ಬೆಂಗಳೂರು, ಫೆ. ೨೨: ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿಕುಶಾಲಪ್ಪ ಅವರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿ (ವನ್ಯಜೀವಿ) ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕ ವಿಜಯ್ ಕುಮಾರ್ ಗೋಗಿ ಅವರನ್ನು ಬೆಂಗಳೂರು ಮಲ್ಲೇಶ್ವರಂನ ಅರಣ್ಯ ಭವನದ ಕಚೇರಿಯಲ್ಲಿ ಭೇಟಿಮಾಡಿ ಕೊಡಗಿನಲ್ಲಿ ಆನೆ ಇತರೆ ವನ್ಯಪ್ರಾಣಿ ಹಾಗೂ ಮಾನವ ಸಂಘರ್ಷ ತಡೆ, ಕಾಡ್ಗಿಚ್ಚು, ವನ್ಯಪ್ರಾಣಿಗಳ ಕಳ್ಳ ಬೇಟೆ ನಿಯಂತ್ರಣ ಕುರಿತು ಚರ್ಚೆ ನಡೆಸಿದರು.

ನಂತರ ಪ್ರತಿಕ್ರಿಯೆ ನೀಡಿದ ವನ್ಯಜೀವಿ ಪರಿಪಾಲಕರು ಈಗಾಗಲೇ ಕಾಡಾನೆ ನಿಯಂತ್ರಣಕ್ಕೆ ರೈಲ್ವೆ ಕಂಬಿ ಬೇಲಿಯನ್ನು ಅಳವಡಿಸಲಾಗುತ್ತಿದ್ದು, ಕೊಡಗು ನಾಗರಹೊಳೆ ಭಾಗದಲ್ಲಿ ಕೂಡ ಅಳವಡಿಸಲಾಗಿದೆ. ಇದು ಕಾಡಾನೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ ಎಂದರು.

-ಸುಧೀರ್ ಹೊದ್ದೆಟ್ಟಿ