ತೆಲಂಗಾಣ-ಮಹಾರಾಷ್ಟç ಮುಖ್ಯಮಂತ್ರಿಗಳ ಭೇಟಿ

ಮುಂಬೈ, ಫೆ. ೨೦: ಬಿಜೆಪಿ ವಿರುದ್ಧ ರಾಷ್ಟçಮಟ್ಟದಲ್ಲಿ ಸಮಾನ ಮನಸ್ಕ ಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನದ ಭಾಗವಾಗಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ರಾವ್ ಮತ್ತು ಮಹಾರಾಷ್ಟçದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಭಾನುವಾರ ಮುಂಬೈನಲ್ಲಿ ಭೇಟಿಯಾಗಿದ್ದು, ಈ ಸಮಯದಲ್ಲಿ ಬದಲಾವಣೆಯ ಅಗತ್ಯ ಇದೆ ಎಂದು ಇಬ್ಬರೂ ಸಿಎಂಗಳು ಹೇಳಿದ್ದಾರೆ. ಮಹಾರಾಷ್ಟç ಸಿಎಂ ಅವರ ಅಧಿಕೃತ ನಿವಾಸ ‘ವರ್ಷ'ದಲ್ಲಿ ಎರಡು ಗಂಟೆಗಳ ಕಾಲ ನಡೆದ ಸಭೆಯ ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಉಭಯ ನಾಯಕರು, ಇದು ಒಳ್ಳೆಯ ಆರಂಭ ಮತ್ತು ಇತರ ಪ್ರಾದೇಶಿಕ ಮತ್ತು ರಾಷ್ಟಿçÃಯ ನಾಯಕರೊಂದಿಗೆ ಮಾತನಾಡಿದ ನಂತರ ಮತ್ತೆ ಭೇಟಿಯಾಗುವುದಾಗಿ ಕೆಸಿಆರ್ ಹೇಳಿದರು. ೭೫ ವರ್ಷಗಳ ಸ್ವಾತಂತ್ರ‍್ಯದ ನಂತರ ದೇಶ ಎದುರಿಸುತ್ತಿರುವ ರಾಜಕೀಯ ಪರಿಸ್ಥಿತಿ, ಅಭಿವೃದ್ಧಿ ಸಮಸ್ಯೆಗಳ ಕುರಿತು ನಾವು ಚರ್ಚಿಸಿದ್ದೇವೆ ಎಂದು ತೆಲಂಗಾಣ ಸಿಎಂ ಹೇಳಿದರು. ಈ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಮಹಾರಾಷ್ಟç ಸಿಎಂ ಉದ್ಧವ್ ಠಾಕ್ರೆ, ಇಂದಿನ “ಸೇಡಿನ ರಾಜಕಾರಣ” ಹಿಂದುತ್ವವೂ ಅಲ್ಲ, ಭಾರತೀಯ ಸಂಸ್ಕೃತಿಯೂ ಅಲ್ಲ, ಪರಿಸ್ಥಿತಿ ಬದಲಾಗಬೇಕಿದೆ ಎಂದು ಹೇಳಿದರು. ಇಂತಹ ವಾತಾವರಣ ಮುಂದುವರಿದರೆ ದೇಶದ ಭವಿಷ್ಯವೇನು ಎಂದ ಠಾಕ್ರೆ, ರಾವ್ ಜೊತೆಗಿನ ತಮ್ಮ ಚರ್ಚೆ ಈ ವಿಷಯಗಳ ಸುತ್ತಲೇ ಗಿರಕಿ ಹೊಡೆಯುತ್ತಿತ್ತು. ದೇಶದ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದ್ದು, ರಾಜ್ಯಗಳು ಸಹ ಪರಸ್ಪರ ಸೌಹಾರ್ದ ಸಂಬAಧ ಹೊಂದಬೇಕು ಎಂದು ಹೇಳಿದರು.

