ವೀರಾಜಪೇಟೆ, ಫೆ. ೨೦: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಆಯ್ದ ಸೇವೆಗಳನ್ನು ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ತಲುಪಿಸುವಂತ ಕಾರ್ಯಕ್ರಮಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಮ್ಮಿಕೊಂಡಿರುವುದು ಉತ್ತಮ ಕಾರ್ಯವಾಗಿದೆ ಎಂದು ಕಾಕೋಟುಪರಂಬು ಗ್ರಾ.ಪಂ. ಅಧ್ಯಕ್ಷ ಮೇವಡ ಗಿರೀಶ್ ಬೋಪಣ್ಣ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕಾಕೋಟುಪರಂಬು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಡಿಜಿಟಲ್ ಸೇವಾ ಕಾಮನ್ ಸರ್ವಿಸ್ ಸೆಂಟರ್‌ನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದ ಜನರಿಗೆ ಬಡ ಕುಟುಂಬಗಳು ಹಾಗೂ ಸದಸ್ಯರ ಆರ್ಥಿಕ ಅಭಿವೃದ್ಧಿ ಜೊತೆಗೆ ಎಲ್ಲಾ ವ್ಯವಹಾರಗಳು ಆನ್‌ಲೈನ್‌ನಲ್ಲಿಯೇ ಆಗಬೇಕು ಎಂದು ಪ್ರಧಾನಿ ಮೋದಿ ಅವರ ಕನಸನ್ನು ಸಕಾರಗೊಳಿಸುವಲ್ಲಿ ಧರ್ಮಸ್ಥಳ ವಿರೇಂದ್ರ ಹೆಗ್ಗಡೆಯವರು ಯಶಸ್ವಿಯಾಗಿದ್ದಾರೆ. ಅವರು ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಾ ಸರ್ಕಾರದ ಯೋಜನೆಗಳಿಗೆ ಕೈ ಜೋಡಿಸಿರುವುದು ಶ್ಲಾಘನೀಯ ಎಂದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದೀಪಾ ಅವರು ಮಾತನಾಡಿ, ಸರ್ಕಾರದ ಎಲ್ಲಾ ಡಿಜಿಟಲೀಕರಣ ಸೇವೆಗೆ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಇ-ಶ್ರಮ ಕಾರ್ಡ್ ಉಚಿತವಾಗಿ ದೊರೆಯುವುದು ಪಂಚಾಯಿತಿಯಿAದ ಗ್ರಾಮಸ್ಥರಿಗೆ ಉತ್ತಮ ಸಹಕಾರ ನೀಡುವುದಾಗಿ ತಿಳಿಸಿದರು.

ಸೇವಾ ಸರ್ವಿಸ್ ಸೆಂಟರ್ ಸಮನ್ವಯಾಧಿಕಾರಿ ಭರತ್ ಮಾತನಾಡಿ ತಾಲೂಕಿನಲ್ಲಿ ೨೮ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದೆ ಇದಕ್ಕೆ ಮೂಲ ದಾಖಲೆಗಳ ಬಗ್ಗೆ ಸಭೆಗೆ ಮಹಿತಿ ನೀಡಿದರು. ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕಿ ರತ್ನಮೈಪಾಳ ಮಾತನಾಡಿ, ಈಗಾಗಲೇ ವೀರಾಜಪೇಟೆ ಪಟ್ಟಣ ತಾಲೂಕಿನ ಚೆಂಬೆಬೆಳ್ಳೂರು, ನರಿಯಂದಡ ಸೇರಿದಂತೆ ಆಯ್ದ ಭಾಗಗಳಲ್ಲಿ ಡಿಜಿಟಲ್ ಸೇವಾ ಕೇಂದ್ರವನ್ನು ತೆರೆಯಲಾಗಿದೆ ಫಲಾನುಭವಿಗಳು ಇದರ ಸದುಪಯೋಗ ಪಡಿಸಿಕೊಳ್ಳುವಂತಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಪಂಚಾಯಿತಿ ಉಪಾಧ್ಯಕ್ಷೆ ರೇವತಿ ಹಾಗೂ ಸದಸ್ಯರು, ಯೋಜನೆಯ ಸೇವಾಪ್ರತಿನಿಧಿಗಳಾದ ರೇಖಾ, ತೇಜಸ್ವಿನಿ, ಸರಸ್ವತಿ, ಹರ್ಷಿತಾ, ಸ್ವಾತಿ, ಆಶಾ ಕಾರ್ಯಕರ್ತೆ ಜ್ಯೋತಿ ಮುಂತಾದವರು ಉಪಸ್ಥಿತರಿದ್ದರು.