ನಾಪೋಕ್ಲು, ಫೆ. ೨೦: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಭಾಗಮಂಡಲ ವಲಯದ ನಾಪೋಕ್ಲು ಕಾರ್ಯಕ್ಷೇತ್ರದಲ್ಲಿ ಸಾಮಾನ್ಯ ಸೇವಾ ಕೇಂದ್ರವನ್ನು ಕೆಡಿಪಿ ಸದಸ್ಯರಾದ ಶಿವಚಾಳಿಯಂಡ ಅಂಬಿ ಕಾರ್ಯಪ್ಪ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಧರ್ಮಸ್ಥಳ ಸಂಘವು ಉತ್ತಮ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಗ್ರಾಮೀಣ ಪ್ರದೇಶದ ಜನರಿಗೆ ಎಲ್ಲಾ ವಿಧದಲ್ಲೂ ಅನುಕೂಲವನ್ನು ಮಾಡಿಕೊಟ್ಟಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಹಿಳಾ ಸಮಾಜದ ಅಧ್ಯಕ್ಷೆ ಕುಂಚೇಟಿರ ರೇಷ್ಮಾ ಉತ್ತಪ್ಪ ಧರ್ಮಸ್ಥಳ ಸಂಘದ ಕಾರ್ಯವನ್ನು ಶ್ಲಾಘಿಸಿದರು. ಭಾಗಮಂಡಲ ವಲಯ ಮೇಲ್ವಿಚಾರಕ ಸಂತೋಷ್ ಮಾತನಾಡಿ, ಧರ್ಮಸ್ಥಳ ಸಂಘದಿAದ ರಾಜ್ಯದಲ್ಲಿ ಸುಮಾರು ೧೦ ಸಾವಿರ ಸೇವಾ ಕೆಂದ್ರವನ್ನು ಸ್ಥಾಪಿಸಲಾಗಿದೆ ಇದರಿಂದ ಸರಕಾರದ ಕೆಲಸ ಕಾರ್ಯಗಳ ಸಂಬAಧ ಇದನ್ನು ಬಳಸಿಕೊಳ್ಳಬಹುದಾಗಿದೆ ಎಂದರು. ಈ ಸಂದರ್ಭ ಮೂರ್ನಾಡು ಮೇಲ್ವಿಚಾರಕರಾದ ಅನುಷಾ, ನೋಡೆಲ್ ಅಧಿಕಾರಿ ಭರತ್, ಸೇವಾ ಪ್ರತಿನಿಧಿಗಳಾದ ದಿವ್ಯಾ, ಸುವಿದ, ಉಮಲಕ್ಷಿö್ಮ, ನಿಶಾ, ಉಷ, ರಮ್ಯಾ, ಚಂದ್ರಕಲಾ, ಮತ್ತಿತರರು ಇದ್ದರು.