ಮಡಿಕೇರಿ ಫೆ. ೨೧: ಜಿಲ್ಲಾಡಳಿತ, ಜಿ.ಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟವು ಮಾ.೧೧ ಮತ್ತು ೧೨ ರಂದು ನಡೆಯಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ್ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.೧೧ ರಂದು ಬೆಳಿಗ್ಗೆ ೧೦.೩೦ಕ್ಕೆ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಶಾಸಕ ಅಪ್ಪಚ್ಚು ರಂಜನ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಪಂದ್ಯಾವಳಿಗೆ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಭಾಗವಹಿ ಸಲಿದ್ದಾರೆ.

ಅಂದು ಅಥ್ಲೆಟಿಕ್ಸ್, ಆಯ್ದ ಗುಂಪು ಆಟಗಳು ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿದೆ. ಮಾ.೧೨ ರಂದು ಆಯ್ದ ಗುಂಪು ಆಟಗಳು ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಜರುಗಲಿದ್ದು, ಮಾ.೬ಕ್ಕೆ ಷಟಲ್ ಬ್ಯಾಡ್ಮಿಂಟನ್, ಈಜು, ಟೇಬಲ್ ಟೆನ್ನಿಸ್ ನಡೆಯಲಿದೆ.

ಪುರುಷರ ವಿಭಾಗದಲ್ಲಿ ೪೦ ವರ್ಷ ಒಳಗಿನವರು, ೪೦ ರಿಂದ ೫೦ ವರ್ಷ ಒಳಪಟ್ಟು, ೫೦ ರಿಂದ ೬೦ ವರ್ಷ ಒಳಪಟ್ಟ ವಿಭಾಗಗಳಲ್ಲಿ ಪಂದ್ಯಾವಳಿ ನಡೆಯಲಿದ್ದು, ಮಹಿಳೆಯ ವಿಭಾಗದಲ್ಲಿ ೩೫ ವರ್ಷ ಒಳಗಿನವರು, ೩೫ ರಿಂದ ೪೫ ವರ್ಷ ಒಳಟ್ಟು, ೪೫ ರಿಂದ ೬೦ ವರ್ಷ ಒಳಪಟ್ಟ ವಿಭಾಗದ ಸ್ಪರ್ಧೆಗಳು ನಡೆಯಲಿವೆ ಎಂದರು.

ಕ್ರೀಡಾ ಕೂಟದಲ್ಲಿ ಭಾಗವಹಿಸಲು ಇಚ್ಛಿಸುವವರು ಮಾ.೪ರ ಒಳಗೆ ಈ ಲಿಂಗ್ ಮೂಲಕ hಣಣಠಿs://ಜಿoಡಿms.gಟe/೪ಒಠಿಡಿiಖsvoಜತಿಟಿs೬ಠಿo೮ ನೋಂದಣಿ ಮಾಡಿಕೊಂಡು ಈ ಮಾಹಿತಿಯ ಪ್ರಿಂಟನ್ನು ತೆರೆದು ಇಲಾಖೆ ಮುಖ್ಯಸ್ಥರ ಮೇಲೆ ಸಹಿಯೊಂದಿಗೆ ಮಾ.೧೧ ಬೆಳಿಗ್ಗೆ ೧೦ ಗಂಟೆಯ ಒಳಗೆ ನೋಂದಾಣಿ ವಿಭಾಗದಲ್ಲಿ ನೋಂದಾಯಿಸಿ ಕೊಳ್ಳಬಹುದಾಗಿದೆ.

ಕ್ರೀಡಾಕೂಟದಲ್ಲಿ ಗುಂಪು ಆಟದಲ್ಲಿ ಪ್ರಥಮ, ದ್ವಿತೀಯ ಸ್ಥಾನವನ್ನು ಗೆದ್ದ ಕ್ರೀಡಾಪುಟುಗಳು ಜಿಲ್ಲಾ ಮಟ್ಟದ ಕ್ರೀಡಾ ಕೂಟ ನಡೆದ ಎರಡು ದಿನಗಳ ಒಳಗಾಗಿ ರಾಜ್ಯದಿಂದ ಕಳುಹಿಸುವ ನೋಂದಣಿ ಲಿಂಕ್ ಅನ್ನು ಬಳಸಿ ತಮಗೆ ದೊರೆತ ಪ್ರಶಸ್ತಿ ಪತ್ರದ ಫೋಟೋವನ್ನು ಅದರಲ್ಲಿ ಅಪ್‌ಲೋಡ್ ಮಾಡುವ ಮೂಲಕ ಕಡ್ಡಾಯವಾಗಿ ನೋಂದಾಯಿಸಿಕೊಳ್ಳುವAತೆ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯ ಪರಿಷತ್ ಸದಸ್ಯ ಬಿ.ಎಸ್. ಜನಾರ್ಧನ್, ಖಜಾಂಚಿ ಬಿ.ಡಿ. ರಾಜೇಶ್, ಪ್ರಧಾನ ಕಾರ್ಯದರ್ಶಿ ಎಂ.ಸಿ. ಅರುಣ್ ಕುಮಾರ್, ಗೌರವಾಧ್ಯಕ್ಷ ಎಸ್.ಟಿ. ಶಮ್ಮಿ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ರೇವತಿ ರಮೇಶ್ ಉಪಸ್ಥಿತರಿದ್ದರು.