ಚೆಯ್ಯಂಡಾಣೆ, ಫೆ. ೨೦: ಎಸ್.ಎಸ್.ಎಫ್. ಸಾದಾತ್ ನಗರ ಎಮ್ಮೆಮಾಡು ಶಾಖೆಯ ವಾರ್ಷಿಕ ಮಹಾಸಭೆ ಶಾಖಾಧ್ಯಕ್ಷ ಅಬೂತ್ವಾಹಿರ್ ಅಹ್ಸನಿ ಅಧ್ಯಕ್ಷತೆಯಲ್ಲಿ ನಡೆಯಿತು.
ಸೈಯ್ಯಿದ್ ಸೈಫುದ್ದೀನ್ ಸಖಾಫಿ ಪ್ರಾರ್ಥನೆ ನೆರವೇರಿಸಿದರು. ಸಂಘಟನೆಯ ಪ್ರಾಮುಖ್ಯತೆಯ ಕುರಿತು ಸೈಯ್ಯಿದ್ ಸಮೀಹ್ ಅನ್ವಾರಿ ಅಲ್ ಅಹ್ಸನಿ ಮಾಹಿತಿ ನೀಡಿದರು. ವೀಕ್ಷಕರಾಗಿ ಸೆಕ್ಟರ್ ನಾಯಕರು ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಹಲವಾರು ಸಾದಾತುಗಳು, ವಿದ್ವಾಂಸರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು. ನೂತನ ಸಮಿತಿಯ ಆಯ್ಕೆ ಸೆಕ್ಟರ್ ನಾಯಕರ ನೇತೃತ್ವದಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ಸೈಯ್ಯದ್ ಮುಹಮ್ಮದ್ ಝಕರಿಯ ಅಲ್ ಹೈದರೂಸಿ, ಪ್ರಧಾನ ಕಾರ್ಯದರ್ಶಿಯಾಗಿ ನಿಜಾಮುದ್ದೀನ್ ಬೆಲಿಯತ್, ಕೋಶಾಧಿಕಾರಿಯಾಗಿ ನಾಸಿರ್ ನಾಚು ಆಯ್ಕೆಯಾದರು. ಸೈಯ್ಯಿದ್ ಸೈಫುದ್ದೀನ್ ಸಖಾಫಿ, ಸೈಯ್ಯಿದ್ ಸಮೀಹ್ ಅನ್ವಾರಿ ಅಲ್ ಅಹ್ಸನಿ, ಸೈಯ್ಯಿದ್ ನುಹ್ಮಾನ್ ಅಲ್ ಹೈದರೂಸಿ, ಸೈಯ್ಯಿದ್ ಮುಹಮ್ಮದ್ ಮುಸ್ತಫಾ ಅಲ್ ಹೈದರೂಸಿ, ಅಬೂತ್ವಾಹಿರ್ ಅನ್ವಾರಿ ಅಲ್ ಅಹ್ಸನಿ, ನೌಷಾದ್ ಅಚ್ಚು, ಸಲೀಂ, ಆಶಿಕ್ ಇವರನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು. ಮಾಜಿ ಕಾರ್ಯದರ್ಶಿ ಮುಹಮ್ಮದ್ ಶಾಫಿ ಸ್ವಾಗತಿಸಿ, ನೂತನ ಕಾರ್ಯದರ್ಶಿ ನಿಜಾಮುದ್ದಿನ್ ವಂದಿಸಿದರು.