ಮಡಿಕೇರಿ, ಫೆ. ೨೪: ಮಡಿಕೆೆÃರಿ ಸಮೀಪದ ಕೆ.ನಿಡುಗಣೆ ಗ್ರಾಮದಲ್ಲಿ ಕಾಡುಕೋಣಗಳು ಕಾಣಿಸಿಕೊಂಡಿರುವ ಬಗ್ಗೆ ಗ್ರಾಮಸ್ಥರು ಆತಂಕಗೊAಡಿದ್ದಾರೆ. ಕಳೆದ ಎರಡು ದಿನಗಳಿಂದ ಅಬ್ಬಿಫಾಲ್ಸ್ ರಸ್ತೆಯ ಆರ್.ಟಿ.ಓ. ಕಚೇರಿ ಸುತ್ತಮುತ್ತಲೂ ಕಾಡುಕೋಣಗಳ ಹಿಂಡು ನಿರಾತಂಕವಾಗಿ ಓಡಾಡಿಕೊಂಡಿದ್ದು, ಎಂ.ಆರ್. ಗಣಪತಿ ಅವರ ತೋಟದಲ್ಲಿ ಬೀಡುಬಿಟ್ಟಿವೆ.