ಮಡಿಕೇರಿ, ಫೆ. ೨೧: ಕೊಡಗು ರಕ್ಷಣಾ ವೇದಿಕೆಯ ಮಡಿಕೇರಿ ನಗರ ಘಟಕ ರಚನೆಗೊಂಡಿದ್ದು, ಅಧ್ಯಕ್ಷರಾಗಿ ಚೊಟ್ಟೆಯಂಡ ಶರತ್ ಆಯ್ಕೆಯಾಗಿದ್ದಾರೆ. ಕಾರ್ಯಾಧ್ಯಕ್ಷರಾಗಿ ಮಹೇಶ್, ನಗರ ಉಸ್ತುವಾರಿಗಳಾಗಿ ಸುಲೇಮಾನ್ ಎಂ.ವೈ, ಉಪಾಧ್ಯಕ್ಷರಾಗಿ ವಿನೋದ್, ಕಾರ್ಯದರ್ಶಿ ಜುನೈದ್, ಖಜಾಂಚಿ ರಮೇಶ್ ಗೌಡ, ಮಡಿಕೇರಿಯ ವಿವಿಧ ವಾರ್ಡ್ಗಳಿಂದ ನಿರ್ದೇಶಕರಾಗಿ ಮಹಮದ್ ಯಾಕೂಬ್, ತೀರ್ಥೇಶ್, ಶರತ್, ರಾಜು ಕೀರ್ತಿ, ಶೌಕತ್ ಆಲಿ, ಬನ್ಸಿ ನಾಣಯ್ಯ, ಗುರುಪ್ರಸಾದ್, ಮನ್ಸೂರ್ ಅಹಮದ್ ಎಂ.ಎA, ಕಲಂದರ್, ಪ್ರದೀಪ್, ಹೇಮರಾಜು, ಶರೀಫ್, ಪವನ್, ವಿನಯ್, ಸಿಕಂದರ್, ಕಲೀಲ್, ನೋಮನ್ ಹಾಗೂ ಫರ್ಹಾನ್ ಆಯ್ಕೆಯಾಗಿದ್ದಾರೆ.