ಮಡಿಕೇರಿ, ಫೆ. ೧೯: ಸಿದ್ದಾಪುರ ಸಮೀಪದ ದಿಡ್ಡಳ್ಳಿ ಬಳಿಯ ತಟ್ಟಳ್ಳಿಯ ಅರಣ್ಯದೊಳಗೆ ಹುಲಿಯನ್ನು ಬೇಟೆಯಾಡಿ ಚರ್ಮ, ಉಗುರು, ಹಿಂಗಾಲು ಹಾಗೂ ಮೀಸೆಗಳನ್ನು ಮಾರಾಟ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬAಧಿಸಿ ದಂತೆ ಇದುವರೆಗೂ ಒಟ್ಟು ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ತಲೆಮರೆಸಿ ಕೊಂಡಿರುವ ಉಳಿದ ಆರೋಪಿಗಳ ಪತ್ತೆಗೆ ಅರಣ್ಯ ಇಲಾಖೆ ಬಲೆ ಬೀಸಿದೆ. ಅದಲ್ಲದೆ ಮಣ್ಣಿನಡಿ ಹುಲಿಯ ತಲೆ ಬುರುಡೆ, ಮೂಳೆಗಳು ಪತ್ತೆಯಾಗಿವೆ. ಇದರಿಂದಾಗಿ ಹುಲಿಯ ಹತ್ಯೆಗೈದಿರುವುದು ಖಾತ್ರಿಯಾಗಿದೆ.

ತಾ. ೧೪ ರಂದು ಮಡಿಕೇರಿಯ ಪೊಲೀಸ್ ಅರಣ್ಯ ಸಂಚಾರಿ ದಳ ಅಕ್ರಮವಾಗಿ ಹುಲಿಯ ಅಂಗಾAಗಗಳನ್ನು ಮಾರಾಟ ಮಾಡಲು ಯತ್ನಿಸಿದ್ದ ರಾಜೇಶ ಜಿ.ಜೆ, ಹರೀಶ ಜೆ.ಜಿ, ವಿನು ಜೆ.ಕೆ, ರಮೇಶ ಜೆ.ಬಿ, ಅವರುಗಳನ್ನು ಬಂಧಿಸಲಾಗಿತ್ತು. ಪ್ರಕರಣಕ್ಕೆ ಸಂಬAಧಿಸಿದAತೆ, ಹುಲಿಯ ಚರ್ಮ, ಉಗುರುಗಳು, ಹಿಂಗಾಲುಗಳು ಹಾಗೂ ಮೀಸೆಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿತ್ತು. ನಂತರ ಆರೋಪಿ ಹರೀಶ ಮನೆಯ ಸುತ್ತಮುತ್ತ ಶೋಧನೆ ನಡೆಸಿದ ಸಂದರ್ಭ ಮಣ್ಣಿನಡಿಯಲ್ಲಿ ಅಡಗಿಸಿಟ್ಟಿದ್ದ ಹುಲಿಯ ತಲೆ ಬುರುಡೆ, ಹುಲಿ ಮೂಳೆಗಳು ಪತ್ತೆಯಾಗಿವೆ. ನಂತರ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳಾದ ಚೆನ್ನಯ್ಯನಕೋಟೆ ಗ್ರಾ.ಪಂ. ಸದಸ್ಯ ಅಪ್ಪಾಜಿ ಸೇರಿದಂತೆ ಮನೋಜ್ ಎಂಬಾತನನ್ನು ಬಂಧಿಸಿದಾಗ ಹುಲಿ ಹತ್ಯೆಗೆ ಬಳಸಲಾದ ಬಂದೂಕುಗಳು, ಕಾಡತೂಸುಗಳು, ಬಾಕಿ ಉಗುರುಗಳು, ಮೀಸೆ ಹಾಗೂ ಹುಲಿ ಗಣತಿ ಸಮಯದಲ್ಲಿ ಕಳುವಾಗಿದ್ದ ಕ್ಯಾಮರ, ಗಂಧದ ತುಂಡುಗಳು ಮತ್ತು ಹುಲಿ ಹತ್ಯೆಗೆ ಬಳಸಿದ ಉರುಳುಗಳು ಸೇರಿ ಹುಲಿ ಚರ್ಮ ಹಾಗೂ ಉಗುರುಗಳನ್ನು ಸಾಗಿಸಲು ಉಪಯೋಗಿಸಿದ್ದ ಸ್ಕೂಟರ್ ಹಾಗೂ ಕಾರನ್ನು ಮುಟ್ಟುಗೋಲು ಹಾಕಿ ಇದೀಗ ಆರು ಜನ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಹುಲಿ ಹತ್ಯೆ ಪ್ರಕರಣಕ್ಕೆ ಸಂಬAಧಿಸಿದAತೆ, ಇನ್ನು ಹಲವು ಆರೋಪಿಗಳು ತಲೆಮರೆಸಿ ಕೊಂಡಿರುವ ಬಗ್ಗೆ ಮಾಹಿತಿ ಇದ್ದು ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ಜಾಲವನ್ನು ಪತ್ತೆಹಚ್ಚುವಲ್ಲಿ ಕಾರ್ಯಾಚರಣೆ ಮುಂದುವರೆದಿದೆ ಎಂದು ಹುಣಸೂರು ವನ್ಯಜೀವಿ ಉಪ ವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹೇಶ್ ಕುಮಾರ್ ತಿಳಿಸಿದ್ದಾರೆ.

?ಸಂತೋಷ್