ತೀವ್ರ ಸ್ವರೂಪ ಪಡೆದುಕೊಂಡ

ರಷ್ಯಾ-ಉಕ್ರೇನ್ ನಡುವಿನ ಉದ್ವಿಗ್ನತೆ

ನವದೆಹಲಿ, ಫೆ. ೨೦: ರಷ್ಯಾ ಮತ್ತು ಉಕ್ರೇನ್ ನಡುವಿನ ಉದ್ವಿಗ್ನತೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಯುದ್ಧ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿ ತಮ್ಮ ವಾಸ್ತವ್ಯ ಅನಿವಾರ್ಯವಲ್ಲದಿದ್ದರೆ ಪೂರ್ವ ಯುರೋಪಿಯನ್ ರಾಷ್ಟçವನ್ನು ತಾತ್ಕಾಲಿಕವಾಗಿ ತೊರೆಯುವಂತೆ ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಭಾನುವಾರ ಭಾರತೀಯ ಪ್ರಜೆಗಳಿಗೆ ಸಲಹೆ ನೀಡಿದೆ. ಉಕ್ರೇನ್ ಬಿಕ್ಕಟ್ಟಿಗೆ ಸಂಬAಧಿಸಿದAತೆ ನ್ಯಾಟೋ ದೇಶಗಳು ಮತ್ತು ರಷ್ಯಾದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಂತರ ಭಾರತ ಈ ಸಲಹೆಯನ್ನು ನೀಡಿದೆ. ಉಕ್ರೇನ್‌ನಲ್ಲಿ ಹೆಚ್ಚಿನ ಮಟ್ಟದ ಉದ್ವಿಗ್ನತೆ ಮತ್ತು ಅನಿಶ್ಚಿತತೆಯ ದೃಷ್ಟಿಯಿಂದ, ಅಲ್ಲಿ ಉಳಿದುಕೊಳ್ಳುವುದು ಅನಿವಾರ್ಯವಲ್ಲ ಎಂದು ಪರಿಗಣಿಸಲ್ಪಟ್ಟಿರುವ ಎಲ್ಲಾ ಭಾರತೀಯ ಪ್ರಜೆಗಳು ಮತ್ತು ಎಲ್ಲಾ ಭಾರತೀಯ ವಿದ್ಯಾರ್ಥಿಗಳು ತಾತ್ಕಾಲಿಕವಾಗಿ ಉಕ್ರೇನ್ ತೊರೆಯಲು ಸೂಚಿಸಲಾಗಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ. ಲಭ್ಯವಿರುವ ವಾಣಿಜ್ಯ ವಿಮಾನಗಳು ಮತ್ತು ಉಕ್ರೇನ್‌ನಿಂದ ಕ್ರಮಬದ್ಧ ಮತ್ತು ಸಮಯೋಚಿತ ನಿರ್ಗಮನಕ್ಕಾಗಿ ಚಾರ್ಟರ್ ಫ್ಲೆöÊಟ್‌ಗಳನ್ನು ಪಡೆಯಬಹುದು ಎಂದು ಭಾರತೀಯ ರಾಯಭಾರ ಕಚೇರಿ ಹೇಳಿದೆ. ೨೦೨೦ ರ ಅಧಿಕೃತ ದಾಖಲೆಯ ಪ್ರಕಾರ, ಉಕ್ರೇನ್ ಸಣ್ಣ ದೇಶವಾದರೂ ಹೆಚ್ಚು ಭಾರತೀಯ ಸಮುದಾಯವನ್ನು ಹೊಂದಿದ್ದು, ಈ ದೇಶದಲ್ಲಿ ಸುಮಾರು ೧೮,೦೦೦ ಭಾರತೀಯ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ.

