ಪೊನ್ನಂಪೇಟೆ. ಫೆ. ೨೨: ಕೇಂದ್ರ ಸಾಹಿತ್ಯ ಅಕಾಡೆಮಿಯ ಅಂತಾರಾಷ್ಟಿçÃಯ ಮಾತೃಭಾಷಾ ದಿನಾಚರಣೆಯ ಅಂಗವಾಗಿ ಬಹುಭಾಷಾ ಕವಿಗೋಷ್ಠಿಯನ್ನು ಆಯೋಜಿಸಿತ್ತು. ವೆಬ್ಲೈನ್ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕೊಡವ ಭಾಷಾ ಕವಯಿತ್ರಿಯಾಗಿ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಉಪನ್ಯಾಸಕಿ ಡಾ. ಮುಲ್ಲೇಂಗಡ ರೇವತಿ ಪೂವಯ್ಯ ಭಾಗವಹಿಸಿ ಕವನ ವಾಚಿಸಿದರು. ಈ ಗೋಷ್ಠಿಯಲ್ಲಿ ಕನ್ನಡ, ಮಲಯಾಳಂ, ತೆಲುಗು, ತುಳು ಹಾಗೂ ಕೊಡವ ಭಾಷಾ ಕವಿಗಳು ಪಾಲ್ಗೊಂಡಿದ್ದರು.