
ನಾಪೆೆÇÃಕ್ಲು, ಫೆ. ೨೫: ವರ್ಷಂ ಪ್ರತಿ ನಡೆಸಿಕೊಂಡು ಬರುತ್ತಿರುವ ಐತಿಹಾಸಿಕ ಎಮ್ಮೆಮಾಡು ಉರೂಸ್ಗೆ ಎಮ್ಮೆಮಾಡು ತಾಜುಲ್ ಇಸ್ಲಾಂ ಜಮಾಅತ್ ಅಧ್ಯಕ್ಷ ಕೆ. ಎಸ್. ಅಬ್ದುಲ್ ಖಾದರ್ ಹಾಜಿ ಧ್ವಜಾರೋಹಣ ನೆರವೇರಿಸುವುದರ ಮೂಲಕ ಚಾಲನೆ ನೀಡಿದರು.
ಶುಕ್ರವಾರದ ಪ್ರಾರ್ಥನೆಯ ಬಳಿಕ ದರ್ಗಾ ಶರೀಫ್ನಲ್ಲಿ ಪ್ರಾರ್ಥನೆ ನೆರವೇರಿಸಿದ ಅವರು ವಿವಿಧ ಮುಸ್ಲಿಂ ಧರ್ಮಗುರುಗಳು, ಗಣ್ಯರೊಡಗೂಡಿ ಧ್ವಜಾರೋಹಣ ವನ್ನು ನೆರವೇರಿಸಿದರು.
ಈ ಸಂದರ್ಭ ಅಬ್ದುಲ್ ಫೈಝಿ ಎಡಪಾಲ, ಸಯ್ಯದ್ ಮುನವ್ವರಲಿ ಆಯಬ್ ತಂಙಳ್, ಸಿ.ಎಂ. ಅಬ್ದುಲ್ ಖಾದರ್ ಹಾಜಿ, ಚಕ್ಕೇರ ಹಸೈನಾರ್ ಹಾಜಿ, ಅಲ್ ಹಾಜ್ ಉಮ್ಮರ್ ಮುಸ್ಲಿಯಾರ್, ಕೆ.ಎ. ಮಾಹಿನೆ, ಕಾಳೇರ ಅಬ್ದುಲ್ ಖಾದರ್ ಹಾಜಿ, ಚಕ್ಕೇರ ಮೂಸೆ ಹಾಜಿ, ಚೆಂಬಾರAಡ ಸಾದುಲಿ ಹಾಜಿ, ಚೆಂಬಾರAಡ ಹಸೈನಾರ್ ಹಾಜಿ, ಮೂಸಹಾಜಿ, ಹಂಸ ಮುಸ್ಲಿಯಾರ್, ಇಬ್ರಾಂಹಿ ಸಅದಿ ಪಿ.ಎ, ಚಂಬಾರAಡ ಮೊಯಿದು ಮತ್ತಿತರರು ಇದ್ದರು.
ಎಮ್ಮೆಮಾಡು ಉರೂಸ್ ತಾ, ೨೫ ರಿಂದ ಮಾ. ೪ ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು ತಾ. ೨೮ ರಂದು ಸರ್ವಧರ್ಮ ಸಮ್ಮೇಳನ ಮತ್ತು ಸಾರ್ವಜನಿಕ ಅನ್ನದಾನ ಕಾರ್ಯಕ್ರಮ ನಡೆಯಲಿದೆ ಎಂದು ಜಮಾಅತ್ ಆಡಳಿತ ಮಂಡಳಿ ತಿಳಿಸಿದೆ.