ಮಡಿಕೇರಿ, ಫೆ. ೨೩: ಮಲೆನಾಡು ಭಾಗದಲ್ಲಿ ಕಾಫಿ ಬೆಳೆಯುವ ಜಿಲ್ಲೆಗಳಲ್ಲಿನ ಕಾಫಿ ಬೆಳೆಗಾರರ ವಿವಿಧ ಸಮಸ್ಯೆಗಳ ಕುರಿತಾಗಿ ಕರ್ನಾಟಕ ಬೆಳೆಗಾರರ ಸಂಘದ ನಿಯೋಗದ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಚರ್ಚಿಸಲಾಯಿತು. ಬಿಜೆಪಿ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ನೇತೃತ್ವದಲ್ಲಿ ನಿಯೋಗ ತೆರಳಲಾಗಿದ್ದು, ಕೊಡಗು ಜಿಲ್ಲೆಯ ಶಾಸಕರುಗಳಾದ ಅಪ್ಪಚ್ಚು ರಂಜನ್, ಸುಜಾ ಕುಶಾಲಪ್ಪ ಅವರುಗಳು ನಿಯೋಗದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭ ಮುಖ್ಯಮಂತ್ರಿಗಳಿಗೆ ವಿವಿಧ ಸಮಸ್ಯೆ - ಬೇಡಿಕೆಗಳ ಬಗ್ಗೆ ವಿವರ ಮನವಿ ಸಲ್ಲಿಸಲಾಯಿತು.

ಈಗಾಗಲೇ ೧೯೨ಂ ಭೂ ಕಬಳಿಕೆ ಕಾಯ್ದೆಗೆ ತಿದ್ದುಪಡಿ ತಂದು ರಾಜ್ಯದಾದ್ಯಂತ ಗ್ರಾಮೀಣ ಭಾಗದ ಕೃಷಿ ಜಮೀನನ್ನು ಹೊರಗಿಡಲು ಹಾಗೂ ಸರ್ಕಾರಿ ಕಂದಾಯ ಜಮೀನುಗಳನ್ನು ಹಲವಾರು ವರ್ಷ ಗಳಿಂದ ಕಾಫಿ ಬೆಳೆಗಾರರು ಒತ್ತುವರಿ ಮಾಡಿಕೊಂಡು ಬಂದಿರು

(ಮೊದಲ ಪುಟದಿಂದ) ವಂತಹ ಅವರ ಸ್ವಾಧೀನದಲ್ಲಿರು ವುದನ್ನು ಸರ್ಕಾರವು ಎಲ್ಲಾ ಕಾಫಿ ಬೆಳೆಗಾರರಿಗೆ ಗುತ್ತಿಗೆ ಆಧಾರದಲ್ಲಿ ನೀಡಬೇಕಾಗಿ ಮನವಿ ಮಾಡಲಾಯಿತು.

ಈ ಹಿಂದೆ ಮುಖ್ಯಮಂತ್ರಿ ಗಳಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ಕಾಫಿ ಬೆಳೆಗಾರರು ಹೊಂದಿರುವ ವಿದ್ಯುತ್ ಪಂಪ್‌ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡುವ ಯೋಜನೆಯನ್ನು ಅನುಷ್ಠಾನ ಗೊಳಿಸುವಂತೆ ಆದೇಶಿಸಿರುತ್ತಾರೆ. ಆದರೆ, ಯೋಜನೆ ಇಲ್ಲಿಯವರೆವಿಗೂ ಕಾರ್ಯಗತಗೊಂಡಿರುವುದಿಲ್ಲ. ಆದ್ದರಿಂದ ಕಾಫಿ ಬೆಳೆಗಾರರ ೧೦ ಹೆಚ್.ಪಿ.ವರೆಗಿನ ವಿದ್ಯುತ್ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವ ಯೋಜನೆಯನ್ನು ಕಾರ್ಯರೂಪಕ್ಕೆ ತರುವಣತೆ, ನಿರ್ವಹಣಾ ಶುಲ್ಕ ಹಾಕುವುದನ್ನು ಕಡಿತಗೊಳಿಸಿ, ವರ್ಷದಲ್ಲಿ ಕನಿಷ್ಟ ಅವಧಿಗೆ ನಿರ್ವಹಣಾ ಶುಲ್ಕ ನಿಗದಿಪಡಿಸುವಂತೆ ವಿದ್ಯುತ್ ಬಿಲ್ ಚಕ್ರ ಬಡ್ಡಿಯನ್ನು ಮನ್ನಾ ಮಾಡುವಂತೆ, ವಿದ್ಯುತ್ ಬಿಲ್ ಕನಿಷ್ಟ ಶುಲ್ಕ ದುಬಾರಿಯಾಗಿದ್ದು, ಈಗಿನ ಶೇ.೫೦ ಭಾಗ ಕಡಿತಗೊಳಿಸುವಂತೆ ಮನವಿ ಮಾಡಲಾಗಿದೆ.

