*ಗೋಣಿಕೊಪ್ಪ, ಫೆ. ೨೫: ಭಾಷೆ ಶ್ರೀಮಂತವಾಗಿ ಉಳಿದುಕೊಳ್ಳಲು ಆ ಭಾಷೆಯಲ್ಲಿ ಹೆಚ್ಚಿನ ಸಾಹಿತ್ಯ ರಚನೆಯಾಗಬೇಕಾಗಿದೆ. ಈ ನಿಟ್ಟಿನಲ್ಲಿ ಯುವ ಸಮುದಾಯ ಸಾಹಿತ್ಯ ರಚನೆಯ ಹವ್ಯಾಸವನ್ನು ಬೆಳೆಸಿಕೊಳ್ಳಬೇಕೆಂದು ಕರ್ನಾಟಕ ಅರೆಭಾಷೆ ಸಂಸ್ಕöÈತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷಿ÷್ಮನಾರಾಯಣ ಕಜೆಗದ್ದೆ ಅಭಿಪ್ರಾಯ ವ್ಯಕ್ತಪಡಿಸಿದರು.
ಕೈಕೇರಿ ಪಡಿಕಲ್ ಕುಟುಂಬಸ್ಥರ ಐನ್‌ಮನೆಯಲ್ಲಿ ‘ಕೈಕೇರಿ ಸಂವೃದ್ದಿ ಅರೆಭಾಷಿಕ ಗೌಡ ಭಾಂದವರ ಸಮಿತಿ’ ಮತ್ತು ‘ಅರೆಭಾಷೆ ಸಂಸ್ಕöÈತಿ ಮತ್ತು ಸಾಹಿತ್ಯ ಅಕಾಡೆಮಿ’ ಆಶ್ರಯದಲ್ಲಿ ಮೂರು ದಿನಗಳು ನಡೆಯಲಿರುವ ಅರೆಭಾಷೆ ಸಂಸ್ಕöÈತಿ ಶಿಬಿರವನ್ನು ಪಡಿಕಲ್ ಕುಟುಂಬಸ್ಥರ ಪಟ್ಟೆದಾರ ಹಾಗೂ ನಿವೃತ್ತ ತೆರಿಗೆ ಅಧಿಕಾರಿ ಪಡಿಕಲ್ ಚಂಗಪ್ಪ ಉದ್ಘಾಟಿಸಿದರು.
ಕನ್ನಡ ಭಾಷೆಯಲ್ಲಿ ಸಾಹಿತ್ಯ ರಚಿಸುವಂತೆ ಅರೆಭಾಷೆಯ ಸಮುದಾಯದವರು ತಮ್ಮ ಮಾತೃಭಾಷೆಯಲ್ಲಿಯೇ ಸಾಹಿತ್ಯವನ್ನು ರಚಿಸುವ ಮೂಲಕ ಭಾಷೆಯ ಬೆಳವಣಿಗೆಗೆ ತೊಡಗಿಸಿಕೊಳ್ಳಬೇಕಾಗಿದೆ. ಮುಂದಿನ ತಲೆಮಾರಿಗೆ ಸಂಸ್ಕೃತಿ, ಸಂಪ್ರದಾಯಗಳನ್ನು ಹಿರಿಯರು ತಿಳಿಸದೇ ಹೋದರೆ ಸಮುದಾಯದ ಅಳಿವನ್ನು ಕಂಡುಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಈ ಹಿನ್ನೆಲೆ ಹಿರಿಯರು ಭಾಷೆಯ ಬಗ್ಗೆ ಮತ್ತು ಸಂಸ್ಕöÈತಿಯ ಬಗ್ಗೆ ಯುವ ಪೀಳಿಗೆಗೆ ತಿಳಿಯಪಡಿಸುವ ಜವಾಬ್ದಾರಿಯನ್ನು ನಿಭಾಯಿಸಬೇಕಾಗುತ್ತದೆ ಎಂದು ಕಜೆಗದ್ದೆ ಅವರು ಕರೆ ನೀಡಿದರು.
