ಮಡಿಕೇರಿ, ಫೆ. ೨೨: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಪುತ್ತೂರು ವಿಭಾಗದಲ್ಲಿ ಚಾಲಕ ಮತ್ತು ನಿರ್ವಾಹಕರಿಗೆ ಐದು ವರ್ಷಗಳ ನಿರಂತರ ಅಪಘಾತ ರಹಿತ ಮತ್ತು ಅಪರಾಧ ರಹಿತ ಸೇವೆಯನ್ನು ಪರಿಗಣಿಸಿ ೨೦೧೯ನೇ ಸಾಲಿನ ಬೆಳ್ಳಿ ಪದಕ ವಿತರಣಾ ಸಮಾರಂಭ ಇತ್ತೀಚೆಗೆ ವಿಭಾಗ ಕಾರ್ಯಾಗಾರದಲ್ಲಿ ನಡೆಯಿತು.

ಕೊಡಗು ಸಂಪಾಜೆ ಗ್ರಾಮದ ಕೊಯನಾಡಿನ ಕಾಲ್ಯಾನ ಬಾಲಕೃಷ್ಣ ಅವರು ಸತತ ಸೇವೆಗಾಗಿ ಬೆಳ್ಳಿ ಪದಕ ಮತ್ತು ಪ್ರಶಸ್ತಿಗೆ ಭಾಜನರಾದರು.