ಮಡಿಕೇರಿ, ಫೆ. ೨೧: ಮಡಿಕೇರಿ ತಾಲೂಕು ಜಾನಪದ ಪರಿಷತ್ ವತಿಯಿಂದ ಜಾನಪದ ಯುವ ಬಳಗವನ್ನು ಅಸ್ತಿತ್ವಕ್ಕೆ ತರಲಾಗಿದ್ದು, ಜಿಲ್ಲೆಯ ಕೊಡವ, ಅರೆಭಾಷೆ ಸಾಹಿತ್ಯ ಸಂಸ್ಕೃತಿ ಅಕಾಡೆಮಿ ಅಧ್ಯಕ್ಷರು, ಜಿಲ್ಲಾ ಕಸಾಪ ಮತ್ತು ಜಾನಪದ ಪರಿಷತ್ ಅಧ್ಯಕ್ಷರು ಯುವ ಕಲಾವಿದರ ಬಳಗಕ್ಕೆ ಚಾಲನೆ ನೀಡಿದರು.

ನಗರದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಮಡಿಕೇರಿ ತಾಲೂಕು ಜಾನಪದ ಪರಿಷತ್ ವತಿಯಿಂದ ಆಯೋಜಿಸಲಾದ ಜಾನಪದ ಯುವ ಬಳಗ ಮತ್ತು ಜಾನಪದ ಸಂಭ್ರಮ ಕಾರ್ಯಕ್ರಮವನ್ನು ಜಾನಪದ ವಾದ್ಯ ಪರಿಕರಗಳನ್ನು ನುಡಿಸುವ ಮೂಲಕ ಕೊಡವ ಸಂಸ್ಕೃತಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ.ಪಾರ್ವತಿ ಅಪ್ಪಯ್ಯ, ಅರೆಭಾಷೆ ಸಂಸ್ಕೃತಿ ಸಾಹಿತ್ಯ ಅಕಾಡೆಮಿ ಅಕಾಡೆಮಿ ಅಧ್ಯಕ್ಷ ಲಕ್ಷ್ಮಿನಾರಾಯಣ ಕಜೆಗದ್ದೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ.ಕೇಶವಕಾಮತ್, ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಜಿ.ಅನಂತಶಯನ, ಮಡಿಕೇರಿ ನಗರಸಭಾಧ್ಯಕ್ಷೆ ಅನಿತಾಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್, ತಾಲೂಕು ಅಧ್ಯಕ್ಷ ಅನಿಲ್ ಎಚ್.ಟಿ. ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಡಾ.ಪಾರ್ವತಿ ಅಪ್ಪಯ್ಯ, ಜಾನಪದ ಕಲೆ, ಸಾಹಿತ್ಯವನ್ನು ಉಳಿಸುವ ನಿಟ್ಟಿನಲ್ಲಿ ಜಾನಪದ ಯುವ ಬಳಗ ರಚನೆಯಾಗಿರುವುದು ಶ್ಲಾಘನೀಯ ಎಂದರು. ಕೊಡವ ಭಾಷೆಯ ಶ್ರೇಷ್ಠ ಕೃತಿ ‘ಪಟ್ಟೋಳೆ ಪಳಮೆ’ ಅತ್ಯುತ್ತಮ ಗ್ರಂಥವಾಗಿದ್ದು, ಇದರಲ್ಲಿನ ಪ್ರತಿಯೊಂದು ಹಾಡುಗಳು ಕೂಡ ಕೊಡವರ ಸಂಸ್ಕೃತಿ, ಜೀವನ ಶೈಲಿಯನ್ನು ತಿಳಿಸಿಕೊಡುತ್ತದೆ. ಕೊಡವ ಸಾಹಿತ್ಯ ಅಕಾಡೆಮಿಯಿಂದ ಹಲವು ಸಂಶೋಧನೆಗಳು ನಡೆದಿದ್ದು, ಜಾನಪದ ಕ್ಷೇತ್ರದ

(ಮೊದಲ ಪುಟದಿಂದ) ಇತಿಹಾಸಗಳನ್ನೂ ಕೆದಕಿ ತೆಗೆಯಲಾಗಿದೆ. ಯುವಪೀಳಿಗೆಯಲ್ಲಿ ಸಂಸ್ಕೃತಿಯ ಬಗ್ಗೆ ಆಸಕ್ತಿ ಮೂಡಿದರೆ ಮಾತ್ರ ಭವಿಷ್ಯದಲ್ಲಿ ಜನಾಂಗ ಉಳಿಯಲು ಸಾಧ್ಯ ಎಂದರು.

ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷಿö್ಮನಾರಾಯಣ ಕಜೆಗದ್ದೆ ಮಾತನಾಡಿ, ಶಾಸ್ತಿçÃಯ ಸಂಗೀತ, ನೃತ್ಯ ಕಲಿಯಲು ಸುದೀರ್ಘ ಅವಧಿ ಬೇಕಾಗುತ್ತದೆ. ಆದರೆ ಜಾನಪದ ನೃತ್ಯ, ಸಂಗೀತ ಕಲಿಯಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಜಾನಪದ ಪ್ರತಿಯೋರ್ವರ ಮನಸ್ಸಿನಲ್ಲಿ ಹಾಸುಹೊಕ್ಕಾಗಿರುವುದು ಇದಕ್ಕೆ ಕಾರಣ ಎಂದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಕಾರ್ಯಕ್ರಮಗಳು ಜಾನಪದ ಯುವ ಬಳಗದಿಂದ ಆಯೋಜನೆಗೊಳ್ಳಲಿ ಎಂದು ಲಕ್ಷ್ಮಿ ನಾರಾಯಣ ಕಜೆಗದ್ದೆ ಆಶಿಸಿದರು.

ಮಡಿಕೇರಿ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಜಾನಪದ ಕಲೆ ಉಳಿಯಲು ಮಹಿಳೆಯರೇ ಪ್ರಮುಖ ಕಾರಣಕರ್ತರು. ಹಿಂದಿನ ಕಾಲದಿಂದಲೂ ಹಳ್ಳಿಗಳಲ್ಲಿ ಮಹಿಳೆಯರು ಜಾನಪದ ಹಾಡು ಹೇಳುತ್ತಾ ಕೆಲಸ ನಿರ್ವಹಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಆದಿವಾಸಿಗಳೂ ಸೇರಿದಂತೆ ಹೆಚ್ಚಿನವರು ಪಾಶ್ಚಾತ್ಯ ಶೈಲಿಗೆ ಮಾರು ಹೋಗಿದ್ದು, ಮೂಲ ಸಂಸ್ಕೃತಿಯನ್ನೆ ಮರೆಯುತ್ತಿದ್ದಾರೆ. ಜಾನಪದ ಕಲೆ ಬೆಳೆದಾಗ ಮಾತ್ರ ಯಾವುದೇ ಸಂಸ್ಕೃತಿ ಉಳಿಯಲು ಸಾಧ್ಯ. ಮಕ್ಕಳಿಗೆ ಚಿಕ್ಕಂದಿನಿAದಲೇ ಭಾಷೆಯ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು ಎಂದರು.

ಮಡಿಕೇರಿ ನಗರಸಭೆಯ ಉಪಾಧ್ಯಕ್ಷೆ ಸವಿತಾ ರಾಕೇಶ್ ಮಾತನಾಡಿ, ಜಾನಪದದಲ್ಲಿ ಆಸಕ್ತಿ ಹೊಂದಿರುವ ಜಿಲ್ಲೆಯ ಯುವ ಕಲಾವಿದರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಯುವ ಜಾನಪದ ಬಳಗ ಎಂಬ ಪರಿಕಲ್ಪನೆಯೊಂದಿಗೆ ಹೊಸದ್ದೊಂದು ಕಲಾವಿದರ ಬಳಗ ರಚನೆಯಾಗಿರುವುದು ಶ್ಲಾಘನೀಯ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ. ಕೇಶವಕಾಮತ್ ಮಾತನಾಡಿ, ಜೀವನದ ಅವಿಭಾಜ್ಯ ಅಂಗವಾಗಿರುವ ಜಾನಪದವನ್ನು ಯುವಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಯುವ ಕಲಾವಿದರ ಬಳಗ ಅಸ್ತಿತ್ವಕ್ಕೆ ಬಂದಿರುವುದು ಹೆಮ್ಮೆ ತಂದಿದೆ. ಕನ್ನಡ ಸಾಹಿತ್ಯ ಪರಿಷತ್ ಕೂಡ ಭವಿಷ್ಯದಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಈ ಯುವ ಬಳಗಕ್ಕೆ ಅವಕಾಶ ನೀಡಲಿದೆ ಎಂದು ಭರವಸೆ ನೀಡಿದರು.

ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ ಮಾತನಾಡಿ, ಪ್ರತೀಯೋರ್ವರ ಹೃದಯದಲ್ಲಿಯೂ ಜಾನಪದ ಇದೆ. ನಾಡಿನ ಗ್ರಾಮೀಣ ಜನತೆಯ ಮನೆಮನದಲ್ಲಿಯೂ ಜಾನಪದ ಹಾಸುಹೊಕ್ಕಾಗಿದೆ ಎಂದರಲ್ಲದೇ ಜಿಲ್ಲಾ ಜಾನಪದ ಪರಿಷತ್‌ನಿಂದ ಜಿಲ್ಲೆಯಲ್ಲಿನ ಕಲಾವಿದರನ್ನು ಗುರುತಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿರುವ ಜಾನಪದ ಕಲಾವಿದರು ಮೂಲ ಸಂಸ್ಕೃತಿಯನ್ನೇ ಮರೆಯುತ್ತಿರುವುದು ವಿಷಾದನೀಯ ಎಂದರು. ಜಾನಪದ ಕ್ಷೇತ್ರದಲ್ಲಿ ಕ್ರಾಂತಿಯಾಗಲೇಬೇಕಾದ ಅನಿವಾರ್ಯತೆ ಇದೆ ಎಂದೂ ಅನಂತಶಯನ ಅಭಿಪ್ರಾಯಪಟ್ಟರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ, ಯುವಕರಲ್ಲಿ ಪ್ರತಿಭೆ ಅನಾವರಣಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಮಡಿಕೇರಿ ತಾಲೂಕು ಜಾನಪದ ಪರಿಷತ್‌ಗೆ ಯುವ ಬಳಗವನ್ನು ಸೇರ್ಪಡೆ ಮಾಡಲಾಗಿದೆ. ರಾಜ್ಯದಲ್ಲೇ ಮೊದಲ ಬಾರಿಗೆ ಜಾನಪದ ಕಲಾವಿದರಿಗಾಗಿನ ಯುವ ಬಳಗ ರಚನೆಯಾಗಿದೆ. ಯುವ ಜನತೆಗೆ ಉತ್ತಮ ವೇದಿಕೆ ಕಲ್ಪಿಸಿಕೊಟ್ಟಿದ್ದು, ಈ ಮೂಲಕ ಕೊಡಗಿನ ಜಾನಪದ ಯುವ ಕಲಾವಿದರು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಹಕಾರಿ ಯಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಾನಪದ ಯುವ ಬಳಗದ ಸಂಚಾಲಕಿ ಗಾಯತ್ರಿ ಚೆರಿಯಮನೆ, ಸಹಸಂಚಾಲಕಿ ಶ್ರೀರಕ್ಷಾ, ಕಾರ್ಯಕ್ರಮ ಸಂಚಾಲಕಿ ಕೆ.ಜಯಲಕ್ಷ್ಮಿ, ವೀಣಾ ಹೊಳ್ಳ ಸೇರಿದಂತೆ ತಾಲೂಕು ಜಾನಪದ ಪರಿಷತ್ ನಿರ್ದೇಶಕರು ಹಾಜರಿದ್ದರು. ತಾಲೂಕು ನಿರ್ದೇಶಕಿಯರಾದ ಅನಿತಾ ಚೋಕೀರ, ಪ್ರತಿಮಾ ರೈ ನಿರೂಪಿಸಿದರು. ಜಿಲ್ಲೆಯಾದ್ಯಂತಲಿನ ಜಾನಪದ ಪರಿಷತ್‌ನ ವಿವಿಧ ಘಟಕಗಳ ಪ್ರಮುಖರು ಹಾಜರಿದ್ದರು. ಜಾನಪದ ಯುವ ಬಳಗದ ಕಲಾವಿದರಿಂದ ಮತ್ತು ಮಡಿಕೇರಿ ತಾಲೂಕು ಜಾನಪದ ಪರಿಷತ್‌ನ ಸದಸ್ಯೆಯರಿಂದ ಗೀತಗಾಯನ ಜರುಗಿತು.

ಹಿರಿಯ ಜಾನಪದ ಲೇಖಕಿ ಅಂಬೆಕಲ್ ಸುಶೀಲಾ ಕುಶಾಲಪ್ಪ ಅವರಿಂದ ಒಗಟುಗಳ ಸ್ಪರ್ಧೆಯೂ ನಡೆಯಿತು.

ಸನ್ಮಾನದ ಗೌರವ

ಮಡಿಕೇರಿ ತಾಲೂಕು ಜಾನಪದ ಪರಿಷತ್ ವತಿಯಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷ ಎಂ.ಪಿ.ಕೇಶವಕಾಮತ್, ಜಿಲ್ಲಾ ಕಸಾಪ ಖಚಾಂಜಿ ಮಂಡುವAಡ ಜೋಯಪ್ಪ, ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷರಾಗಿ ಆಯ್ಕೆಯಾದ ಅಂಬೆಕಲ್ ನವೀನ್ ಕುಶಾಲಪ್ಪ, ಮಡಿಕೇರಿ ನಗರಸಭೆಯ ಉಪಾಧ್ಯಕ್ಷೆ ಸವಿತಾ ರಾಕೇಶ್, ಮಡಿಕೇರಿ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎಂ.ಧನAಜಯ್ ಹಾಗೂ ಮಡಿಕೇರಿ ನಗರಸಭೆಯ ಅಧ್ಯಕ್ಷೆ ಅನಿತಾಪೂವಯ್ಯ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ, ಪ್ರಧಾನ ಕಾರ್ಯದರ್ಶಿ ಮುನೀರ್ ಅಹ್ಮದ್, ಉಪಾಧ್ಯಕ್ಷ ಅಂಬೆಕಲ್ ಕುಶಾಲಪ್ಪ, ತಾಲೂಕು ಅಧ್ಯಕ್ಷ ಅನಿಲ್ ಎಚ್.ಟಿ. ಪ್ರಧಾನ ಕಾರ್ಯದರ್ಶಿ ಎಂ.ಸಿ.ರವಿಕುಮಾರ್, ನಿರ್ದೇಶಕ ಪಿ.ವಿ.ರಾಜೇಶ್ ಹಾಜರಿದ್ದರು.