ಪೊನ್ನAಪೇಟೆ, ಫೆ. ೨೦: ಮಾಯಮುಡಿಯ ಪುನೀತ್ ರಾಜಕುಮಾರ್ ಅಭಿಮಾನಿ ಬಳಗದ ವತಿಯಿಂದ ಮುಂದಿನ ಮಾರ್ಚ್ ತಿಂಗಳ ೧೭ ರಿಂದ ೨೦ರ ವರೆಗೆ ಮೊದಲ ವರ್ಷದ ರಾಜ್ಯಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಪುನೀತ್ ರಾಜಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷ ಎ.ಜೆ. ಶಿವಮೂರ್ತಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರರಂಗದ ಮೇರುನಟ ದಿ. ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥವಾಗಿ ೪ ದಿನಗಳ ಕಾಲ ಆಯೋಜಿಸಲಾಗಿರುವ ಈ ಕ್ರಿಕೆಟ್ ಪಂದ್ಯಾವಳಿಯು ಮಾಯಮುಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಜರುಗಲಿದೆ.
ಆಸಕ್ತ ತಂಡಗಳು ಈ ಪಂದ್ಯಾವಳಿಯಲ್ಲಿ ಮುಕ್ತವಾಗಿ ಭಾಗವಹಿಸಬಹುದು. ವಿನ್ನರ್ಸ್ ತಂಡಕ್ಕೆ ರೂ. ೫೦ ಸಾವಿರ ಪ್ರಥಮ ಬಹುಮಾನ ಸೇರಿದಂತೆ ಆಕರ್ಷಕ ಟ್ರೋಫಿ ಮತ್ತು ರನ್ನರ್ಸ್ ತಂಡಕ್ಕೆ ರೂ. ೩೦ ಸಾವಿರ ನಗದು ಬಹುಮಾನ ಸೇರಿದಂತೆ ಆಕರ್ಷಕ ಟ್ರೋಫಿಯನ್ನು ನೀಡಲಾಗುವುದು. ಅಲ್ಲದೆ ಸಮಿಫೈನಲ್‌ಗಳಲ್ಲಿ ಪರಾಭವಗೊಳ್ಳುವ ಎರಡೂ ತಂಡಗಳಿಗೆ ತಲಾ ರೂ. ೧೦ ಸಾವಿರ ನಗದು ಬಹುಮಾನ ಮತ್ತು ಟ್ರೋಫಿಯನ್ನು ವಿತರಿಸಲಾಗುವುದು ಎಂದು ವಿವರಿಸಿದರು.
ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಆಸಕ್ತ ತಂಡಗಳಿಗೆ ರೂ. ೫೦೦೦ ಮೊತ್ತವನ್ನು ಪ್ರವೇಶ ಶುಲ್ಕವನ್ನಾಗಿ ನಿಗದಿಪಡಿಸಲಾಗಿದೆ. ಈ ಪೈಕಿ ರೂ. ೨೦೦೦ ಹಣವನ್ನು ಮುಂಗಡವಾಗಿ ಪಾವತಿಸಿ ತಮ್ಮ ತಂಡಗಳ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಉಳಿದ ಹಣವನ್ನು ಪಂದ್ಯಾವಳಿಗೆ ಆಗಮಿಸುವ ಸಂದರ್ಭದಲ್ಲಿ ಪಾವತಿಸಬೇಕು ಎಂದು ವಿವರಿಸಿರುವ ಶಿವಮೂರ್ತಿ ಅವರು, ಈ ಕುರಿತು ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆಗಳಾದ ೮೧೯೭೫೨೬೭೬೪, ೭೬೨೪೯೩೯೩೦೯ ಅಥವಾ ೯೯೦೨೨೫೪೭೧೩ ಅನ್ನು ಸಂಪರ್ಕಿಸುವAತೆ ತಿಳಿಸಿದ್ದಾರೆ.
ಗೋಷ್ಠಿಯಲ್ಲಿ ಬಳಗದ ಉಪಾಧ್ಯಕ್ಷ ಎ.ಎಂ. ಮಮ್ಮದಾಲಿ, ಪದಾಧಿಕಾರಿಗಳಾದ ಸಿ. ಎಸ್. ಅನೀಶ್, ಎಸ್.ಎಂ. ಮಲ್ಲಿಕಾರ್ಜುನ, ಎನ್. ಆರ್. ಪ್ರವೀಣ, ಕೆ.ಎಸ್. ಅನೀಶ್, ಟಿ.ವೈ. ಉಮ್ಮರ್ ಮತ್ತು ಕೆ.ಪಿ. ಪ್ರವೀಣ್ ಉಪಸ್ಥಿತರಿದ್ದರು.