ಸೋಮವಾರಪೇಟೆ, ಫೆ. ೨೬: ಅರಸಿನಕುಪ್ಪೆ-ಸಿದ್ಧಲಿಂಗಪುರದಲ್ಲಿರುವ ಶ್ರೀ ಮಂಜುನಾಥ ಸ್ವಾಮಿ ಹಾಗೂ ನವನಾಗನಾಥ ಸನ್ನಿಧಿಯಲ್ಲಿ ಮಾರ್ಚ್ ೧ ರಂದು ಮಹಾ ಶಿವರಾತ್ರಿ ಜಾತ್ರೋತ್ಸವ ನಡೆಯಲಿದೆ ಎಂದು ದೇವಾಲಯ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಪ್ರಕಾಶ್ ತಿಳಿಸಿದ್ದಾರೆ.

ಮಾ. ೧ ರಂದು ಬೆಳಿಗ್ಗೆ ೬ ಗಂಟೆಯಿAದ ಪೂಜಾ ಕಾರ್ಯಗಳು ಆರಂಭಗೊಳ್ಳಲಿದ್ದು, ದೇವಾಲಯದಲ್ಲಿ ಹಾಲಾಭಿಷೇಕ, ೧೧೦೮ ಎಳನೀರು ಅಭಿಷೇಕ, ಕಲಶಾಭಿಷೇಕ, ಕಬ್ಬಿನ ಹಾಲಿನ ಅಭಿಷೇಕ, ಪಂಚಾಮೃತ, ಜೇನುತುಪ್ಪ, ಭಸ್ಮಾಭಿಷೇಕಗಳು ನಡೆಯಲಿದ್ದು, ಮಾ. ೨ ರಂದು ಪೂರ್ವಾಹ್ನ ೭ ಗಂಟೆಗೆ ರುದ್ರಹೋಮ, ೮.೩೦ಕ್ಕೆ ಪೂರ್ಣಾಹುತಿ, ೯.೩೦ಕ್ಕೆ ಕಲಶಾಭಿಷೇಕ, ಮಹಾಪೂಜೆ, ಮಹಾಮಂಗಳಾರತಿ, ಅನ್ನದಾನ ನಡೆಯಲಿದೆ.

ಕ್ಷೇತ್ರದ ಪ್ರಧಾನ ಗುರುಗಳಾದ ಶ್ರೀ ರಾಜೇಶ್‌ನಾಥ್‌ಜೀ ಅವರ ಮಾರ್ಗದರ್ಶನದಲ್ಲಿ ಮಹಾಗಣಪತಿ ಹೋಮ, ಅಷ್ಟಯಾಮ ಪೂಜೆ, ರುದ್ರಹೋಮ, ತೀರ್ಥಸ್ನಾನ ನೆರವೇರಲಿದೆ ಎಂದು ಪ್ರಕಾಶ್ ತಿಳಿಸಿದ್ದಾರೆ.