ಶ್ರೀಮಂಗಲ, ಫೆ. ೨೧: ಪೊನ್ನಂಪೇಟೆ ತಾಲೂಕಿನ ಬಿರುನಾಣಿ ಗ್ರಾಮದಲ್ಲಿ ಅರಣ್ಯ ಇಲಾಖೆಯ ಗಾರ್ಡ್ ಆಗಿ ಕರ್ತವ್ಯದಲ್ಲಿದ್ದ ಯುವರಾಜ್ (೨೫) ಮತ್ತು ಪತ್ನಿ ಶಿಲ್ಪಾ (೨೨) ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ದೇಹದ ಮರಣೋತ್ತರ ಪರೀಕ್ಷೆಯನ್ನು ಪೋಷಕರ ವಿನಂತಿಯAತೆ ಗೋಣಿಕೊಪ್ಪದಲ್ಲಿ ಭಾನುವಾರ ರಾತ್ರಿ ನಡೆಸಿ, ಪೋಷಕರಿಗೆ ಹಸ್ತಾಂತರಿಸಲಾಯಿತು.

ಗಾರ್ಡ್ ಯುವರಾಜ್ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ದಳವಂತಕೊಪ್ಪ ಗ್ರಾಮದವರಾಗಿದ್ದು, ಪತ್ನಿ ಶಿಲ್ಪಾ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ತೊಗರಸಿ ಗ್ರಾಮದವರಾಗಿದ್ದಾರೆ.

ಮೃತ ಯುವರಾಜ್ ಎಂ.ಎ. ವ್ಯಾಸಂಗ ಮಾಡಿ ಅರಣ್ಯ ಇಲಾಖೆಯಲ್ಲಿ ಉದ್ಯೋಗಕ್ಕೆ ಸೇರಿದ್ದರು. ಶಿಲ್ಪಾ ಬಿ.ಎಸ್ಸಿ ಪದವಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದರು. ಆಕೆ ಎಂ.ಎಸ್ಸಿ ಮಾಡಲು ಆಸಕ್ತಿ ಹೊಂದಿದ್ದರು. ಆದರೆ, ವ್ಯಾಸಂಗದ ಬದಲು ಮದುವೆ ಮಾಡಲಾಯಿತು ಎಂದು ಶಿಲ್ಪಾ ತಂದೆ ಪೊಲೀಸರೊಂದಿಗೆ ಹೇಳಿಕೊಂಡಿದ್ದಾರೆ.

ಶಿಲ್ಪಾ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ನಂತರ ಮೃತ ದೇಹವನ್ನು ಬಾಡಿಗೆ ಮನೆಯ ಮಾಲೀಕರ ಸಹಕಾರದಿಂದ ಇಳಿಸಿ ಹಾಲ್‌ನಲ್ಲಿ ಇರಿಸಿ, ತನ್ನ ಸಂಬAಧಿಕರಿಗೆ ದೂರವಾಣಿ ಕರೆ ಮಾಡಿ ವಿಷಯವನ್ನು ಯುವರಾಜ್‌ಗೆ ತಿಳಿಸಿದ್ದ. ಈ ಸಂದರ್ಭ ತನ್ನ ತಂದೆಯೊAದಿಗೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ‘ನಾನೇ ಕಾರಣ ಎಂದು ಆರೋಪ ಬರುತ್ತದೆ. ನನ್ನ ಬದುಕು ಮುಗಿಯಿತು. ನಾನು ಬದುಕುವುದಿಲ್ಲ’ ಎಂದು ತನ್ನ ತಂದೆಯೊAದಿಗೆ ಹೇಳಿ ಪತ್ನಿ ನೇಣುಬಿಗಿದುಕೊಂಡ ಬಾತ್‌ರೂಂನಲ್ಲಿಯೇ ವೇಲ್‌ಗೆ ಕೊರಳೊಡ್ಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. - ಹರೀಶ್ ಮಾದಪ್ಪ