ಸಿದ್ದಾಪುರ, ಫೆ. ೨೩: ಸಿದ್ದಾಪುರದ ಶ್ರೀ ಮುತ್ತಪ್ಪ ದೇವಾಲಯದ ೪೭ನೇ ವಾರ್ಷಿಕೋತ್ಸವ ಹಾಗೂ ತೆರೆ ಮಹೋತ್ಸವ ಮಾರ್ಚ್ ೨ ರಿಂದ ೬ ರವರೆಗೆ ವಿವಿಧ ಪೂಜೆ ಕೈಂಕರ್ಯಗಳೊAದಿಗೆ ನಡೆಯಲಿದೆ. ಮಾರ್ಚ್ ೨ ರಂದು ಬೆಳಿಗ್ಗೆ ೬ ಗಂಟೆಗೆ ಪಂಚಗವ್ಯ ಪುಣ್ಯಾಹ, ೬.೩೦ ಕ್ಕೆ ಗಣಪತಿ ಹೋಮ, ಬೆಳಿಗ್ಗೆ ೧೦ ಕ್ಕೆ ಧ್ವಜಾರೋಹಣ ನವ ಕಲಶ ಅಭಿಷೇಕ, ೧ ಕ್ಕೆ ಮಹಾಪೂಜೆ ತೀರ್ಥ ಪ್ರಸಾದ, ಸಂಜೆ ೬.೫೦ ಕ್ಕೆ ಸಂಧ್ಯಾದೀಪ, ರಂಗ ಪೂಜೆ, ಮಹಾಪೂಜೆ, ತೀರ್ಥಪ್ರಸಾದ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ.

ಮಾಚ್ ೩ ರಂದು ಬೆಳಿಗ್ಗೆ ೬ ಗಂಟೆಗೆ ಗಣಪತಿ ಹೋಮ, ೮.೩೦ ಕ್ಕೆ ಚಂಡಿಕಾ ಹೋಮ, ಮಧ್ಯಾಹ್ನ ೧೨.೩೦ ಕ್ಕೆ ಮಹಾಪೂಜೆ ತೀರ್ಥಪ್ರಸಾದ, ೧ ಕ್ಕೆ ಅನ್ನ ಸಂತರ್ಪಣೆ, ಸಂಜೆ ೬.೩೦ ಕ್ಕೆ ದೇವರ ಬಲಿ, ಮಹಾಪೂಜೆ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ.

ಮಾರ್ಚ್ ೪ ರಂದು ಬೆಳಿಗ್ಗೆ ೬.೩೦ ಕ್ಕೆ ಗಣಪತಿ ಹೋಮ, ೧೨ ಗಂಟೆಯವರೆಗೆ ದುರ್ಗಾಪೂಜೆ, ಆಶ್ಲೇಷಬಲಿ, ನಾಗಹೋಮ, ಮಹಾಪೂಜೆ, ತೀರ್ಥಪ್ರಸಾದ. ಮಧ್ಯಾಹ್ನ ೧ ಕ್ಕೆ ಅನ್ನ ಸಂತರ್ಪಣೆ. ಸಂಜೆ ೫.೩೦ ಕ್ಕೆ ಕಾವೇರಿ ನದಿಯಲ್ಲಿ ದೇವಿಯ ಸ್ನಾನದ ನಂತರ ದೇವಾಲಯದಲ್ಲಿ ದೇವಿಯ ನರ್ತನ. ೯.೩೦ಕ್ಕೆ ಮಹಾಪೂಜೆ ತೀರ್ಥಪ್ರಸಾದ ಅನ್ನ ಸಂತರ್ಪಣೆ ನಡೆಯಲಿದೆ.

ಮಾರ್ಚ್ ೫ ರಂದು ೬ಗಂಟೆಗೆ ಗಣಪತಿ ಹೋಮ, ಮಧ್ಯಾಹ್ನ ೧ ಕ್ಕೆ ಅನ್ನಸಂತರ್ಪಣೆ, ಸಂಜೆ ೫ ಕ್ಕೆ ಶ್ರೀ ಮುತ್ತಪ್ಪನನ್ನು ಮಲೆ ಇಳಿಸುವುದು, ಸಂಜೆ ೭ ಕ್ಕೆ ಶಾಸ್ತಪ್ಪನ ವೆಳ್ಳಾಟ, ರಾತ್ರಿ ೮ ಕ್ಕೆ ಗುಳಿಗನ ವೆಳ್ಳಾಟ, ರಾತ್ರಿ ೯ ಕ್ಕೆ ವಸೂರಿ ಮಾಲಾ, ಕಾವೇರಿ ನದಿಗೆ ಸ್ನಾನಕ್ಕೆ ತೆರಳುವುದು. ರಾತ್ರಿ ೯.೩೦ಕ್ಕೆ ಅನ್ನ ಸಂತರ್ಪಣೆ.

ಮಾರ್ಚ್ ೬ ರಂದು ಬೆಳಿಗ್ಗೆ ೫ ಕ್ಕೆ ಗುಳಿಗನ ತೆರೆ, ಬೆಳಿಗ್ಗೆ ೬.೩೦ ಕ್ಕೆ ಶಾಸ್ತಪ್ಪನ ತೆರೆ, ೭.೩೦ ಕ್ಕೆ ತಿರುವಪ್ಪನ ಹಾಗೂ ಮುತ್ತಪ್ಪನ ತೆರೆ, ೮.೩೦ ಕ್ಕೆ ಭಗವತಿ ತೆರೆ, ಬೆಳಿಗ್ಗೆ ೧೧ ಕ್ಕೆ ಕೃಷ್ಣಮೂರ್ತಿ ತೆರೆ ನಂತರ ಅನ್ನ ಸಂತರ್ಪಣೆ ನಡೆಯಲಿದೆ.