ಮಡಿಕೇರಿ, ಫೆ. ೨೦: ಭೂಕುಸಿತ ಹಾಗೂ ಜಲಪ್ರಳಯದಲ್ಲಿ ಮನೆ, ಮಠಗಳನ್ನು ಕಳೆದುಕೊಂಡು ಸಂತ್ರಸ್ತರಾದವರಿಗಾಗಿ ಮಾದಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜಂಬೂರುವಿನಲ್ಲಿ ನಿರ್ಮಿಸಲಾಗಿರುವ ನಿರಾಶ್ರಿತರ ಬಡಾವಣೆಯಲ್ಲಿ ಮನೆ ಇರುವವರಿಗೇ ಮನೆಗಳನ್ನು ನೀಡಲಾಗಿದೆ. ಆದರೆ., ಎಲ್ಲವನ್ನೂ ಕಳೆದುಕೊಂಡು ಅಪಾಯದ ಸ್ಥಿತಿಯಲ್ಲಿರುವ., ಇಂದೋ ನಾಳೆಯೋ ನಾಶವಾಗುವ ಮನೆಯಲ್ಲಿ ಜೀವ ಕೈಯ್ಯಲ್ಲಿ ಹಿಡಿದುಕೊಂಡು ಜೀವನ ಸಾಗಿಸುತ್ತಿರುವ ಬಡಪಾಯಿಗಳಿಗೆ ಸೂರು ಕಲ್ಪಿಸಲು ಸರಕಾರ ಮುಂದಾಗದಿರುವದು ಮತ್ತೊಂದು ದುರಂತಕ್ಕೆ ಸಾಕ್ಷಿಯಾಗಿದೆ..!

೨೦೧೮ರಲ್ಲಿ ಸಂಭವಿಸಿದ ಭೂಕುಸಿತ ಹಾಗೂ ಜಲಪ್ರಳಯದಲ್ಲಿ ಸಂತ್ರಸ್ತರಾದವರಿಗಾಗಿ ಆಗಿನ ಮುಖ್ಯಮಂತ್ರಿ ಹೆಚ್.ಡಿ, ಕುಮಾರಸ್ವಾಮಿ ನೇತೃತ್ವದ ಸರಕಾರ ಪರಿಹಾರದೊಂದಿಗೆ ರೂ. ೧೦ ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಿಕೊಡುವ ಯೋಜನೆ ರೂಪಿಸಿ ರಾಜೀವ್‌ಗಾಂಧಿ ವಸತಿ ನಿಗಮದ ಮೂಲಕ ಮನೆ ನಿರ್ಮಾಣಕ್ಕೆ ಮುಂದಾಯಿತು. ಜಂಬೂರು ಬಾಣೆ, ಗೋಳಿಕಟ್ಟೆ, ಕರ್ಣಂಗೇರಿ, ಗಾಳಿಬೀಡು, ಬಿಳಿಗೇರಿ, ಕೆ.ನಿಡುಗಣೆಯಲ್ಲಿ ಸರಕಾರಿ ಜಾಗ ಗುರುತಿಸಿ ಮನೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಯಿತು. ಇದರೊಂದಿಗೆ ಪ್ರತಿಷ್ಠಿತ ಇನ್ಫೋಸಿಸ್ ಸಂಸ್ಥೆ ಕೂಡ ಸುಮಾರು ೨೦೬ ಮನೆಗಳನ್ನು ನಿರ್ಮಿಸಿಕೊಡಲು ಮುಂದಾಯಿತು.

ಜಂಬೂರು, ಗೋಳಿಕಟ್ಟೆ, ಕರ್ಣಂಗೇರಿ, ಬಿಳಿಗೇರಿಗಳಲ್ಲಿ ಈಗಾಗಲೇ ಸಂತ್ರಸ್ತರಿಗೆ ಮನೆಗಳನ್ನು ನೀಡಲಾಗಿದೆ. ಆದರೆ, ಮನೆ ಇರುವವರಿಗೆ ಮತ್ತೆ ಮನೆಗಳನ್ನು ಜಂಬೂರುವಿನಲ್ಲಿ ನೀಡಲಾಗಿದೆ ಎಂಬ ಆರೋಪಗಳು ಪದೇ ಪದೇ ಕೇಳಿ ಬರುತ್ತಿವೆ. ಇದಕ್ಕೆ ಸಾಕ್ಷಿಯೆಂಬAತೆ ಅಲ್ಲಿ ೬೨ ಮನೆಗಳು ಇಂದಿಗೂ ಬೀಗ ಜಡಿಯಲ್ಪಟ್ಟ ಸ್ಥಿತಿಯಲ್ಲಿವೆ. ಇವುಗಳನ್ನು ತೆರವುಗೊಳಿಸಿ ನೈಜ ಸಂತ್ರಸ್ತರಾಗಿರುವ, ಇಂದಿಗೂ ಅಪಾಯದ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿರುವವರಿಗೆ ಮನೆಗಳನ್ನು ನೀಡಬೇಕೆಂಬದು ಸಂತ್ರಸ್ತರ ಅಳಲಾಗಿದೆ.