ಈಗಾಗಲೇ ದರ್ಖಾಸ್‌ನಲ್ಲಿ ಸರ್ಕಾರದಿಂದ ಕಾಫಿ ಬೆಳೆಗಾರರಿಗೆ ಮಂಜೂರಾದ ಜಮೀನನ್ನು ದಾಖಲೆ ಇದ್ದರೂ ಸಹಿತ ಅರಣ್ಯ ಇಲಾಖೆ, ತೆರವುಗೊಳಿಸುತ್ತಿರುವುದನ್ನು ತಡೆಗಟ್ಟಬೇಕೆಂದು ಕೋರಲಾಗಿದೆ.

ಕಾಫಿ ಬೆಳೆಯುವ ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಕಳೆದ ಕೆಲ ವರ್ಷಗಳಿಂದ ಕಾಡಾನೆಗಳು ನಿರಂತರವಾಗಿ ದಾಳಿ ನಡೆಸುತ್ತಾ ಬಂದಿದ್ದು, ಕಾಡಾನೆ ಹಾವಳಿ ನಿಯಂತ್ರಣ ಮಾಡುವಲ್ಲಿ ಕಾಫಿ ಬೆಳೆಯುವ ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಹಾವಳಿ ಮಾಡುತ್ತಿರುವ ಆನೆಗಳನ್ನು ಸಂಪೂರ್ಣವಾಗಿ ಸ್ಥಳಾಂತರಿಸಬೇಕು. ಆ ಆನೆಗಳು ಮತ್ತು ಈ ಭಾಗಕ್ಕೆ ಬಾರದಂತೆ ರೈಲ್ವೆ ಕಂಬಿಗಳ ತಡೆಗೋಡೆ / ಬೇಲಿ ನಿರ್ಮಿಸು ವುದು. ಶೇ.೯೦ರ ಸಹಾಯಧನದಡಿ ಯಲ್ಲಿ ಸೋಲಾರ್ ಬೇಲಿ ನಿರ್ಮಾಣಕ್ಕೆ ಆದ್ಯತೆ ನೀಡಿ, ಅದರಲ್ಲೂ ಬಹು ಮುಖ್ಯವಾಗಿ ಟೆಂಟಿಕಲ್ ಪೆನ್ಸಿಂಗ್ ವ್ಯವಸ್ಥೆ ಮಾಡಿಕೊಡ ಬೇಕೆಂದು ಈಗಾಗಲೇ ಮೂಡಿಗೆರೆ ಮತ್ತು ಕೊಡಗಿನ ಭಾಗದಲ್ಲಿ ಟೆಂಟಿಕಲ್ ಪೆನ್ಸಿಂಗ್ ವ್ಯವಸ್ಥೆ ಮಾಡಲಾಗಿದ್ದು, ತುರ್ತಾಗಿ ಮೂರು ಜಿಲ್ಲೆಗಳಲ್ಲೂ ವಿಸ್ತರಿಸುವಂತೆ, ಈ ಹಿಂದೆ ಶೋಭಾ ಕದರ‍್ಲಾಜೆಯವರ ನೇತೃತ್ವದಲ್ಲಿ ಕೇಂದ್ರ ಅರಣ್ಯ ಸಚಿವ ಹರ್ಷವರ್ಧನ್ ಅವರನ್ನು ಭೇಟಿ ಮಾಡಿ, ರೈಲ್ವೆ ಬ್ಯಾರಿಕೇಡ್ ವ್ಯವಸ್ಥೆ ಮಾಡಲು ಸುಮಾರು ೪೯೬ ಕೋಟಿ ಹಣದ ಅವಶ್ಯಕತೆಯಿದ್ದು, ರೈಲ್ವೆ ಬ್ಯಾರಿಕೇಡ್ ವ್ಯವಸ್ಥೆಯನ್ನು ಕಾರ್ಯಗತಗೊಳಿಸಿ ಕೊಡುವಂತೆ ಮನವಿ ಮಾಡಲಾಗಿತ್ತು. ಈ ವ್ಯವಸ್ಥೆಯನ್ನು ಅನುಷ್ಟಾನಗೊಳಿಸಿ ಕೊಡಬೇಕಾಗಿ ಹಾಗೂ ಕಾಡಾನೆ ದಾಳಿಗೆ ಸಿಲುಕಿ ಸಾವನ್ನಪ್ಪಿದ ಕುಟುಂಬದವರಿಗೆ ೨೫ ಲಕ್ಷ ರೂ.ಗಳ ಪರಿಹಾರ ನೀಡುವಂತೆ ಮತ್ತು ಬೆಳೆನಷ್ಟ ಹಾಗೂ ಕೃಷಿ ಪರಿಕರಗಳ ನಷ್ಟಕ್ಕೆ ವೈಜ್ಞಾನಿಕ ಪರಿಹಾರ ನೀಡಬೇಕೆಂದು ಮನವಿ ಮಾಡಲಾಯಿತು.

ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ಗಳಲ್ಲಿ ರೈತರು ಪಡೆದ ಸಾಲದ ಅಸಲನ್ನು ಪಾವತಿಸಿದರೆ ಬಡ್ಡಿ ಮನ್ನಾ ಸೌಲಭ್ಯವನ್ನು ೨೦೨೨ನೇ ಮಾರ್ಚ್ ಅಂತ್ಯದವರೆವಿಗೂ ವಿಸ್ತರಿಸುವಲ್ಲಿ ಸೂಕ್ತ ಕ್ರಮ ಕೈಗೊಂಡು ಹಾಗೂ ಅಸಲನ್ನು ಮರು ಹೊಂದಾಣಿಕೆ ಮಾಡಿ ಕಂತುಗಳ ರೂಪದಲ್ಲಿ ಪಾವತಿಸಲು ಅವಕಾಶ ಕಲ್ಪಿಸಿಕೊಟ್ಟು ರೈತ / ಬೆಳೆಗಾರರಿಗೆ ಅನುಕೂಲ ಮಾಡಿ ಕೊಡಬೇಕೆಂದು ಮನವಿಯಲ್ಲಿ ಕೋರಲಾಗಿದೆ.

ವಿವಿಧ ಸಚಿವರ ಭೇಟಿ

ತದನಂತರ ಕಂದಾಯ ಸಚಿವರಾದ ಆರ್. ಅಶೋಕ್ ಅವರನ್ನು ಭೇಟಿ ಮಾಡಿ, ಸರ್ಕಾರಿ ಕಂದಾಯ ಜಮೀನುಗಳನ್ನು ಹಲವಾರು ವರ್ಷಗಳಿಂದ ಕಾಫಿ ಬೆಳೆಗಾರರು ಒತ್ತುವರಿ ಮಾಡಿಕೊಂಡು ಬಂದಿರುವAತಹ ಅವರ ಸ್ವಾಧೀನದಲ್ಲಿರುವುದನ್ನು ಸರ್ಕಾರವು ಎಲ್ಲಾ ಕಾಫಿ ಬೆಳೆಗಾರರಿಗೆ ಗುತ್ತಿಗೆ ಆಧಾರದಲ್ಲಿ ನೀಡಬೇಕಾಗಿ ಮನವಿ ಮಾಡಿಕೊಂಡಾಗ ಸಕಾರಾತ್ಮಕವಾಗಿ ಸ್ಪಂದಿಸಿ, ಬೆಳೆಗಾರರಿಗೆ ಅನುಕೂಲ ಮಾಡಿಕೊಡುವುದಾಗಿ ಅವರು ಭರವಸೆ ನೀಡಿದರು,

ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರನ್ನು ಭೇಟಿ ಮಾಡಿ ಈಗಾಗಲೇ ೧೯೨/o ಭೂಕಬಳಿಕೆ ಕಾಯ್ದೆಗೆ ತಿದ್ದುಪಡಿ ತಂದು ರಾಜ್ಯದಾದ್ಯಂತ ಗ್ರಾಮೀಣ ಭಾಗದ ಕೃಷಿ ಜಮೀನನ್ನು ಹೊರಗಿಡಬೇಕಾಗಿ ಮನವಿ ಮಾಡಲಾಯಿತು ಹಾಗೂ ಸರ್ಕಾರಿ ಕಂದಾಯ ಜಮೀನುಗಳನ್ನು ಹಲವಾರು ವರ್ಷಗಳಿಂದ ಕಾಫಿ ಬೆಳೆಗಾರರು ಒತ್ತುವರಿ ಮಾಡಿಕೊಂಡು ಬಂದಿರುವAತಹ ಅವರ ಸ್ವಾಧೀನದಲ್ಲಿ ರುವುದನ್ನು ಸರ್ಕಾರವು ಎಲ್ಲಾ ಕಾಫಿ ಬೆಳೆಗಾರರಿಗೆ ಗುತ್ತಿಗೆ ಆಧಾರದಲ್ಲಿ ನೀಡಬೇಕಾಗಿ ಮನವಿ ಸಲ್ಲಿಸಲಾಯಿತು.

ಸಹಕಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರನ್ನು ಭೇಟಿ ಮಾಡಿ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ಗಳಲ್ಲಿ ರೈತರು ಪಡೆದ ಸಾಲದ ಅಸಲನ್ನು ಪಾವತಿಸಿದರೆ ಬಡ್ಡಿ ಮನ್ನಾ ಸೌಲಭ್ಯವನ್ನು ೨೦೨೨ನೇ ಮಾರ್ಚ್ ಅಂತ್ಯದವರೆವಿಗೂ ವಿಸ್ತರಿಸುವಲ್ಲಿ ಸೂಕ್ತ ಕ್ರಮ ಕೈಗೊಂಡು ಹಾಗೂ ಅಸಲನ್ನು ಮರು ಹೊಂದಾಣಿಕೆ ಮಾಡಿ ಕಂತುಗಳ ರೂಪದಲ್ಲಿ ಪಾವತಿಸಲು ಅವಕಾಶ ಕಲ್ಪಿಸಿಕೊಟ್ಟು ರೈತ / ಬೆಳೆಗಾರರಿಗೆ ಅನುಕೂಲ ಮಾಡಿಕೊಡ ಬೇಕೆಂದು ಮನವಿ ಮಾಡಿಕೊಂಡಾಗ ಅವರು ಸಕಾರಾತ್ಮಕವಾಗಿ ಸ್ಪಂದಿಸಿ, ಮುಖ್ಯಮಂತ್ರಿಯವರೊAದಿಗೆ ಚರ್ಚಿಸಿ ಪರಿಶೀಲಿಸುವುದಾಗಿ ತಿಳಿಸಿದರು.

ತೋಟಗಾರಿಕಾ ಇಲಾಖಾ ಸಚಿವ ಮುನಿರತ್ನ ಅವರನ್ನು ಭೇಟಿ ಮಾಡಿ, ತೋಟಗಾರಿಕಾ ಇಲಾಖೆಯ ಸೌಲಭ್ಯ ಗಳನ್ನು ಬೆಳೆಗಾರರಿಗೆ ಕಲ್ಪಿಸಿಕೊಡು ವಂತೆ ಮನವಿ ಮಾಡಲಾಯಿತು.

ಈ ನಿಯೋಗದಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಂ.ಕೆ. ಪ್ರಾಣೇಶ್, ಮಡಿಕೇರಿ ವಿಧಾನಸಭಾ ಶಾಸಕರಾದ ಅಪ್ಪಚ್ಚುರಂಜನ್, ಎಂ.ಎಲ್.ಸಿ. ಸುಜಾ ಕುಶಾಲಪ್ಪ, ಶೃಂಗೇರಿ ವಿಧಾನಸಭಾ ಕ್ಷೇತ್ರ ಶಾಸಕ ಟಿ.ಡಿ. ರಾಜೇಗೌಡ, ಅರಕಲಗೂಡು ವಿಧಾನಸಭಾ ಕ್ಷೇತ್ರದ ಶಾಸಕ ಎ.ಟಿ. ರಾಮಸ್ವಾಮಿ, ಚಿಕ್ಕಮಗಳೂರು ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮರಡಪ್ಪ, ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಡಾ. ಹೆಚ್.ಟಿ. ಮೋಹನ್ ಕುಮಾರ್, ಪ್ರಧಾನ ಕಾರ್ಯದರ್ಶಿ ಕೆ.ಬಿ. ಕೃಷ್ಣಪ್ಪ, ಉಪಾಧ್ಯಕ್ಷ ಬಿ.ಎಂ. ನಾಗರಾಜು, ಮಾಜಿ ಅಧ್ಯಕ್ಷ ಬಿ.ಎಸ್. ಜೈರಾಂ, ವಸ್ತಾರೆ ಹೋಬಳಿ ಬೆಳೆಗಾರರ ಸಂಘದ ಕಾರ್ಯದರ್ಶಿ ಕೆ.ಯು. ರತೀಶ್, ಕೊಡಗು ಪ್ಲಾಂರ‍್ಸ್ ಅಸೋಸಿಯೇಷನ್‌ನ ಪ್ರದೀಪ್ ಪೂವಯ್ಯ ಹಾಗೂ ಇತರರು ಇದ್ದರು.