ಅಕಾಡೆಮಿಯ ಕಾರ್ಯಕ್ರಮದಲ್ಲಿ ಅರೆಭಾಷೆಯನ್ನು ಪ್ರಪಂಚದಾAದ್ಯತ ತಿಳಿಯಪಡಿಸುವ ಅಭಿಯಾನ ಪ್ರಾರಂಭಿಸಲಾಗಿದೆ. ಈಗಾಗಲೇ ಯಕ್ಷಗಾನ, ನಾಟಕ, ತಾಳಮದ್ದಳೆ ಇನ್ನಿತರ ಸಾಂಸ್ಕöÈತಿಕ ಕಾರ್ಯಕ್ರಮಗಳ ಮೂಲಕ ಇತರ ಸಮುದಾಯದವರನ್ನು ಗಮನ ಸೆಳೆಯಲಾಗುತ್ತಿದೆ. ಈ ಕಾರ್ಯವನ್ನು ಅರೆಭಾಷೆಯ ಬಗ್ಗೆ ಅಭಿಮಾನ ಹೊಂದಿದವರು ನಡೆಸುತ್ತಿರುವುದು ಹೆಗ್ಗಳಿಕೆಯಾಗಿದ್ದರೂ ಸಹ ಭಾಷೆ, ಸಂಸ್ಕöÈತಿಯ ಬೆಳವಣಿಗೆಗೆ ಆ ಸಮುದಾಯದವರು ಪೂರಕವಾಗಿ ಸ್ಪಂದಿಸಿದರೆ ಉತ್ತಮ ಎಂದು ಸಲಹೆ ನೀಡಿದರು.
ಅರೆಭಾಷೆಯ ಸಂಸ್ಕöÈತಿ ಮತ್ತು ಸಾಹಿತ್ಯ ಬೆಳವಣಿಗೆಗೆ ಪೂರಕವಾಗಿ ಶಾಸಕ ಕೆ.ಜಿ. ಬೋಪಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಅವರ ಪ್ರಯತ್ನದಿಂದ ಅಕಾಡೆಮಿ ರಚನೆಯಾಗಿದೆ. ಇದರಿಂದ ಭಾಷೆ, ಸಂಸ್ಕöÈತಿ ಸಂವೃದ್ದಿಗೊಳ್ಳಲು ಸಾಧ್ಯವಾಗಿದೆ ಎಂಬುವುದನ್ನು ಸಮುದಾಯದವರು ತಿಳಿದುಕೊಳ್ಳಬೇಕಾಗಿದೆ ಎಂದರು. ಮುಖ್ಯ ಅತಿಥಿ ತೆಕ್ಕಡೆ ಶಾಂತಿ ಲಕ್ಷ÷್ಮಣ ಮಾತನಾಡಿ, ಭಾಷೆ ಮತ್ತು ಸಂಸ್ಕöÈತಿಯನ್ನು ಯುವ ಸಮುದಾಯಕ್ಕೆ ತಿಳಿಯಪಡಿಸಿ ಸಮುದಾಯದ ಬೆಳವಣಿಗೆಗೆ ಪ್ರತಿಯೊಬ್ಬರು ತೊಡಗಿಸಿಕೊಳ್ಳಬೇಕು. ಭಾಷೆಯ ಹೆಚ್ಚು ಬಳಕೆಯಿಂದ ನಮ್ಮ ಸಂಸ್ಕöÈತಿಯ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ಅಕಾಡೆಮಿ ಸದಸ್ಯ ಎ.ಟಿ. ಕುಸುಮಾದರ, ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ಆನೇರ ಲಾಲು, ಕಡ್ಯದ ಪಾರ್ವತಿ, ಕೈಕೇರಿ ಭಗವತಿ ದೇವಸ್ಥಾನದ ಪ್ರದಾನ ಅರ್ಚಕ ಗುರುರಾಜ್ ರಾವ್, ನಿವೃತ್ತ ಉಪಾಧ್ಯಾಯಿನಿ ಪಡಿಕಲ್ ಕವಿತಾ ಚಂಗಪ್ಪ, ಕಾರ್ಯಕ್ರಮ ಆಯೋಜಕರಾದ ಪಡಿಕಲ್ ಯದು, ವಕೀಲರಾದ ಪಡಿಕಲ್ ನಿರಂಜನ್, ಪಡಿಕಲ್ ಸಂತೋಷ್, ಸಂದ್ಯಾ, ಮಾಲಿನಿ ಮನೋಹರ್, ಜಪ್ಪೆಕೊಡಿ ಗುಣಬೋಜಪ್ಪ, ಕಾಯೆರ ಕಿರಣ್, ಉಷಾ, ಮುಕ್ಕಾಟಿ ದರ್ಮೇಂದ್ರ ಹಾಗೂ ಇತರರು ಇದ್ದರು.