ಮಕ್ಕಂದೂರಿನಿAದ ಮನವಿ..೧

೨೦೧೮ರಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಅತಿ ಹೆಚ್ಚಿಗೆ ಹಾನಿಯಾಗಿರುವದು ಮಕ್ಕಂದೂರು ಗ್ರಾಮ ಪಂಚಾಯ್ತಿಯಲ್ಲಿ. ತಾಯಿ-ಮಗ ಸೇರಿದಂತೆ ೮ ಜೀವ ಹಾನಿಯಾಗಿದ್ದಲ್ಲದೆ, ನೂರಾರು ಮಂದಿ ಸಂತ್ರಸ್ತರಾದರು. ಒಂದಷ್ಟು ಮಂದಿಗೆ ಪರಿಹಾರದೊಂದಿಗೆ ಮನೆಗಳು ಮಂಜೂರಾಗಿ ಕೆಲವರಿಗೆ ಮನೆಗಳು ಸಿಕ್ಕಿವೆ. ಇನ್ನೂ ಅನೇಕ ಮಂದಿ ಮನೆಗಾಗಿ ಕಾಯುತ್ತಲಿದ್ದಾರೆ. ಅದಕ್ಕಿಂತಲೂ ಹೆಚ್ಚಾಗಿ ಅದೆಷ್ಟೋ ಮಂದಿ ಮಳೆಗಾಲ ಬಂತೆAದರೆ ಜೀವ ಕೈಯಲ್ಲಿಡಿದುಕೊಂಡು ಜೀವನ ಸಾಗಿಸುತ್ತಿದ್ದಾರೆ. ಸರಕಾರದ ನೋಟೀಸು ಹಿಡಿದುಕೊಂಡು ಬೇರೆ ಕಡೆಗಳಿಗೆ ವಲಸೆ ಹೋಗುತ್ತಾ ಮಳೆ ಕಳೆದ ಬಳಿಕ ಮತ್ತದೇ ಅಪಾಯದ ಗೂಡಿನೊಳಗಡೆ ಜೀವ ತೇಯುತ್ತಿದ್ದಾರೆ. ಈ ಬಗ್ಗೆ ಮಕ್ಕಂದೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಶ್ಯಾಂ ಸುಬ್ಬಯ್ಯ ನೇತೃತ್ವದ ಆಡಳಿತ ಮಂಡಳಿ ಪಂಚಾಯ್ತಿ ವ್ಯಾಪ್ತಿಯ ಜಹಗೀರು ಪೈಸಾರಿ, ಉದಯಗಿರಿ, ಹೆಮ್ಮೆತಾಳು ಗ್ರಾಮಗಳಲ್ಲಿ ಸರ್ವೆ ಕಾರ್ಯ ನಡೆಸಿ ೨೫ಕ್ಕೂ ಅಧಿಕ ಅಪಾಯದಲ್ಲಿರುವ ಮನೆಗಳನ್ನು ಗುರುತಿಸಿ, ಆ ಬಡ ಜನತೆಗೆ ಸೂರು ಕಲ್ಪಿಸುವಂತೆ ಜಿಲ್ಲಾಡಳಿತ ಹಾಗೂ ಸರಕಾರಕ್ಕೆ

(ಮೊದಲ ಪುಟದಿಂದ) ಒಂದು ವರ್ಷದ ಹಿಂದೆಯೇ ಮನವಿ ಸಲ್ಲಿಸಿದೆ. ಆದರೆ ಸರಕಾರದ ಆಸರೆಯನ್ನು ಆ ಬಡಪಾಯಿಗಳ ಮೇಲೆ ಇನ್ನೂ ಹಾಸಲಾಗಿಲ್ಲ..!

ಮನೆಯೊಳಗೆ ನೀರು..!

