ಕುಶಾಲನಗರ, ಫೆ. ೨೪: ಹೋರಾಟಗಾರ, ನಟ ಚೇತನ್ ಬಿಡುಗಡೆಗೆ ಒತ್ತಾಯಿಸಿ ಆದಿವಾಸಿ ಭಾರತ್ ಮಹಾಸಭಾ ಕೊಡಗು ಜಿಲ್ಲಾ ಸಮಿತಿ ಆಶ್ರಯದಲ್ಲಿ ಕುಶಾಲನಗರದಲ್ಲಿ ಪ್ರತಿಭಟನೆ ನಡೆಯಿತು. ಕುಶಾಲನಗರ ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಸಮಿತಿಯ ಕಾರ್ಯಕರ್ತರು ಚೇತನ್ ಅವರನ್ನು ಕೂಡಲೇ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು.

ತಹಶೀಲ್ದಾರ್ ಟಿ.ಎಂ. ಪ್ರಕಾಶ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಮಹಾಸಭಾ ಪ್ರಮುಖರಾದ ಡಿ.ಎಸ್. ನಿರ್ವಾಣಪ್ಪ, ಚಿಣ್ಣಪ್ಪ, ಅನಿತಾ, ಸಾವಿತ್ರಮ್ಮ, ಸುರೇಶ್ ಮತ್ತಿತರರು ಇದ್ದರು.