ಮಡಿಕೇರಿ, ಫೆ. ೨೧: ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ (ಐಸಿಎಆರ್-ಐಐಎಚ್‌ಆರ್), ಚೆಟ್ಟಳ್ಳಿಯಲ್ಲಿ ರೈತರಿಗೆ ಪೌಷ್ಠಿಕಾಂಶ ಕೈ ತೋಟದ ಕ್ಷೇತ್ರ ಪ್ರಾತ್ಯಕ್ಷತೆಯನ್ನು ಆಯೋಜಿಸಲಾಗಿತ್ತು.

ಪೌಷ್ಠಿಕಾಂಶ ಕೈ ತೋಟದ ಕ್ಷೇತ್ರ ಪ್ರಾತ್ಯಕ್ಷತೆಯಲ್ಲಿ ಐಐಎಚ್‌ಆರ್ ಅಭಿವೃದ್ಧಿಪಡಿಸಿದ ೩೦ಕ್ಕೂ ಹೆಚ್ಚು ತರಕಾರಿ ತಳಿಗಳನ್ನು ಪ್ರದರ್ಶಿಸಲಾಗಿತ್ತು. ಈ ಪ್ರದರ್ಶನದಲ್ಲಿ ೨೫ಕ್ಕೂ ಹೆಚ್ಚು ಹಣ್ಣಿನ ತಳಿಗಳನ್ನು ಸಹ ಪ್ರದರ್ಶಿಸಲಾಯಿತು. ಈ ಪ್ರದರ್ಶನವನ್ನು ಮುಖ್ಯ ಅತಿಥಿಗಳಾದ ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ಬೋಸ್ ಮಂದಣ್ಣ, ಡಾ. ಬಿ.ಎನ್.ಎಸ್. ಮೂರ್ತಿ (ನಿರ್ದೇಶಕರು ಐಸಿಎಆರ್- ಐಐಎಚ್‌ಆರ್), ಡಾ. ಸಾಜು ಜಾರ್ಜ್ (ಮುಖ್ಯಸ್ಥರು ಸಿಎಚ್‌ಇಎಸ್, ಚೆಟ್ಟಳ್ಳಿ) ಉದ್ಘಾಟಿಸಿದರು. ಡಾ. ಸಾಜು ಜಾರ್ಜ್ ಸ್ವಾಗತಿಸಿದರು. ಕೊಡಗು ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಡಾ. ಶಬಾನಾ ಎಂ.ಶೇಖ್ ರೈತರಿಗೆ ಲಭ್ಯವಿರುವ ವಿವಿಧ ಯೋಜನೆಗಳ ಕುರಿತು ವಿವರಿಸಿದರು. ಡಾ. ಕೆ. ಮಾಧವಿ ರೆಡ್ಡಿ (ಮುಖ್ಯಸ್ಥರು ತರಕಾರಿ ಬೆಳೆಗಳ ವಿಭಾಗ, ಐಸಿಎಆರ್- ಐಐಎಚ್‌ಆರ್) ಕೈ ತೋಟದ ಮಹತ್ವದ ಬಗ್ಗೆ ತಿಳಿಸಿದರು. ಡಾ. ಬಿ.ಎನ್.ಎಸ್. ಮೂರ್ತಿ ಸಾವಯವ ಕೃಷಿಯ ಲಾಭದ ಬಗ್ಗೆ ಅರಿವು ಮೂಡಿಸಿದರು. ಡಾ. ಎಂ. ಪಿಚ್ಚೆöÊ ಮುತ್ತು - ಪ್ರಧಾನ ವಿಜ್ಞಾನಿ (ತರಕಾರಿ ಬೆಳೆಗಳ ವಿಭಾಗ), ಡಾ. ಎನ್.ಆರ್. ಪ್ರಸನ್ನ ಕುಮಾರ್, ವಿಜ್ಞಾನಿ (ಕೃಷಿ ಕೀಟಶಾಸ್ತç) ಮತ್ತು ಡಾ. ಜಿ.ಎಂ. ಸಂದೀಪ್ ಕುಮಾರ್, ವಿಜ್ಞಾನಿ (ಸಸ್ಯ ರೋಗಶಾಸ್ತç) ಹೊಸ ತಳಿಗಳು ಮತ್ತು ತರಕಾರಿಯಲ್ಲಿ ಬರುವ ಮುಖ್ಯ ರೋಗ ಮತ್ತು ಕೀಟಗಳ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.

ಡಾ. ರಾಜೇಂದ್ರನ್ ಎಸ್., ವಿಜ್ಞಾನಿ (ಮಣ್ಣು ವಿಜ್ಞಾನ ವಿಭಾಗ, ಸಿಎಚ್‌ಇಎಸ್, ಚೆಟ್ಟಳ್ಳಿ) ತರಕಾರಿ ಕೈ ತೋಟದ ಬಗ್ಗೆ ಮಾಹಿತಿ ನೀಡಿದರು. ಮುರಳೀಧರ, ಬಿ.ಎಮ್. ವಿಜ್ಞಾನಿ (ಹಣ್ಣು ವಿಜ್ಞಾನ, ಸಿಎಚ್‌ಇಎಸ್, ಚೆಟ್ಟಳ್ಳಿ) ಹಣ್ಣು ಕೈ ತೋಟದ ಮಹತ್ವವನ್ನು ತಿಳಿಸಿದರು. ಕ್ಷೇತ್ರ ಭೇಟಿ ಮತ್ತು ವಿವಿಧ ಬೆಳೆ ಉತ್ಪಾದನಾ ಅಂಶಗಳನ್ನು ಚರ್ಚಿಸಲು ರೈತ ವಿಜ್ಞಾನಿಗಳ ಸಂವಾದ ಅಧಿವೇಶನವನ್ನು ನಡೆಸಲಾಯಿತು. ಕಾರ್ಯಕ್ರಮದಲಿ ರೈತರ ಅನುಕೂಲಕ್ಕಾಗಿ ಹಣ್ಣಿನ ಗಿಡಗಳನ್ನು ಮತ್ತು ತರಕಾರಿ ಬೀಜಗಳನ್ನು ಮಾರಾಟ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆಯ ವಿವಿಧ ಭಾಗಗಳ ೧೫೦ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.