ಸುಂಟಿಕೊಪ್ಪ,ಫೆ.೨೬: ನಾಕೂರು ಕಾನ್‌ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್‌ನ ವತಿಯಿಂದ ೨೨ನೇ ವರ್ಷದ ಕ್ರೀಡೋತ್ಸವ ತಾ.೨೭ ರಂದು ಕಾನ್‌ಬೈಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದು, ಕಬಡ್ಡಿ ಪಂದ್ಯಾಟವನ್ನು ಪ್ರಥಮ ಬಾರಿಗೆ ನೆಲ ಮ್ಯಾಟ್ ಹಾಕಿದ ಕ್ರೀಡಾಂಗಣದಲ್ಲಿ ನಡೆಸಲಾಗುವುದು. ಪುರುಷರು, ಮಹಿಳೆ ಯರು ಹಾಗೂ ಮಕ್ಕಳಿಗೆ ವಿವಿಧ ಗ್ರಾಮೀಣ ಕ್ರೀಡಾಕೂಟ ಹಾಗೂ ಡ್ಯಾನ್ಸ್ ಮೇಳ ಕಾರ್ಯಕ್ರಮ ವನ್ನು ಆಯೋಜಿಸಲಾಗಿದೆ ಎಂದು ಕ್ರೀಡಾ ಸಮಿತಿ ಅಧ್ಯಕ್ಷ ಅಂಬೆಕಲ್ ಚಂದ್ರಶೇಖರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತಾ. ೨೭ ರಂದು ಬೆಳಿಗ್ಗೆ ೧೦ ಗಂಟೆಗೆ ರಸ್ತೆ ಓಟ, ಬೆಳಿಗ್ಗೆ ೧೧ ಗಂಟೆಗೆ ಕಬಡ್ಡಿ ಸಂಜೆ ೫ ಗಂಟೆಗೆ ಕಬಡ್ಡಿ ಫೈನಲ್ ನಡೆಯಲಿದೆ. ಮಹಿಳೆಯರ ಹಗ್ಗ ಜಗ್ಗಾಟ ಕೂಡ ನಡೆಯಲಿದೆ. ಸಂಜೆ ೭ ಗಂಟೆಗೆ ಡ್ಯಾನ್ಸ್ ಮೇಳ ಕಾರ್ಯಕ್ರಮ ನಡೆಯಲಿದೆ.