ಸಿಂಧೂ ಜಲ ಒಪ್ಪಂದ:ಪಾಕ್‌ಗೆ ಭಾರತ ನಿಯೋಗ ಭೇಟಿ

ನವದೆಹಲಿ, ಫೆ. ೨೦: ಶಾಶ್ವತ ಸಿಂಧೂ ಆಯೋಗದ ವಾರ್ಷಿಕ ಸಭೆಗಾಗಿ ಭಾರತದಿಂದ ೧೦ ಸದಸ್ಯರ ನಿಯೋಗ ಮಾರ್ಚ್ ೧ ರಿಂದ ೩ ರವರೆಗೆ ಪಾಕಿಸ್ತಾನಕ್ಕೆ ಭೇಟಿ ನೀಡಲಿದೆ. ಜಲಶಕ್ತಿ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಉಭಯ ದೇಶಗಳು ಸಿಂಧೂ ಜಲ ಒಪ್ಪಂದಕ್ಕೆ (ಐಡಬ್ಲ್ಯುಟಿ) ಸಹಿ ಹಾಕಿದ ನಂತರ ಮೊದಲ ಬಾರಿಗೆ ಮೂವರು ಮಹಿಳಾ ಅಧಿಕಾರಿಗಳು ಸಹ ಭಾರತೀಯ ನಿಯೋಗದಲ್ಲಿ ಭಾಗಿಯಾಗಲಿದ್ದಾರೆ. ವಿವಿಧ ವಿಷಯಗಳ ಬಗ್ಗೆ ಭಾರತೀಯ ಆಯುಕ್ತರಿಗೆ ಸಭೆಯಲ್ಲಿ ನಿಯೋಗವು ಸಲಹೆ ನೀಡಲಿದೆ. ಕಳೆದ ವರ್ಷ ಪಾಕಿಸ್ತಾನದ ಕಮಿಷನರ್ ನೇತೃತ್ವದ ನಿಯೋಗವು ವಾರ್ಷಿಕ ಸಭೆಗಾಗಿ ಭಾರತಕ್ಕೆ ಭೇಟಿ ನೀಡಿತ್ತು. ಈ ವಾರ್ಷಿಕ ಸಭೆಯು ಮಾರ್ಚ್ ೧ ರಿಂದ ೩ ರವರೆಗೆ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ನಡೆಯಲಿದೆ ಎಂದು ಸಿಂಧೂ ಜಲಗಳ ಭಾರತೀಯ ಆಯುಕ್ತ ಪ್ರದೀಪ್ ಕುಮಾರ್ ಸಕ್ಸೇನಾ ತಿಳಿಸಿದ್ದಾರೆ. ಭಾರತೀಯ ನಿಯೋಗವು ಕೇಂದ್ರ ಜಲ ಆಯೋಗ, ಕೇಂದ್ರೀಯ ವಿದ್ಯುತ್ ಪ್ರಾಧಿಕಾರ, ರಾಷ್ಟಿçÃಯ ಜಲವಿದ್ಯುತ್ ಶಕ್ತಿ ನಿಗಮ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಕ್ಸೇನಾ ಅವರ ಸಲಹೆಗಾರರನ್ನು ಒಳಗೊಂಡಿರುತ್ತದೆ. ಮತ್ತೊಂದೆಡೆ, ಪಾಕಿಸ್ತಾನದ ತಂಡವನ್ನು ಅಲ್ಲಿನ ಕಮಿಷನರ್ ಸೈಯದ್ ಮೊಹಮ್ಮದ್ ಮೆಹರ್ ಅಲಿ ಶಾ ಮುನ್ನಡೆಸಲಿದ್ದಾರೆ. ಈ ಮಹತ್ವದ ಸಭೆಗಾಗಿ ಭಾರತೀಯ ನಿಯೋಗ ತಾ. ೨೮ ರಂದು ಪಾಕಿಸ್ತಾನಕ್ಕೆ ತೆರಳಲಿದ್ದು, ಮಾರ್ಚ್ ೪ ರಂದು ವಾಪಸಾಗಲಿದೆ. ಸಿಂಧೂ ಜಲ ಒಪ್ಪಂದದ ಪ್ರಕಾರ, ವಿನ್ಯಾಸ ಮತ್ತು ಕಾರ್ಯಾಚರಣೆಗೆ ನಿರ್ದಿಷ್ಟ ಮಾನದಂಡಗಳಿಗೆ ಒಳಪಟ್ಟು ಪಶ್ಚಿಮ ನದಿಗಳ ಮೇಲೆ ನದಿಯ ರನ್-ಆಫ್-ದಿ-ರಿವರ್ ಯೋಜನೆಗಳ ಮೂಲಕ ಜಲವಿದ್ಯುತ್ ಉತ್ಪಾದಿಸುವ ಹಕ್ಕನ್ನು ಭಾರತಕ್ಕೆ ನೀಡಲಾಗಿದೆ.

