ್.ರಘು, ಸರ್ದಾರ್ ಅಹಮ್ಮದ್ ಪ್ರಸ್ತಾಪಿಸಿದರು. ಈ ಬಗ್ಗೆ ಮಾಲೀಕರಿಗೆ ನೋಟೀಸ್ ನೀಡಿ ಬಳಿಕ ತೆರವುಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಪಿಡಿಓ ಮೇದಪ್ಪ ತಿಳಿಸಿದರು.

ಪಟ್ಟಣದಲ್ಲಿ ಅಂಗಡಿ - ಮುಂಗಟ್ಟು, ಬಾಡಿಗೆ ಕಟ್ಟಡ ಮುಂತಾದವುಗಳಿAದ ಪರವಾನಗೆ ರೂಪದಲ್ಲಿ ಬರಬೇಕಾಗಿರುವ ಆದಾಯ ವಸೂಲಾತಿ ಪ್ರಮಾಣ ಕಮ್ಮಿಯಾಗುತ್ತಿದ್ದು, ಬಾಕಿ ವಸೂಲಾತಿ ಪ್ರಮಾಣವೇ ಹೆಚ್ಚಾಗಿದ್ದು, ಈ ಸಂಬAಧ ಪಿಡಿಓ ಅವರು ಗ್ರಾ.ಪಂ.ಗೆ ಬಾಕಿಯಾಗಿರುವ ಆದಾಯವನ್ನು ವಸೂಲಾತಿ ಮಾಡಲು ವಿಫಲರಾಗಿದ್ದಾರೆ ಎಂದು ಆಡಳಿತಾರೂಢ ಸದಸ್ಯ ಎಸ್.ಸಿ. ಶರತ್ ಶೇಖರ್ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಇತರೆ ಸದಸ್ಯರು ಸಹ ಧ್ವನಿಗೂಡಿಸಿದರು. ಆದರೆ, ಈ ಬಗ್ಗೆ ಪಿಡಿಓ ಉತ್ತರ ನೀಡದೆ ಮೌನವಹಿಸಿದಾಗ ಸದಸ್ಯರು ಆದಾಯ ವಸೂಲಾತಿ ಮಾಡಲು ಪಿಡಿಓ ಹಾಗೂ ಗ್ರಾ.ಪಂ. ಅಧ್ಯಕ್ಷರ ಜವಾಬ್ದಾರಿಯೂ ಸಹ ಆಗಿರುವುದರಿಂದ ಬಾಕಿ ಉಳಿಸಿಕೊಂಡಿರುವ ಮಾಲೀಕರಿಗೆ ನೋಟೀಸ್ ನೀಡಿ ವಸೂಲಾತಿ ಮಾಡುವಂತೆ ಸಭೆಯಲ್ಲಿ ನಿರ್ಣಯಿಸಲಾಯಿತು.

ಸಭೆಯಲ್ಲಿ ಗ್ರಾ.ಪಂ. ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು. ಗ್ರಾ.ಪಂ. ಉಪಾಧ್ಯಕ್ಷ ಎಸ್.ಆರ್. ಮಧು, ಸದಸ್ಯರಾದ ಎಸ್.ಎನ್.ರಘು, ಸರ್ದಾರ್ ಅಹಮ್ಮದ್, ಎಸ್.ಸಿ. ಶರತ್ ಶೇಖರ್, ಎನ್.ಎ. ಆದಿತ್ಯಗೌಡ, ಸರಸ್ವತಿ, ಗೀತಹರೀಶ್, ಫರ್ಜಾನ್ ಶಾಹಿದ್, ಪಿಡಿಓ ಮೇದಪ್ಪ, ಕಾರ್ಯದರ್ಶಿ ತಮ್ಮಯ್ಯ ಆಚಾರ್, ಗ್ರಾ.ಪಂ. ಸಿಬ್ಬಂದಿ ವಸಂತ್, ಸೌಮ್ಯ, ಫೌಜಿಯ ಮುಂತಾದವರು ಹಾಜರಿದ್ದರು.