ಮಡಿಕೇರಿ, ಫೆ.೨೨ : ನಗರಸಭಾ ವ್ಯಾಪ್ತಿಯ ಬಡವರಿಗೆ ವಸತಿ ಸೌಲಭ್ಯ ಕಲ್ಪಿಸಬೇಕು, ಶಾಲಾ, ಕಾಲೇಜುಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು ಮತ್ತು ರಾಜಾಸೀಟು ಬಳಿಯ ಪುಟಾಣಿ ರೈಲನ್ನು ದುರಸ್ತಿಪಡಿಸಬೇಕೆಂದು ಮಡಿಕೇರಿ ನಗರ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಒತ್ತಾಯಿಸಿದೆ.

ಈ ಕುರಿತು ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ನಂಜುAಡೇಗೌಡ ಅವರಿಗೆ ಮನವಿ ಪತ್ರ ಸಲ್ಲಿಸಿದ ಅಲ್ಪಸಂಖ್ಯಾತರ ಘಟಕದ ನಗರಾಧ್ಯಕ್ಷ ಕೆ.ಜಿ. ಪೀಟರ್ ಹಾಗೂ ಪ್ರಮುಖರು “ಹೌಸಿಂಗ್ ಫಾರ್ ಆಲ್” ಅಭಿಯಾನದ ೧೧೨೬ ಅರ್ಜಿದಾರರಿಗೆ ಮನೆಗಳನ್ನು ನಿರ್ಮಿಸಿಕೊಡಬೇಕೆಂದು ಆಗ್ರಹಿಸಿದರು.

೨೦೧೬ ರಲ್ಲಿ “ಹೌಸಿಂಗ್ ಫಾರ್ ಆಲ್” ಅಭಿಯಾನದಡಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ ಇಲ್ಲಿಯವರೆಗೆ ಬಡವರಿಗೆ ವಸತಿ ಸೌಲಭ್ಯ ನೀಡಿಲ್ಲ. ಕಳೆದ ೧೫ ವರ್ಷಗಳಿಂದ ವಸತಿ ಯೋಜನೆಯನ್ನು ಜಾರಿಗೊಳಿಸದ ಮಡಿಕೇರಿ ನಗರಸಭೆ ನಿವೇಶನ ರಹಿತರನ್ನು ನಿರ್ಲಕ್ಷಿಸುತ್ತಲೇ ಬರುತ್ತಿದೆ ಎಂದು ಆರೋಪಿಸಿದರು. ಇತ್ತೀಚಿನ ಬೆಳವಣಿಗೆಗಳನ್ನು ಅವಲೋಕಿಸಿ ಶಾಂತಿ, ಸುವ್ಯವಸ್ಥೆಯನ್ನು ಕಾಪಾಡಲು ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಲಾ, ಕಾಲೇಜುಗಳ ದ್ವಾರ ಹಾಗೂ ಆವರಣದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲು ಶಿಕ್ಷಣ ಸಂಸ್ಥೆಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿದರು.

ಪ್ರವಾಸಿಗರ ಅಚ್ಚುಮೆಚ್ಚಿನ ತಾಣ ರಾಜಾಸೀಟು ಉದ್ಯಾನವನದ ಬಳಿ ಇರುವ ಪುಟಾಣಿ ರೈಲು ಸಂಚಾರ ಸ್ಥಗಿತಗೊಂಡು ವರ್ಷಗಳೇ ಕಳೆದಿವೆ. ಈ ರೈಲು ತುಕ್ಕು ಹಿಡಿಯುತ್ತಿದ್ದು, ನಿಷ್ಟçಯೋಜಕವಾಗಿದೆ. ತಕ್ಷಣ ರೈಲನ್ನು ವೈಜ್ಞಾನಿಕ ರೂಪದಲ್ಲಿ ದುರಸ್ತಿ ಪಡಿಸಿ ಮಕ್ಕಳ ಮನೋರಂಜನೆಗೆ ಅವಕಾಶ ಕಲ್ಪಿಸಿಕೊಡಬೇಕೆಂದು ಪೀಟರ್ ಇದೇ ಸಂದರ್ಭ ಒತ್ತಾಯಿಸಿದರು.

ಮನವಿ ಸಲ್ಲಿಸುವ ಸಂದರ್ಭ ಉಪಾಧ್ಯಕ್ಷ ಯಾಕೂಬ್ ಮೊಹಮ್ಮದ್, ಪ್ರಧಾನ ಕಾರ್ಯದರ್ಶಿ ಫಯಾಜ್, ಸಾಮಾಜಿಕ ಜಾಲತಾಣದ ಜಿಲ್ಲಾ ಕಾರ್ಯದರ್ಶಿ ಎಂ.ಎನ್. ರೌಫ್, ಪ್ರಮುಖರಾದ ಫೈಜಾನ್ ಅಹಮ್ಮದ್, ಸಲಾವುದ್ದೀನ್, ಫಾರುಕ್, ಶೌಕತ್ ಆಲಿ ಮತ್ತಿತರರು ಹಾಜರಿದ್ದರು.