ಇತ್ತ ಮತ್ತೊಂದು ದುರ್ಗಮ ಪ್ರದೇಶವಾದ ಗರ್ವಾಲೆಯಲ್ಲೊಬ್ಬರು ಮಳೆಗಾಲದಲ್ಲಿ ಮನೆಯೊಳಗೆ ಒಸರುವ ನೀರಿನೊಂದಿಗೆ ಜೀವನ ಸಾಗಿಸುವ ಕರುಣಾಜನಕ ಪರಿಸ್ಥಿತಿಯಿದೆ. ಅಲ್ಲಿನ ನಿವಾಸಿ ಟಿ.ಟಿ. ಬೆಳ್ಯಪ್ಪ ಎಂಬವರ ಮನೆಯ ಬದಿಯಿಂದಲೇ ಭೂಕುಸಿತವಾಗಿದೆ. ಭೂಮಿ ನಡುಗಿದ ರಭಸಕ್ಕೆ ಅವರ ಮನೆಯ ಅಡಿಪಾಯದಿಂದ ಹಿಡಿದು ಗೋಡೆಗಳೆಲ್ಲವೂ ಬಿರುಕು ಬಿಟ್ಟಿವೆ. ಸರಕಾರದ ನಿಯಮದಂತೆ ಪರಿಹಾರ ಹಾಗೂ ಮನೆಗಾಗಿ ಇವರು ಹತ್ತಾರು ಬಾರಿ ಅರ್ಜಿ ಸಲ್ಲಿಸಿದ್ದಾರೆ. ಅಂತಿಮವಾಗಿ ಇವರ ಹೆಸರು ಮನೆ ಕಳೆದುಕೊಂಡ ಸಂತ್ರಸ್ಥರ ಪಟ್ಟಿಯಲ್ಲೂ ಬಂದಿದೆ. ಆದರೆ ಕೊನೆ ಕ್ಷಣದಲ್ಲಿ ಅಧಿಕಾರಿಗಳ ಕೃಪ ಕಟಾಕ್ಷದಿಂದ ಇವರ ಹೆಸರನ್ನು ಕೈಬಿಡಲಾಗಿದೆ. ಆದರೂ ಇಂದೋ ನಾಳೆಯೋ ಧರಾಶಾಯಿ ಂiÀiಪಡೆದುಕೊAಡು ವಾಸವಿರುವವರಿಗೂ, ಕೆಲವು ನೈಜ ಸಂತ್ರಸ್ತರಿಗೆ ಮನೆಗಳನ್ನು ನೀಡದಿರುವ ಬಗ್ಗೆ ಅನುಕಂಪವಿದೆ. ಅದರೊಂದಿಗೆ ಮನೆ ಇರುವವರಿಗೆ ಮತ್ತೆ ಮನೆಗಳನ್ನು ನೀಡಿರುವ ಬಗ್ಗೆಯೂ ಅಸಮಾಧಾನವಿದೆ. ಅಲ್ಲಿನ ನಿವಾಸಿಗಳು ಹೇಳುವಂತೆ ನಿರಾಶ್ರಿತರ ಬಡಾವಣೆಯ ಸನಿಹದಲ್ಲಿಯೇ ಇರುವ ಕಾಲೋನಿ ಯಲ್ಲಿ ಸರಕಾರದಿಂದ Áಗಲಿರುವ ಮನೆಯಲ್ಲಿ ಜೀವ ಭಯದಿಂದ ಜೀವಿಸುತ್ತಿರುವ ಇವರು ಮತ್ತೆ ಮತ್ತೆ ಮನೆಗಾಗಿ ಅರ್ಜಿ ಸಲ್ಲಿಸುತ್ತಲೇ ಇದ್ದಾರೆ.

ಉಳ್ಳವರಿಗೆ ಮನೆ..!?

ಜಂಬೂರುವಿನಲ್ಲಿ ಮನೆ ಮನೆ ಪಡೆದು ಕೊಂಡು ಅಂಗಡಿ ನಡೆಸಿಕೊಂಡು, ಇತರ ವ್ಯಾಪಾರ ವಹಿವಾಟು ಮಾಡಿಕೊಂಡಿರು ವವರಿಗೂ ಮನೆ ನೀಡಲಾಗಿದೆ. ಮನೆಯಲ್ಲಿ ವಾಸವಿಲ್ಲದಿದ್ದರೂ ಅವರಿಗೆ ಬಡಾವಣೆಯ ಉಸ್ತುವಾರಿ ನೀಡಲಾಗಿದೆ. ಇದು ಎಷ್ಟು ಸರಿ ಎಂದು ಬಡಾವಣೆಯ ವಾಸಿಗಳು ಪ್ರಶ್ನಿಸುತ್ತಾರೆ. ಮಡಿಕೇರಿ ನಗರ ಸೇರಿದಂತೆ ಇತರೆಡೆ ಮನೆ ಇರುವವರಿಗೆ ಇಲ್ಲಿ ಮನೆಗಳನ್ನು ನೀಡಲಾಗಿದೆ, ಈ ಮನೆಗಳಿಗೆ ಅಪರೂಪಕ್ಕೊಮ್ಮೆ ಬಂದು ಹೋಗುತ್ತಿದ್ದು, ನಂತರದಲ್ಲಿ ಬೀಗ ಜಡಿಯಲಾಗಿರುತ್ತದೆ. ಇದರಿಂದಾಗಿ ಮನೆಯ ಎದುರು ಕಾಡು ಬೆಳೆದು ಚರಂಡಿಗಳಲ್ಲೂ ಕಾಡು, ಕಸ ತುಂಬಿ ಅಡಚಣೆಯಾಗುತ್ತಿದೆ. ಅಂದಾಜು ೬೨ ಮನೆಗಳು ಈ ರೀತಿಯಾದ ಸ್ಥಿತಿಯಲ್ಲಿದ್ದು, ಇವುಗಳನ್ನು ತೆರವುಗೊಳಿಸಿ ನೈಜ ಸಂತ್ರಸ್ತರಿಗೆ ಮನೆಗಳನ್ನು ಒದಗಿಸಿ ಕೊಡಬೇಕೆಂಬದು ನಿವಾಸಿಗಳ ಕೋರಿಕೆಯಾಗಿದೆ. ? ಸಂತೋಷ್