ಮಡಿಕೇರಿ, ಫೆ. ೨೨: ನಗರಸಭೆ ನಿರೀಕ್ಷಿಸಿದ್ದ ಆದಾಯ ಬಾರದ ಹಿನ್ನೆಲೆಯಲ್ಲಿ ಇಂದು ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಪಾರ್ಕಿಂಗ್ ಹರಾಜು ಪ್ರಕ್ರಿಯೆ ರದ್ದಾಯಿತು.

ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಆಯುಕ್ತ ರಾಮದಾಸ್, ಉಪಾಧ್ಯಕ್ಷೆ ಸವಿತಾ ರಾಕೇಶ್ ಅವರುಗಳ ಸಮ್ಮುಖದಲ್ಲಿ ಕಾಲೇಜು ರಸ್ತೆಯ ಜಿಇಸಿಯಿಂದ ಡಾ. ದೇವಯ್ಯ ಕ್ಲಿನಿಕ್ ಕಟ್ಟಡದವರೆಗೆ, ಕಾಲೇಜು ರಸ್ತೆ ಅಪ್ಪಚ್ಚಕವಿ ರೈಸ್ ಮಿಲ್‌ಗೆ ತಿರುಗುವ ರಸ್ತೆ ಬದಿಯಿಂದ ಕಾವೇರಿ ಬೇಕರಿವರೆಗೆ, ಎಸ್‌ಬಿಐ ಬ್ಯಾಂಕ್‌ನಿAದ ಇಳಿಯುವ ರಸ್ತೆ ಬದಿ ಗ್ರೀನ್ ಲಿಂಕ್ಸ್ ಸುಬ್ಬಯ್ಯ ಅವರ ಕಟ್ಟಡದವರೆಗೆ, ಚೌಕಿ ಮುಖ್ಯ ರಸ್ತೆಯ ದರ್ಬಾರ್ ಹೊಟೇಲ್ ಕಟ್ಟಡದಿಂದ ಸೀಜನ್ಸ್ ಬಟ್ಟೆ ಅಂಗಡಿಯವರೆಗೆ, ನಾರ್ತ್ ಕೂರ್ಗ್ ಕ್ಲಬ್ ಎದುರು ಇರುವ ಜಾಗ ಹಾಗೂ ಮೆಕ್‌ಡೊವೆಲ್ ಬಿಲ್ಡಿಂಗ್ ಜಾಗದಲ್ಲಿ ಕಾರು ಹಾಗೂ ಜೀಪು ನಿಲುಗಡೆ ಪಾರ್ಕಿಂಗ್ ಶುಲ್ಕ ವಸೂಲಾತಿ ಸಂಬAಧ ಕರೆಯಲಾಗಿದ್ದ ಟೆಂಡರ್ ಪ್ರಕ್ರಿಯೆಯಲ್ಲಿ ಹತ್ತು ಮಂದಿ ಬಿಡ್‌ದಾರರು ಪಾಲ್ಗೊಂಡಿದ್ದರು. ಸರ್ಕಾರಿ ಸವಾಲು ಮೊತ್ತವನ್ನು ೨ ಲಕ್ಷಕ್ಕೆ ನಿಗದಿ ಮಾಡಲಾಗಿತ್ತು. ಆದರೆ ಬಿಡ್‌ದಾರರು ೨ ಲಕ್ಷದ ೩೫೦೦ ರೂ.ವರೆಗೆ ಮಾತ್ರ ಹರಾಜು ಕರೆದ ಕಾರಣ ನಗರಸಭೆಗೆ ನಿರೀಕ್ಷಿತ ಆದಾಯ ಬರಲಿಲ್ಲ ಎಂದು ಹರಾಜು ಪ್ರಕ್ರಿಯೆಯನ್ನು ರದ್ದುಗೊಳಿಸಲಾಯಿತು. ನಗರಸಭೆ ಸಾಮಾನ್ಯ ಸಭೆ ಕರೆದು ಈ ಸಂಬAಧ ಚರ್ಚಿಸಿದ ಬಳಿಕ ಹರಾಜು ಪ್ರಕ್ರಿಯೆಯನ್ನು ಹಮ್ಮಿಕೊಳ್ಳುವುದಾಗಿ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಪ್ರಕಟಿಸಿದರು.

ನಗರಸಭಾ ಸದಸ್ಯರುಗಳಾದ ಅರುಣ್ ಶೆಟ್ಟಿ, ಸಬಿತಾ, ಕಲಾವತಿ, ಶ್ವೇತ, ಚಂದ್ರ, ಮಹೇಶ್ ಜೈನಿ, ಮುಸ್ತಫ ಮತ್ತಿತರರು ಹಾಜರಿದ್ದರು.