ರಾಷ್ಟçಧ್ವಜ ನನಗೆ ತಾಯಿ ಸಮಾನ - ಈಶ್ವರಪ್ಪ

ಶಿವಮೊಗ್ಗ, ಫೆ. ೨೦: ರಾಷ್ಟçಧ್ವಜ ಎನ್ನುವುದು ನನಗೆ ತಾಯಿ ಸಮಾನ, ಈ ವಿಚಾರದಲ್ಲಿ ನಾನು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದೇನೆ, ಅದನ್ನು ಯಾರು ಟೀಕೆ ಮಾಡಿದರೂ, ಅಪಮಾನ ಮಾಡಿದರೂ ಅವರು ರಾಷ್ಟçದ್ರೋಹಿಯಾಗುತ್ತಾರೆ. ಈ ಬಗ್ಗೆ ನಾನು ಸ್ಪಷ್ಟವಾಗಿ ಹೇಳಿದ್ದೇನೆ, ಇನ್ನು ನಾನು ಏನೂ ಹೇಳುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿರುವ ಅವರು, ಇಲ್ಲಿ ನಾನು ಒಂದು ಹೇಳಿಕೆ ನೀಡುವುದು, ಅದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಮತ್ತೊಂದು ಮಾತನಾಡುವುದು, ಸಿ.ಟಿ. ರವಿಯವರು, ಮುಖ್ಯಮಂತ್ರಿಗಳು ಮತ್ತೊಂದು ಹೇಳುವುದು ಇದನ್ನೇ ಮಾಡಿಕೊಂಡು ಕುಳಿತುಕೊಂಡರೆ ರಾಜ್ಯದ ಇತರ ಸಮಸ್ಯೆಗಳು, ಕೆಲಸಗಳನ್ನು ಮಾಡುವುದು ಯಾವಾಗ, ಇನ್ನು ನಾನು ಇದರ ಬಗ್ಗೆ ಚರ್ಚೆ ಮಾಡಲು ಹೋಗುವುದಿಲ್ಲ ಎಂದರು. ಕಾಂಗ್ರೆಸ್ ನಾಯಕರು ಅಹೋರಾತ್ರಿ ಧರಣಿ ಮಾಡುತ್ತಿದ್ದಾರೆ, ಮಾಡಿಕೊಳ್ಳಲಿ, ನಾನು ಅವುಗಳಿಗೆಲ್ಲ ಬಗ್ಗುವುದಿಲ್ಲ, ಜಗ್ಗುವುದಿಲ್ಲ, ಕುಗ್ಗುವುದಿಲ್ಲ. ಇನ್ನು ಈ ವಿಷಯದ ಬಗ್ಗೆ ನಾನು ಮಾತನಾಡುವುದಿಲ್ಲ ಎಂದರು. ನಾವು ವಿರೋಧ ಪಕ್ಷದಲ್ಲಿದ್ದಾಗ ರೈತರ, ಜನರ ಸಮಸ್ಯೆಗಳ ಬಗ್ಗೆ ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ ಮಾಡುತ್ತಿದ್ದರೆ, ಕಾಂಗ್ರೆಸ್‌ನವರು ಈ ವಿಷಯ ತೆಗೆದುಕೊಂಡು ಮಾಡುತ್ತಿದ್ದಾರೆ. ಮಾಡಿಕೊಳ್ಳಲಿ ಬಿಡಿ, ದೇಶದ ಹಿತದೃಷ್ಟಿಯಿಂದ ನಾನು ಹೇಳಬೇಕಾದ್ದನ್ನು ಸ್ಪಷ್ಟವಾಗಿ ಹೇಳಿದ್ದೇನೆ ಎಂದರು.

