ಚೆಟ್ಟಳ್ಳಿ ಫೆ. ೨೧ : ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಹಾಗೂ ಜಿಲ್ಲೆಯ ಪ್ರತಿಷ್ಠಿತ ಫುಟ್ಬಾಲ್ ಕ್ಲಬ್‌ಗಳಲ್ಲಿ ಒಂದಾದ ಮಿಲನ್ಸ್ ಫುಟ್ಬಾಲ್ ಇವರ ಆಶ್ರಯದಲ್ಲಿ ಅಮ್ಮತ್ತಿಯ ಪ್ರೌಢ ಶಾಲಾ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಲೀಗ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಸಹಾರ ಯುನೈಟೆಡ್ ಒಂಟಿಯAಗಡಿ ತಂಡ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ. ನೇತಾಜಿ ಯುವಕ ಸಂಘ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಫೈನಲ್ ಪಂದ್ಯವು ಸಹರಾ ಯುನೈಟೆಡ್ ಒಂಟಿಯAಗಡಿ ಹಾಗೂ ನೇತಾಜಿ ಎಫ್.ಸಿ ನಡುವೆ ನಡೆಯಿತು. ಸಹರಾ ಯುನೈಟೆಡ್ ತಂಡವು ೪-೧ ಗೋಲುಗಳ ಅಂತರದಿAದ ಗೆಲುವು ಸಾಧಿಸಿ ಪ್ರಶಸ್ತಿಗೆ ಭಾಜನವಾಯಿತು.

ಮೊದಲ ಸೆಮಿಫೈನಲ್ ಪಂದ್ಯವು ಶೈನಿಂಗ್ ಬರ್ಡ್ಸ್ ಪಾಲಿಬೆಟ್ಟ ಹಾಗೂ ನೇತಾಜಿ ಎಫ್.ಸಿ ನಡುವೆ ನಡೆಯಿತು. ಎರಡು ತಂಡಗಳ ನಡುವೆ ಉತ್ತಮ ಹೋರಾಟ ಏರ್ಪಟ್ಟು,ಸಮಬಲ ಸಾಧಿಸಿತು.ಅಂತಿಮವಾಗಿ ಪೆನಾಲ್ಟಿ ಶೂಟೌಟ್‌ನಲ್ಲಿ ಬಲಿಷ್ಠ ಶೈನಿಂಗ್ ಬರ್ಡ್ಸ್ ತಂಡವನ್ನು ನೇತಾಜಿ ಎಫ್.ಸಿ ೫-೩ ಗೋಲುಗಳ ಅಂತರದಿAದ ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟಿತು.

ದ್ವಿತೀಯ ಸೆಮಿಫೈನಲ್ ಪಂದ್ಯವು ಸಹರಾ ಯುನೈಟೆಡ್ ಒಂಟಿಯAಗಡಿ ಹಾಗೂ ಅಮಿಟಿ ಯುನೈಟೆಡ್ ಗದ್ದೆಹಳ್ಳ ತಂಡಗಳ ನಡುವೆ ನಡೆಯಿತು. ಸಹರಾ ಯುನೈಟೆಡ್ ತಂಡವು ೩-೧. ಗೋಲುಗಳಿಂದ ಅಮಿಟಿ ತಂಡವನ್ನು ಮಣಿಸಿ ಫೈನಲ್‌ಗೆ ಅರ್ಹತೆ ಪಡೆಯಿತು.

ಜಿಲ್ಲಾ ಮಟ್ಟದ ಲೀಗ್ ಪಂದ್ಯಾವಳಿಯ ಅತ್ಯುತ್ತಮ ಆಟಗಾರ ಪ್ರಶಸ್ತಿಯನ್ನು ನೇತಾಜಿ ತಂಡದ ಯುವ ಆಟಗಾರ ವಿಜಯ್, ಅತ್ಯುತ್ತಮ ಗೋಲ್ ಕೀಪರ್ ಅಮಿಟಿ ತಂಡದ ಫಯಾಜ್ ಹಾಗೂ ಅತೀ ಹೆಚ್ಚು ಗೋಲು ಬಾರಿಸಿದ ಆಟಗಾರ ಪ್ರಶಸ್ತಿಯನ್ನು ಸಹಾರಾ ಯುನೈಟೆಡ್ ತಂಡದ ಮುನ್ನಡೆ ಆಟಗಾರ ಸುನಿಲ್ ಪಡೆದುಕೊಂಡರು. ಕಳೆದ ವರ್ಷ ಕೋವಿಡ್ ಲಾಕ್ ಡೌನ್ ಕಾರಣದಿಂದ ಜಿಲ್ಲಾ ಮಟ್ಟದ ಲೀಗ್ ಫುಟ್ಬಾಲ್ ಪಂದ್ಯಾವಳಿಯನ್ನು ಮುಂದೂಡಲಾಗಿತ್ತು.

ಬಾಕಿ ಉಳಿದಿದ್ದ ಕ್ವಾರ್ಟರ್ ಫೈನಲ್ ಪಂದ್ಯಗಳು ಅಮ್ಮತ್ತಿಯ ಪ್ರೌಢ ಶಾಲಾ ಮೈದಾನದಲ್ಲಿ ಎರಡು ದಿನಗಳ ನಡೆಯಿತು. ಜಿಲ್ಲಾ ಮಟ್ಟದ ಲೀಗ್ ಪಂದ್ಯಾವಳಿಯಲ್ಲಿ ಒಟ್ಟು ೧೬ ತಂಡಗಳು ಭಾಗವಹಿಸಿದ್ದವು. ಪಂದ್ಯಾವಳಿಯ ತೀರ್ಪುಗಾರರಾಗಿ ಇಬ್ರಾಹಿಂ ಎಂ.,ಧೀರಜ್ ರೈ,ಇಸ್ಮಾಯಿಲ್ ಕಂಡಕರೆ,ಹಾಗೂ ದರ್ಶನ್ ಕಾರ್ಯನಿರ್ವಹಿಸಿದರು.