ಮಡಿಕೇರಿ, ಫೆ. ೨೩: ಅಲ್ಪಸಂಖ್ಯಾತ ಜನಾಂಗವಾಗಿರುವ ಕೊಡವರ ಅಭಿವೃದ್ಧಿಯ ನಿಟ್ಟಿನಲ್ಲಿ ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆಯ ಘೋಷಣೆ ಮಾಡುವಂತೆ ಅಖಿಲ ಕೊಡವ ಸಮಾಜ ಒತ್ತಾಯಿಸಿದೆ.

ಈ ನಿಗಮ ಸ್ಥಾಪನೆಗೆ ಕೊಡವ ಜನಾಂಗ ಅರ್ಹವೂ ಆಗಿದ್ದು, ಪ್ರಸ್ತುತ ಇದು ಅನಿವಾರ್ಯತೆ ಕೂಡ ಆಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಈ ಕುರಿತು ಬೇಡಿಕೆ ಇದ್ದು ರಾಜ್ಯ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ನಿಗಮ ಸ್ಥಾಪಿಸುವಂತೆ ಅ.ಕೊ.ಸ. ಅಧ್ಯಕ್ಷ ಮಾತಂಡ ಎಂ. ಮೊಣ್ಣಪ್ಪ ಅವರು ಆಗ್ರಹಿಸಿ ದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಅವರು ಹೊರ ನೋಟಕ್ಕೆ ಕೊಡವ ಜನಾಂಗದವರು ಸುಭದ್ರವಾಗಿದ್ದಾರೆ ಎಂಬAತಹ ಅಭಿಪ್ರಾಯ ಇರುವುದು ಸರಿಯಲ್ಲ, ಜನಾಂಗ ದಲ್ಲಿ ಶೇ. ೯೦ರಷ್ಟು ಮಂದಿ ಕಷ್ಟದಲ್ಲಿದ್ದು ಮಧ್ಯಮ ವರ್ಗ, ಕೆಳವರ್ಗ ಹಾಗೂ ಆರ್ಥಿಕವಾಗಿ ಕೂಡ ಸಂಕಷ್ಟದಲ್ಲಿದ್ದು ಹಿಂದುಳಿದಿದ್ದಾರೆ. ವಿಶಿಷ್ಟ ಆಚಾರ- ವಿಚಾರಗಳನ್ನು ಹೊಂದಿದ್ದು ಅತ್ಯಲ್ಪಸಂಖ್ಯೆಯಲ್ಲಿರುವ ಈ ಜನಾಂಗದ ಅಭಿವೃದ್ಧಿಗಾಗಿ ಸರಕಾರ ಗಮನ ಹರಿಸಬೇಕಿದೆ. ಈ ಕುರಿತಾಗಿ ಈಗಾಗಲೇ ಯುನೈಟೆಡ್ ಕೊಡವ ಆರ್ಗನೈನೇಷನ್ (ಯುಕೋ) ಸಂಘಟನೆ ನಡೆಸುತ್ತಿ ರುವ ಪ್ರಯತ್ನವೂ ಸಂದರ್ಭೋಚಿ ತವಾಗಿದ್ದು, ಈ ಬೇಡಿಕೆಗೆ ಅಖಿಲ ಕೊಡವ ಸಮಾಜದ ಸಹಮತವೂ ಇದೆ. ರಾಜ್ಯ ಸರಕಾರ ಈ ಹಿಂದೆ ಇನ್ನಿತರ ಕೆಲವು ಜನಾಂಗದ ಶ್ರೇಯೋಭಿವೃದ್ದಿಗೆ ಅಭಿವೃದ್ಧಿ ಮಂಡಳಿ ರಚಿಸಿರುವಂತೆ ಕೊಡವ ಅಭಿವೃದ್ಧಿ ನಿಗಮದ ಸ್ಥಾಪನೆಗೂ ಮುಂದಾಗಬೇಕೆAದು ಮೊಣ್ಣಪ್ಪ ಒತ್ತಾಯಿಸಿದ್ದಾರೆ.