ಡ್ಯಾನ್ಸ್ ಬಾರ್ ಮೇಲೆ ದಾಳಿ-ಮೂವರ ಬಂಧನ

ಬೆAಗಳೂರು, ಫೆ. ೨೦: ಕೋರಮಂಗಲ ೮೦ ಫೀಟ್ ರಸ್ತೆಯಲ್ಲಿರುವ ಪಬ್‌ವೊಂದರ ಮೇಲೆ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ದಾಳಿ ನಡೆಸಿದ್ದು ಅಕ್ರಮ ಡ್ಯಾನ್ಸ್ ಬಾರ್ ನಡೆಸುತ್ತಿದ್ದ ಮೂವರನ್ನು ಬಂಧಿಸಿದ್ದಾರೆ. ಬಾರ್‌ನಲ್ಲಿ ಅಕ್ರಮವಾಗಿ ಮಹಿಳೆಯರನ್ನು ಇರಿಸಿಕೊಂಡು ಪರವಾನಗಿ ನಿಬಂಧನೆಗಳನ್ನು ಉಲ್ಲಂಘಿಸಿ ಡ್ಯಾನ್ಸ್ ಬಾರ್ ನಡೆಸುತ್ತಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಈ ಆಧಾರದ ಮೇಲೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಲಾಗಿದ್ದು, ೨೮ ಮಹಿಳೆಯರನ್ನು ರಕ್ಷಿಸಲಾಗಿದೆ. ದಾಳಿ ವೇಳೆ ಪಬ್‌ನಲ್ಲಿದ್ದ ೨೧ ಮಂದಿ ಗ್ರಾಹಕರಿಂದ ಲಕ್ಷಾಂತರ ರೂಪಾಯಿ ವಶಕ್ಕೆ ಪಡೆದಿದ್ದಾರೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಆರೋಪಿಗಳು ಬಾರ್ಟೆಂಡರ್ ಕೆಲಸಕ್ಕೆ ನೇಮಿಸಿಕೊಳ್ಳುವ ನೆಪದಲ್ಲಿ ಮಹಿಳೆಯರನ್ನು ನಗರಕ್ಕೆ ಕರೆತಂದಿದ್ದು, ನಂತರ ಸುಲಭವಾಗಿ ಹಣ ಗಳಿಸಲು ಬಾರ್‌ನಲ್ಲಿ ಡ್ಯಾನ್ಸ್ ಮಾಡುವಂತೆ ಒತ್ತಾಯಿಸಿದ್ದಾರೆ. ಪಾರ್ಟಿ ಮುಗಿದ ನಂತರ ಆರೋಪಿಗಳು ಮಹಿಳೆಯರನ್ನು ಪಬ್‌ನ ಮೊದಲ ಮತ್ತು ಎರಡನೇ ಮಹಡಿಯಲ್ಲಿನ ಕೊಠಡಿಗಳಲ್ಲಿ ಕೂಡಿ ಹಾಕುತ್ತಿದ್ದರು ಎಂದು ತಿಳಿದುಬಂದಿದೆ. ಬಂಧಿತ ಆರೋಪಿಗಳಿಂದ ೨,೩೨೫ ಟೋಕನ್, ಸೌಂಡ್ ಸಿಸ್ಟಮ್, ಸ್ಕೆöÊಪಿಂಗ್ ಮಿಷನ್ ವಶಪಡಿಸಿಕೊಳ್ಳಲಾಗಿದ್ದು, ಈ ಸಂಬAಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.