*ಸಿದ್ದಾಪುರ, ಫೆ. ೨೧ : ಕುರಿಗಳನ್ನು ಸಾಗಾಟ ಮಾಡುತ್ತಿದ್ದ ಗುಜರಾತ್ ಮೂಲದ ಲಾರಿಗೆ ವಾಲ್ನೂರು, ತ್ಯಾಗತ್ತೂರು ಗ್ರಾ.ಪಂ ರೂ.೧೫ ಸಾವಿರ ದಂಡ ವಿಧಿಸಿದೆ.

ನೀರುಕೊಲ್ಲಿ ಅರಣ್ಯ ಪ್ರದೇಶದ ಟ್ರಂಚ್‌ಗೆ ಒಂದು ಕುರಿಯ ಮೃತದೇಹ ಮತ್ತು ತ್ಯಾಜ್ಯವನ್ನು ತಂದು ಸುರಿದ ಲಾರಿಯನ್ನು ತಡೆದು ಚಾಲಕನಿಗೆ ದಂಡ ವಿಧಿಸಲಾಯಿತು. ಅಮ್ಮಂಗಲ ಗ್ರಾಮದ ಬೆಳೆಗಾರರಾದ ಚೇನಂಡ ಜಿತಿನ್ ದೇವಯ್ಯ ಹಾಗೂ ಚೇನಂಡ ಅಯ್ಯಪ್ಪ ಅವರುಗಳು ತ್ಯಾಜ್ಯ ಸುರಿಯುತ್ತಿದ್ದ ಲಾರಿಯ ವಿರುದ್ಧ ಗ್ರಾ.ಪಂ.ಗೆ ದೂರು ನೀಡಿದರು. ತಕ್ಷಣ ಕಾರ್ಯ ಪ್ರವೃತ್ತರಾದ ಜಿ.ಪಂ. ಉಪ ಕಾರ್ಯದರ್ಶಿ ಲಕ್ಷಿö್ಮ, ಗ್ರಾ.ಪಂ ಅಧ್ಯಕ್ಷೆ ಅನಿತಾ, ಕಾರ್ಯದರ್ಶಿ ರವಿ ಹಾಗೂ ಅಭಿವೃದ್ಧಿ ಅಧಿಕಾರಿ ಲೋಕೇಶ್ ಸ್ಥಳಕ್ಕೆ ಭೇಟಿ ನೀಡಿ ಲಾರಿಯನ್ನು ವಶಕ್ಕೆ ಪಡೆದರು.

ರೂ.೧೫ ಸಾವಿರ ದಂಡ ಪಾವತಿಸಿದ ನಂತರ ಲಾರಿಯನ್ನು ಬಿಟ್ಟು ಕೊಡಲಾಯಿತು. ಅಲ್ಲದೆ ತ್ಯಾಜ್ಯವನ್ನು ತೆಗೆಸಿ ಅದೇ ಲಾರಿಯಲ್ಲಿ ಕಳುಹಿಸಲಾಯಿತು.

- ಅಂಚೆಮನೆ ಸುಧಿ