ವೀರಾಜಪೇಟೆ, ಫೆ. ೨೫: ನದಿ ತೀರದಲ್ಲಿ ಗೋವಿನ ಕಳೇಬರ ಪತ್ತೆಯಾಗಿರುವ ಘಟನೆ ಕದನೂರು ಗ್ರಾಮ ಭಾಗದಲ್ಲಿ ನಡೆದಿದೆ.

ಕದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡಿಗೆ ಕಂಡಿ ಎಂಬ ಸೇತುವೆಯ ಬಳಿ ಕಿಡಿಗೇಡಿಗಳು ಗೋವನ್ನು ಹತ್ಯೆಗೈದು ಕಳೇಬರವನ್ನು ಕಿರುಹೊಳೆಗೆ ಎಸೆದು ಪರಾರಿಯಾಗಿದ್ದಾರೆ.

ಇಂದು ಸಂಜೆಯ ವೇಳೆಯಲ್ಲಿ ಸಾರ್ವ ಜನಿಕರು ಮಾರ್ಗದಲ್ಲಿ ತೆರಳುವ ವೇಳೆ ಕಿರು ಹೊಳೆಯ ಬದಿಯಲ್ಲಿ ಮೂಟೆಯೊಂದು ಗೋಚರಿಸಿದ್ದು, ಸ್ಥಳಕ್ಕೆ ಬಂದು ಪರಿಶೀಲಿಸಿದ ನಾಗರಿಕರು ಮೂಟೆಯನ್ನು ತೆರೆದು ನೋಡಿದಾಗ ಗೋವನ್ನು ಹತ್ಯೆಗೈದು ಮಾಂಸವನ್ನು ಬೇರ್ಪಡಿಸಿದ್ದ ಕಳೇಬರ ಕಂಡುಬAದಿದೆ. ಗ್ರಾಮಸ್ಥರು ಕದನೂರು ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಗ್ರಾಮ ಪಂಚಾಯಿತಿ ಪಿ.ಡಿ.ಓ ಮಂಜುಳ ಅವರು ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪಶುವೈದ್ಯ ಇಲಾಖೆ ಸಿಬ್ಬಂದಿಗಳಿAದ ಮಹಜರು ಮಾಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

-ಕಿಶೋರ್ ಕುಮಾರ್ ಶೆಟ್ಟಿ