ಕೂಡಿಗೆ, ಫೆ. ೨೨: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯಿಂದ ಕುಡಿಯುವ ನೀರಿಗಾಗಿ ಮತ್ತು ಹಾರಂಗಿ ಬಲದಂಡೆ ಮತ್ತು ಎಡದಂಡೆ ಅಚ್ಚುಕಟ್ಟು ಪ್ರದೇಶದ ಕೆರೆ ಕಟ್ಟೆಗಳಿಗೆ ೨೮ ರಿಂದ. ಮಾರ್ಚ್ ೧೪ ರವರೆಗೆ ೧೫ ದಿನಗಳ ಕಾಲ ನೀರನ್ನು ನಾಲೆಗಳ ಮೂಲಕ ಹರಿಸಲಾಗುವುದು ಎಂದು ಹಾರಂಗಿ ನೀರಾವರಿ ಇಲಾಖೆಯ ಅಧೀಕ್ಷಕ ಇಂಜಿನಿಯರ್ ಚನ್ನಕೇಶವ ಪತ್ರಿಕಾ ಹೇಳಿಕೆ ಮೂಲಕ ಮಾಹಿತಿ ನೀಡಿದ್ದಾರೆ.

ನಂತರ ಮಾರ್ಚ್ ೨೫ರಿಂದ ಏಪ್ರಿಲ್ ೮ರವರೆÀಗೆ ಎರಡನೇ ಹಂತದಲ್ಲಿ ೧೫ ದಿನಗಳ ವರೆಗೆ ನೀರು ಹರಿಸಲಾಗುವುದು. ಏಪ್ರಿಲ್ ೧೯ ರಿಂದ ೨೮ ರವರೆಗೆ ೧೦ ದಿನಗಳ ಕಾಲ ಮೂರನೆಯ ಹಂತವಾಗಿ ನಾಲೆಗಳ ಮೂಲಕ ನೀರು ಹರಿಸಲಾಗುವುದು.