ನಾಪೆೆÇÃಕ್ಲು, ಫೆ. ೨೨ : ನಾವೇಲ್ಲರೂ ಭಾರತೀಯರು; ಹಿಂದೂ, ಮುಸ್ಲಿಂ, ಕ್ರೆöÊಸ್ತ ರೆಂಬ ಬೇಧ ಬಾವ ಇಲ್ಲದೆ ಸಹೋದರತೆಯಿಂದ ಬಾಳ್ವೆಯನ್ನು ನಡೆಸುತ್ತಿದ್ದು ಸಹೋದರತೆಗೆ ದಕ್ಕೆ ಬಂದರೆ ದೇಶಕ್ಕೆ ಗಂಡಾAತರ ಎದುರಾಗಲಿದೆ ಎಂದು ಖ್ಯಾತ ವಾಗ್ಮಿ ಸೋಮವಾರಪೇಟೆಯ ಶಾಫಿ ಸಅದಿಯವರು ಹೇಳಿದರು. ಅವರು ನಾಪೆÉÇÃಕ್ಲು ಸಮೀಪದ ಚೆರಿಯಪರಂಬು ದರ್ಗಾದಲ್ಲಿ ಉರೂಸ್ ಪ್ರಯುಕ್ತ ಆಯೋಜಿ ಸಲಾಗಿದ್ದ ಸರ್ವ ಧರ್ಮ ಸಮ್ಮೇಳದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದರು.

ಕೊಡಗು ಜಿಲ್ಲೆಯಲ್ಲಿ ವಾರ್ಷಿಕವಾಗಿ ಪ್ರತಿ ಗ್ರಾಮಗಳಲ್ಲೂ ಉರೂಸ್ ಕಾರ್ಯಮವನ್ನು ನಡೆಸಲಾ ಗುತ್ತಿದ್ದು ಇದರಲ್ಲಿ ಸರ್ವಧರ್ಮ ಸಮ್ಮೇಳನ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರಲಾಗಿದೆ. ನಮ್ಮ ದೇಶದ ಸಂವಿಧಾನ ಬಹಳ ಉತ್ತಮವಾಗಿದೆ. ಇಲ್ಲಿ ಪ್ರತಿ ಯೊಬ್ಬರಿಗೂ ಅವರದೇ ಧರ್ಮವನ್ನು ಆಚರಿಸುವ ಅವಕಾಶವನ್ನು ನೀಡಿದೆ ಮತ್ತು ಬದುಕಿನ ಸ್ವಾತಂತ್ರö್ಯವನ್ನು ನೀಡಿದ್ದು ಎಲ್ಲಾರೂ ಸಹೋದರರಂತೆ ಭಾರತದ ಏಕತೆಗೆ ಹೋರಾಟ ಮಾಡಬೇಕಿದೆ ಎಂದರು. ಇದು ಮುಸ್ಲಿಂ ಹೆಣ್ಣು ಮಕ್ಕಳ ಹಕ್ಕು ತಮ್ಮ ಶರೀರದ ರಕ್ಷಣೆಗೆ ಮುಸ್ಲಿಂ ಹೆಂಗಸರು ಹಿಜಾಬ್ ಧರಿಸುತ್ತಾರೆ. ಇದರಿಂದ ಅನ್ಯರಿಗೆ ಏನು ತೊಂದರೆಯಾಗಿದೆ ಎಂದ ಅವರು ಮುಸ್ಲಿಂ ಹೆಣ್ಣು ಮಕ್ಕಳು ವಿದ್ಯಾಭ್ಯಾಸದಲ್ಲಿ ಹಿಂದುಳಿದಿದ್ದು ಅವರು ಇಂದು ಮುಖ್ಯ ವಾಹಿನಿಗೆ ಬರುವ ಸಂದರ್ಭ ಈ ಹಿಜಬ್ ಗಲಾಟೆ ಸರಿಯಲ್ಲ. ಧರ್ಮದಲ್ಲಿ ಅವರವರ ಧರ್ಮವನ್ನು ಪಾಲಿಸಲು ಸಂವಿಧಾನ ಅನುಕೂಲ ಮಾಡಿ ಕೊಟ್ಟಿದ್ದು, ಇದಕ್ಕೆ ಅವಕಾಶವನ್ನು ಮಾಡಿಕೊಡಬೇಕೆಂದರು. ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪರಿಷತ್ ಉಪಾಧ್ಯಕ್ಷ ಪಿ.ಎಂ. ಕಾಸಿಂ , ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಎಂ. ಹೆಚ್. ಅಬ್ದುಲ್ ರಹೀಮಾನ್, ನಾಪೆÉÇÃಕ್ಲು ಜಮಾಅತ್ ಅಧ್ಯಕ್ಷ ಪಿ.ಎಂ. ಸಲೀಂ ಹ್ಯಾರೀಸ್ ಮಾತನಾಡಿದರು.

ಕಾರ್ಯಕ್ರಮವನ್ನು ಬಹು ಉಸ್ತಾದ್ ಶಾದುಲಿ ಪೈಜಿ ಉದ್ಘಾಟಿಸಿ ದರು. ಪ್ರಾರ್ಥನೆಯನ್ನು ಬಹು ಉಸ್ತಾದ್ ಎಂ.ಎA. ಅಬ್ದುಲ್ಲ ಮುಸ್ಲಿಯಾರ್ ಎಡಪಾಲ ಇವರು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಪಿ. ಎಂ. ಅಬ್ದುಲ್ ರಹಿಮಾನ್ ಹಾಜಿ ವಹಿಸಿದ್ದರು. ವೇದಿಕೆಯಲ್ಲಿ ಗ್ರಾ.ಪಂ. ಸದಸ್ಯ ಕೆ.ಎ. ಇಸ್ಮಾಯಿಲ್, ಟಿ.ಎ. ಮಹಮ್ಮದ್. ಹೊದ್ದೂರು ಗ್ರಾ.ಪಂ. ಸದಸ್ಯ ಎಚ್.ಎ. ಹಂಸ, ಕತ್ತಣೀರ ಮೈಸಿ, ಕರೀಂ, ಮತ್ತಿತರರು ಇದ್ದರು. ಜಮಾಅತ್ ಪ್ರಧಾನ ಕಾರ್ಯದರ್ಶಿ ಪಿ.ಎ. ಸಿರಾಜುದ್ದೀನ್ ಸ್ವಾಗತಿಸಿ ವಂದಿಸಿದರು. -ದುಗ್ಗಳ ಸದಾನಂದ